ಯಾದಗಿರಿಯಲ್ಲಿ ದಾಖಲೆಯ ಬಿಸಿಲು. 45.6 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲು. ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ಆಸ್ಪತ್ರೆಗೆ ದಾಖಲು
ಯಾದಗಿರಿ (ಮೇ.21): ರಾಜ್ಯದಲ್ಲೇ ಯಾದಗಿರಿಯಲ್ಲಿ ಅತ್ಯಧಿಕ ಬಿಸಿಲು ದಾಖಲೆಯಾಗಿದೆ. ರಣಬಿಸಿಲಿಗೆ ಯಾದಗಿರಿ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದೊಂದು ವಾರದಿಂದ 45.6 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಪ್ರಖರತೆಗೆ ನವಜಾತ ಶಿಶುಗಳು ಅಸ್ವಸ್ಥರಾಗಿದ್ದಾರೆ. ನಿರ್ಜಲೀಕರಣಕ್ಕೆ ಒಳಗಾಗಿ ನವಜಾತ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ನಿತ್ಯವೂ ಆಸ್ಪತ್ರೆಗೆ ಹತ್ತಾರು ಮಕ್ಕಳು ದಾಖಲಾಗುತಿದ್ದಾರೆ. ಯಾದಗಿರಿಯ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳನ್ನು ದಾಖಲಿಸಲಾಗಿದೆ.
ಕಳೆದ 5-6 ದಿನದಿಂದ ಆಸ್ಪತ್ರೆಗೆ ದಾಖಲಾಗುತ್ತಇರುವ ಮಕ್ಕಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಿಸಿಲಿಗೆ ಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದೆ. ಮಾತ್ರವಲ್ಲ ನೀರಿನ ಅಂಶ ಕಡಿಮೆಯಾಗಿ ಮಕ್ಕಳಿಗೆ ಕಿಡ್ನಿ ವೈಫಲ್ಯವೂ ಆಗುತ್ತಿದೆ. 1 ವರ್ಷದಿಂದ 7 ವರ್ಷದೊಳಗಿನ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
undefined
ತಾಪಮಾನಕ್ಕೆ ತತ್ತರಿಸಿದ ಕೊಪ್ಪಳ ಮಂದಿ, ತಂಪಾಗಿಸಲು ಎಳನೀರೂ ಸಿಗ್ತಿಲ್ಲ!
ಆಸ್ಪತ್ರೆಯಲ್ಲಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ. 26 ಕ್ಕೂ ಅಧಿಕ ಶಿಶುಗಳು ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ 15 ಶಿಶುಗಳು ಗುಣಮುಖರಾಗಿದ್ದಾರೆ. ಇನ್ನು ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಂದಿರು ಮಕ್ಕಳನ್ನು ವಿಶೇಷವಾಗಿ ಆರೈಸಿದ್ರೆ ಬೇಗ ಗುಣಮುಖರಾಗ್ತಾರೆ ಎಂದು ವೈದ್ಯೆ ಸಾವಿತ್ರಿ ಹೇಳಿದ್ದಾರೆ.
ಯಾದಗಿರಿಯಲ್ಲಿ ದಾಖಲೆಯ ಬಿಸಿಲು: ಕರ್ನಾಟಕದಲ್ಲೇ ಅತ್ಯಧಿಕ 45.6 ಡಿಗ್ರಿ ತಾಪ..!
ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲು ಯಾದಗಿರಿ ಜಿಲ್ಲೆಯಲ್ಲೇ ದಾಖಲಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದಾಖಲೆಯ ಪ್ರಮಾಣದಲ್ಲಿ ಬಿಸಿಲಿದೆ. ಕಳೆದ ವರ್ಷ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿ 45.6 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗಿದೆ. ವಿಪರೀತ ಪ್ರಮಾಣದ ಬಿಸಿಲು, ಬಿಸಿಗಾಳಿನ ಝಳಕ್ಕೆ ಜನರು ಹೆದರಿ ಹೊರ ಬರಲು ಹಿಂಜರಿಯುತ್ತಿದ್ದಾರೆ.