ಶಾರ್ಟ್ ಸೆರ್ಕ್ಯೂಟ್‌ನಿಂದ ಸ್ನೇಹಂ ಟೇಪ್ ಮ್ಯಾನಿಫೆಕ್ಟರ್ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಆ.6): ಶಾರ್ಟ್ ಸೆರ್ಕ್ಯೂಟ್‌ನಿಂದ ಸ್ನೇಹಂ ಟೇಪ್ ಮ್ಯಾನಿಫೆಕ್ಟರ್ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.
ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ (20) ಸೇರಿದಂತೆ ಕಾರ್ಖಾನೆ ಒಳಗೆ ಹಲವು ಕಾರ್ಮಿಕರು ಸಿಲುಕಿರುವ ಶಂಕಿಸಲಾಗಿದೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.
undefined
ಕರುನಾಡ ರಾಜಕೀಯದ ಕುತಂತ್ರ ಬುದ್ಧಿಯುಳ್ಳ ಶಕುನಿ ಯಾರು? ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು ಯಾರಿಗೆ?
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಜೀವಭಯದಲ್ಲಿ ಹೊರಗೆ ಓಡಿ ಬಂದ ಕಾರ್ಮಿಕರು. ಈ ವೇಳೆ ಓರ್ವ ಲಿಫ್ಟ್‌ನಲ್ಲಿ ಸಿಲುಕಿಹಾಕಿಕೊಂಡಿರುವ ಮಾಹಿತಿ ಬಂದಿದೆ. ಹೊರಹೋದವರ ಬಗ್ಗೆ ಮಾಹಿತಿ ಪಡೆದು ಸಂಪರ್ಕಿಸುತ್ತಿರುವ ಪೊಲೀಸರು. ಸದ್ಯ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಆಗಮಿಸಿದ್ದು, ಸ್ಥಳದಲ್ಲಿ ಐದು ಆಂಬುಲೆನ್ಸ್ ಮೊಕ್ಕಂ ಹೂಡಿವೆ. ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಬೆಂಕಿ ಬಿದ್ದ ವಿಷಯ ಕೇಳಿ ಕಾರ್ಖಾನೆಯ ಹೊರಗೆ ನೆರೆದ ಜನಸ್ತೋಮ ಮುಂಜಾಗೃತಾ ಕ್ರಮವಾಗಿ ವಿದ್ಯುತ್ ಕಡಿತ ಮಾಡಿರುವ ಹೆಸ್ಕಾಂ ಅವಘಡ ವಿಷಯ ತಿಳಿದು ಕಾರ್ಖಾನೆಯತ್ತ ಬರುತ್ತಿರುವ ಜನರು.