ಭೀಮೆಗೆ 1.6 ಲಕ್ಷ ಕ್ಯುಸೆಕ್‌ ನೀರು: ಯಾದಗಿರಿ ದೇಗುಲಗಳು ಜಲಾವೃತ

By Kannadaprabha News  |  First Published Aug 7, 2024, 7:31 AM IST

ಕಲಬುರಗಿ ಜಿಲ್ಲೆಯ ಮಣ್ಣೂರಿನ ವೇದೇಶತೀರ್ಥ ಸಂಸ್ಕೃತ ಪಾಠಶಾಲೆಗೆ ನೀರು ನುಗ್ಗಿದ್ದು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಪ್ರವಾಹ ಬಂದಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಏಳು ನಾಯಿಗಳನ್ನು ರಕ್ಷಿಸಲಾಗಿದೆ.

ಬೆಂಗಳೂರು(ಆ.07):  ಕಾರವಾರ, ಗೋಕರ್ಣ, ಕೋಲಾರ, ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಮಂಗಳವಾರವೂ ಭಾರೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಅಂಕೋಲಾದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. 

ಗೋಕರ್ಣದಲ್ಲಿ ರಥಬೀದಿ ಸೇರಿ ಹಲವು ರಸ್ತೆಗಳು ಜಲಾವೃತಗೊಂಡಿವೆ. ಕೋಲಾರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಉಜನಿ ಜಲಾಶಯದಿಂದ ಭೀಮಾ ನದಿಗೆ 1.60 ಲಕ್ಷ ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಯಾದಗಿರಿ ಸಮೀಪದ ಭೀಮಾ ನದಿಪಾತ್ರದ ವೀರಾಂಜನೇಯ, ಕಂಗಳೇಶ್ವರ ದೇವಸ್ಥಾನಗಳು ಜಲಾವೃತಗೊಂಡಿವೆ. 

Tap to resize

Latest Videos

ಕರ್ನಾಟಕದ ಶೇ. 67ರಷ್ಟು ಕೆರೆಗಳಲ್ಲಿ ಅರ್ಧದಷ್ಟೂ ನೀರಿಲ್ಲ..!

click me!