ಕೆಎಸ್‌ಆರ್‌ಟಿಸಿ ಬಸ್‌ನ ಸೀಟಿಗಾಗಿ ಬಸ್‌ನಲ್ಲೇ ನಾರಿಯರಿಬ್ಬರು ಪರಸ್ಪರ ಜಡೆ ಹಿಡಿದು ಕಾದಾಡಿಕೊಂಡ ಘಟನೆ ತುಮಕೂರು ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.
ತುಮಕೂರು (ಜು.25): ಕೆಎಸ್‌ಆರ್‌ಟಿಸಿ ಬಸ್‌ನ ಸೀಟಿಗಾಗಿ ಬಸ್‌ನಲ್ಲೇ ನಾರಿಯರಿಬ್ಬರು ಪರಸ್ಪರ ಜಡೆ ಹಿಡಿದು ಕಾದಾಡಿಕೊಂಡ ಘಟನೆ ತುಮಕೂರು ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ತುಮಕೂರು ನಿಲ್ದಾಣಕ್ಕೆ ಬಂತು. ಆಗ ಮಹಿಳೆಯೊಬ್ಬರು ವಾಶ್ ರೂಮ್‌ಗೆ ಹೋಗಿದ್ದಾಗ ಅದೇ ಸೀಟಿನಲ್ಲಿ ಮತ್ತೊಬ್ಬ ಮಹಿಳೆ ಕುಳಿತುಕೊಂಡಿದ್ದಾರೆ. ತಾನು ಬೆಂಗಳೂರಿನಿಂದ ಕುಳಿತುಕೊಂಡು ಬಂದಿದ್ದು ಈ ಸೀಟು ನಂದು ನೀವು ಎದ್ದೇಳಿ ಎಂದಿದ್ದಾಗ ಜೋರಾಗಿ ಮಾತಿನ ಚಕಮಕಿ ನಡೆದು ಬಳಿಕ ವಿಕೋಪಕ್ಕೆ ಹೋಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಜಗಳ ಬಿಡಿಸಲು ಹೋದ ಕಂಡಕ್ಟರ್ ಮಾತಿಗೂ ಮಹಿಳೆ ಸೊಪ್ಪು ಹಾಕಲಿಲ್ಲ. ಬಳಿಕ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿ ಎಂದು ಜೋರು ಮಾಡಿದಾಗ ಮಹಿಳೆಯರು ಸುಮ್ಮನಾದರು. ಸುಮಾರು 20 ನಿಮಿಷಗಳ ಕಾಲ ಈ ಪ್ರಹಸನ ನಡೆಯಿತು. ಕಡೆಗೆ ತುಮಕೂರು ನಗರ ಠಾಣೆಗೆ ಹೋಗಿ ಬಸ್‌ನ ನಿರ್ವಾಹಕ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಮಹಿಳೆಯರನ್ನು ಸಮಾಧಾನಪಡಿಸಿದ ಬಳಿಕ ಬಸ್ಸು ಬೆಳಗಾವಿಯತ್ತ ತೆರಳಿತು.
undefined
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ವರುಣಾರ್ಭಟ: ಭೂಕುಸಿತ, ಕಾರು ಪಲ್ಟಿ
ಯುವಜನತೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಉತ್ತಮ ಆರೋಗ್ಯ ಹಾಗೂ ದೈಹಿಕ, ಮಾನಸಿಕ ಸದೃಡತೆಗೆ ಕ್ರೀಡೆಯು ಸಹಕಾರಿಯಾಗಿದ್ದು, ಪಠ್ಯದ ಜೊತೆಗೆ ಕ್ರೀಡೆಯನ್ನು ಮೈಗೂಡಿಸಿಕೊಂಡರೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ತುಮಕೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಲ್ಪತರು ನಗರ ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಸಾಧನೆಗಳಿಸಿರುವ ನಿದರ್ಶನಗಳಿವೆ. ಅದರಂತೆಯೇ ವಿದ್ಯಾರ್ಥಿಗಳು ಓದುವುದು ಮಾತ್ರವಲ್ಲದೇ ಕ್ರೀಡೆಗೂ ಹೆಚ್ಚು ಒತ್ತು ನೀಡಬೇಕು. ಯಾವುದೇ ಕ್ಷೇತ್ರದಲ್ಲಾದರೂ ಗುರಿ ಇದ್ದರೆ ಯಶಸ್ಸು ನಿಮ್ಮದಾಗುತ್ತದೆ. ವಿರಾಮದ ಸಮಯದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಡ ಸಮಾಜದ ಜೊತೆಗೆ ನಮ್ಮ ದೇಹವನ್ನು ಆರೋಗ್ಯದಿಂದ ಇಟ್ಟುಕೊಳ್ಳಲು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪೋಷಕರು ಕ್ರೀಡೆಗಳಿಗೆ ಹೆಚ್ಚು ಪೋ›ತ್ಸಾಹ ನೀಡಬೇಕು.
ಪ್ರವಾಸಕ್ಕೆ ಬಂದು ಪ್ರವಾಹಕ್ಕೆ ಸಿಲುಕಿದ್ದ ಪ್ರವಾಸಿಗರ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಅದರಲ್ಲೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಪಂದ್ಯಾವಳಿಯಲ್ಲಿ ಭಾಗವಹಿಸಿರುವ ತಂಡಗಳಿಗೆ ಶುಭಕೋರಿದರು. ಪ್ರಾಂಶುಪಾಲ ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಯಲ್ಲಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ಪಠ್ಯದ ಜೊತೆ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಮಕೂರು ವಿವಿಯು ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದ್ದು ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳಾ ಮತ್ತು ಪುರುಷ ತಂಡಗಳು ಭಾಗವಹಿಸಿದ್ದು ಎಲ್ಲರಿಗೂ ಶುಭವಾಗಲಿ ಎಂದರು.