
ದೇಶದಲ್ಲಿ ಅತ್ಯಾ*ಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇರಳದ ತಿರುವಲ್ಲಾದಲ್ಲಿ ಸ್ಪಾ ಉದ್ಯೋಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿತ್ತು. ಈ ಪ್ರಕರಣ ನಿಜಕ್ಕೂ ದೇಶದೆಲ್ಲೆಡೆ ತಲ್ಲಣ ಮೂಡಿಸಿದೆ.
ಸುಮಾರು 10 ಜನರ ಗುಂಪೊಂದು ಸ್ಪಾ ಶಾಪ್ ಒಳಗೆ ನುಗ್ಗಿದೆ. ಯಾರೋ ಸುಪಾರಿ ನೀಡಿದ್ದಾರೆ ಎಂದು ಆ ಗುಂಪು ಹೇಳಿದೆ. ನಂತರ ಆ ರೂಮ್‌ನ್ನು ಲಾಕ್ ಮಾಡಿದ್ದಾರೆ. ಆ ಹುಡುಗಿಯ ಕುತ್ತಿಗೆಗೆ ಚಾಕು ಹಿಡಿದು, ಬೆದರಿಕೆ ಹಾಕಿ ಸುಮಾರು 35 ನಿಮಿಷಗಳ ಕಾಲ ಸಾಮೂಹಿಕ ಅತ್ಯಾ*ಚಾರ ಮಾಡಿದ್ದಾರೆ. ಒಂದು ಸ್ಪಾ ಒಳಗಡೆ ಹೋಗಿ ಏಕಾಏಕಿ ಅತ್ಯಾ*ಚಾರ ಮಾಡೋದು ಅಂದ್ರೆ ಏನರ್ಥ?
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 'ಮರಣ ಸುಬಿನ್' ಎಂದು ಕರೆಸಿಕೊಳ್ಳುವ ಸುಬಿನ್ ಅಲೆಕ್ಸಾಂಡರ್ ಚಾಕೊ (27), ಬರ್ಲಿನ್ ದಾಸ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಆದರೆ ಆ ಪೊಲೀಸರು ಇವರನ್ನು ಹುಡುಕುತ್ತಿದ್ದಾರೆ.
ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಆನಂದ್ ಅವರು ಈ ಘಟನೆಯ ಬಗ್ಗೆ ಮಾತನಾಡಿದ್ದು, “ನಾವು ಅರೆಸ್ಟ್ ಮಾಡಿರುವ ಸುಬಿನ್ ವಿರುದ್ಧ 'ಕಾಪಾ' (KAAPA) ಕಾಯ್ದೆಯನ್ನು ಹೇರಲಾಗುವುದು. ಈತ ಇದಕ್ಕೂ ಮೊದಲು ಆರು ತಿಂಗಳ ಕಾಲ ಇದೇ ಕಾಯ್ದೆಯಡಿ ಜೈಲಿನಲ್ಲಿದ್ದನು. ಆಮೇಲೆ ಮಾರ್ಚ್ 2025ರಲ್ಲಿ ಬಿಡುಗಡೆಯಾಗಿದ್ದನು” ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಸ್ಪಾ ಮಾಲೀಕರು ಯಾವುದೇ ದೂರು ನೀಡಿಲ್ಲ. ಆದರೆ ಸ್ಪೆಷಲ್ ಬ್ರಾಂಚ್ ಮಾಹಿತಿಯ ಮೇರೆಗೆ ಪೊಲೀಸರೇ ಈ ಸ್ಥಳಕ್ಕೆ ಬಂದು, ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತನಿಖೆ ಮಾಡುತ್ತಿದ್ದಾರೆ. ಸ್ಪಾ ಮಾಲೀಕರ ನಡುವೆ ದ್ವೇಷ ಇರಬಹುದು, ಹೀಗಾಗಿ ಈ ರೀತಿ ಮಾಡಿರಬಹುದು ಎಂದು ಅನುಮಾನ ಇದೆಯಂತೆ.
ಸ್ಪಾ ಮಾಲೀಕ ಡಾ. ಸಂಜಯ್ ಅವರು, “ನನ್ನ ಬ್ಯುಸಿನೆಸ್ ಹಾಳು ಮಾಡಬೇಕು ಎಂದು ಮತ್ತೊಬ್ಬ ಸ್ಪಾ ಮಾಲೀಕ ಈ ರೀತಿ ಸುಪಾರಿ ನೀಡಿದ್ದಾನೆ. ಪೊಲೀಸ್, ರೌಡಿಗಳ ನಡುವಿನ ಅಪವಿತ್ರ ಮೈತ್ರಿ ಇದೆ ” ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ