ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಚಾಲನೆ ನೀಡಿದ್ದರು. ಬರುವ ಮಹಿಳೆಯರಿಗೆ 200 ರೂಪಾಯಿ ಕೊಡುವ ಆಮಿಷೆ ತೋರಿಸಿ ಕರೆತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಯಚೂರು (ಮಾ.14): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಚಾಲನೆ ನೀಡಿದ್ದರು. ಬರುವ ಮಹಿಳೆಯರಿಗೆ 200 ರೂಪಾಯಿ ಕೊಡುವ ಆಮಿಷೆ ತೋರಿಸಿ ಕರೆತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಳ್ಳಿ ಹಳ್ಳಿಯಿಂದ ಮಹಿಳೆಯರನ್ನು ಕರೆತರಲು ಗ್ರಾಮಪಂಚಾಯ್ತಿ ಸದಸ್ಯರಿಗೆ ಸೂಚಿಸಲಾಗಿತ್ತು. ಗ್ರಾಪಂ ಸದಸ್ಯರು ಸಮಾವೇಶಕ್ಕೆ ಬರುವ ಪ್ರತಿ ಮಹಿಳೆಯರಿಗೆ 200 ರೂಪಾಯಿ ಕೊಡಲಾಗುವುದು ಎಂದು ಹೇಳಿ ಕರೆತಂದಿದ್ದಾರೆ. ಆದರೆ ಸಮಾವೇಶ ಮುಗಿದ ಬಳಿಕ ಹಣಕ್ಕಾಗಿ 200 ರೂಪಾಯಿ ಹಣಕ್ಕಾಗಿ ನೂರಾರು ಬಡ ಮಹಿಳೆಯರು ಬಿಸಲಲ್ಲಿ ಕಾದು ಕುಳಿತ ಘಟನೆ ನಡೆದಿದೆ.
undefined
ರಾಯಚೂರು: ಬೆಳಗ್ಗೆ 11 ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಸಮಾವೇಶ 1 ಗಂಟೆಯಾದ್ರೂ ಸಿಎಂ, ಡಿಸಿಎಂ ಸುಳಿವಿಲ್ಲ!
ಗ್ಯಾರಂಟಿ ಸಮಾವೇಶಕ್ಕೆ ಬಂದರೆ 200 ರೂಪಾಯಿ ಸಿಗುತ್ತದೆ ಎಂಬ ಆಸೆಗೆ ಜಿಲ್ಲೆಗೆ ಬಂದಿದ್ದ ಮಹಿಳೆಯರು. ಬೇಸಗೆ ಬರಗಾಲ ಹಳ್ಳಿಯಲ್ಲೂ ಕೂಲಿ ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಮಹಿಳೆಯರು, ಮನೆಯಲ್ಲಿ ಕೂಡುವ ಬದಲು ಸಮಾವೇಶಕ್ಕೆ ಹೋದರೆ 200 ಸಿಗುತ್ತದೆಂದು ಬಂದಿದ್ದ ಮಹಿಳೆಯರು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಕರೆತಂದ ಗ್ರಾಮಪಂಚಾಯ್ತಿ ಸದಸ್ಯರು ನಾಪತ್ತೆ. ವಾಪಸ್ ಊರಿಗೆ ಹೋಗದೆ ಎರಡುನೂರು ರುಪಾಯಿಗೆ ಫುಟ್‌ಪಾತ್ ಮೇಲೆ ಬಿಸಲಲ್ಲಿ ಕಾದು ಕುಳಿತ ಮಹಿಳೆಯರು.
ಕಾರ್ಯಕ್ರಮಕ್ಕೆ ಬಂದರೆ 200 ಹಣ ಕೊಡ್ತೇವೆ ಅಂತಾ ಪಂಚಾಯ್ತಿ ಮೆಂಬರ್ ಕರಕೊಂಡು ಬಂದ್ರು. ಈಗ ಮೆಂಬರ್ ಕಾಣ್ತಿಲ್ಲ. ಹಣ ಕೊಡಲಿಲ್ಲ ಎಂದು ಸಮಾವೇಶಕ್ಕೆ ಬಂದಿದ್ದ ನರಸಮ್ಮ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ: ಗ್ಯಾರಂಟಿ ಸಮಾವೇಶದಲ್ಲಿ ಡಿಕೆ ಶಿವಕುಮಾರ ಭವಿಷ್ಯ!
ಸಮಾವೇಶದ ವೇಳೆ ಬೈಕ್ ಸವಾರ ಕಿರಿಕ್:
ರಾಯಚೂರಿನಲ್ಲಿ ಡಿಕೆ ಶಿವಕುಮಾರ ಆಗಮನದ ವೇಳೆ ಬೈಕ್ ಸವಾರನೋರ್ವ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಘಟನೆ ನಡೆಯಿತು. ಡಿಕೆ ಶಿವಕುಮಾರ್ ಆಗಮನದ ವೇಳೆ ಕಾನ್ವೆಗೆ ಅಡ್ಡ ಬಂದ ಬೈಕ್. ಪೊಲೀಸ್ ಸಿಬ್ಬಂದಿ ಸೂಚಿಸಿದರೂ ಬೈಕ್ ಚಲಾಯಿಸಿ ಎಡವಟ್ಟು. ಈ ವೇಳೆ ನಡುರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಬೈಕ್ ಸವಾರ. ಮಹಿಳೆ ಕೂರಿಸಿಕೊಂಡು ಹೋಗುತ್ತಿದ್ದ ಬೈಕ್ ಸವಾರನ. ಕಾನ್ವೆ ಬರೋ ವೇಳೆ ಅಡ್ಡ ಬಂದು ರಗಳೆ ಮಾಡಿದ ಬೈಕ್ ಸವಾರ.
ಘೋಷಣೆ ಕೂಗುತ್ತ ಮುಗಿಬಿದ್ದ ಕಾರ್ಯಕರ್ತರು
ಗ್ಯಾರಂಟಿ ಸಮಾವೇಶ ಮುಗಿದು ಡಿಕೆ ಶಿವಕುಮಾರ ಸಮಾವೇಶದಿಂದ ತೆರಳುವ ವೇಳೆ ಜೈಕಾರ ಘೋಷಣೆ ಕೂಗುತ್ತ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು. ಮೈಕ್‌ನಲ್ಲಿ ಸಚಿವ ಎನ್ ಎಸ್ ಬೋಸರಾಜು, ಶಾಸಕ ಬಸನಗೌಡ ದದ್ದಲ ಪರ ಘೋಷಣೆ ಕೂಗಿದರು. ಜೈಕಾರ ಘೋಷಣೆ ಕೂಗುವುದರಲ್ಲಿ ಪೈಪೋಟಿಗಿಳಿದ ಕಾರ್ಯಕರ್ತರು. ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಬೋಸರಾಜು ಪರ ಘೋಷಣೆ. ಘೋಷಣೆ ಕೂಗುವುದರಲ್ಲೂ ಶಕ್ತಿ ಪ್ರದರ್ಶನ ಮಾಡಿದ ಕಾರ್ಯಕರ್ತರು.