
ಕೋಲಾರ (ಜೂ.13) : ಪ್ರಜಾಯಾತ್ರೆ ಸಮಾವೇಶಗಳಲ್ಲಿ ಭಾಷಣ ಮಾಡುವಾಗ ನಮ್ಮ ಪಕ್ಷಕ್ಕೆ ಮತ ನೀಡಿದರೆ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಮತ ಪಡೆದ ಸಿದ್ದರಾಮಯ್ಯನವರು ಈ ಸಾಲ ಮನ್ನಾ ಮಾಡಿದೆ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆಂದು ರೈತ ಸಂಘದ ಮುಖಂಡೆ ನಳಿನಿಗೌಡ ಆರೋಪಿಸಿದರು.
ಇದ್ ಸಂದರ್ಭದಲ್ಲಿ ಹೊಸಮಟ್ನಹಳ್ಳಿ ಮತ್ತು ಮಂಗಸಂದ್ರ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಬೋರ್ಡ ಹಾಕಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಸಿಎಂ ಸಿದ್ದರಾಮಯ್ಯಗೆ ಶುರುವಾಯ್ತು ಮಹಿಳೆಯರಿಂದ ಮತ್ತೊಂದು ತಲೆನೋವು!
ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯನವರೇ, ಕೊಟ್ಟಮಾತಿನಂತೆ ನಡೆಯುವ ನೀವು ಮಹಿಳೆಯರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದಿರಲು ಕಾರಣವೇನು, ಇಡೀ ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಅಹಿಂದ ವರ್ಗದ ಹಾಗೂ ಬಡ ರೈತಾಪಿ ಕುಟುಂಬಗಳ ಹೆಣ್ಣು ಮಕ್ಕಳೇ ಹೊರತು ಶ್ರೀಮಂತರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಸ್ತ್ರೀ ಶಕ್ತಿ ಸಾಲಮನ್ನಾ ಮಾಡದಂತೆ ಕೆಲವು ನಾಯಕರು ಮುಖ್ಯಮಂತ್ರಿಗಳಿಗೆ ಇಲ್ಲಸಲ್ಲದ ದೂರುಗಳನ್ನು ಹೇಳಿ ಸಾಲ ಮನ್ನಾ ಮಾಡದಂತೆ ತಡೆದಿದ್ದಾರೆ. ಇಂತಹ ನಾಯಕರ ವರ್ತನೆ ಇದೇ ರೀತಿ ಮುಂದುವರೆದರೆ ಮಹಿಳೆಯರು ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿದರು
ಪ್ರತಿಭಟನೆಯಲ್ಲಿ ಮಂಗಸಂದ್ರ ಚೌಡಮ್ಮ, ರತ್ನಮ್ಮ, ಚೌಡಮ್ಮ, ನಳಿನಿ, ಪ್ರಮೀಳಾದೇವಿ, ಮಂಜುಳಾ ಕಾವ್ಯ, ಶಕುಂತಲ, ಶಾರದಮ್ಮ, ಸುರೇಖಾ, ಮುನಿಯಮ್ಮ, ವೆಂಕಟಮ್ಮ, ಸುನಿತಾ, ಸುಧಾ, ಅನಿತಾ, ರಾಮಕ್ಕ, ಪಾರ್ವತಿ, ಲಕ್ಷಮ್ಮ, ಜಯಲಕ್ಷ್ಮೇ, ಪದ್ಮಮ್ಮ, ರಾಧ, ಶೋಭ ಇದ್ದರು.
Congress guarantee: ಷರತ್ತುಗಳಿಲ್ಲದೆ ಐದೂ ಯೋಜನೆ ಜಾರಿಗೆ ಬರಲಿ: ಸಿ.ಸಿ. ಪಾಟೀಲ ಆಗ್ರಹ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ