ತಮಿಳುನಾಡಿನ ಊಟಿ ಬಟಾನಿಕಲ್ ಗಾರ್ಡನ್‌ಗೆ ಹೊಂದಿಕೊಂಡಂತಿರುವ ಕರ್ನಾಟಕ ತೋಟಗಾರಿಕೆ ಇಲಾಖೆ ಒಡೆತನದ ಫರ್ನ್ ಹಿಲ್ ಪ್ರದೇಶದ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನ್ನು ಅಂತಾರಾಜ್ಯ ಉದ್ಯಾನವಾಗಿ ಪರಿವರ್ತಿಸಲಾಗಿದೆ. ಊಟಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ರಾಜ್ಯ ತೋಟಗಾರಿಕೆ ಇಲಾಖೆ ಹೊಸ ಯೋಜನೆಗಳನ್ನು ಕೈಗೊಂಡಿದೆ.
ಬೆಂಗಳೂರು(ಜ.01): ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಂತೆ ಊಟಿಯ 'ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನ'ದಲ್ಲಿ ಇದೇ ಮೊದಲ ಬಾರಿಗೆ ಚಳಿಗಾಲದ 'ಊಟಿ ವಿಂಟರ್ ಫ್ಲವರ್ ಫೆಸ್ಟ್ -2025' ಆಚರಿಸಲು ರಾಜ್ಯ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಜೊತೆಗೆ ಸುಮಾರು ₹4.71 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತೂಗುಸೇತುವೆ (ಹ್ಯಾಂಗಿಂಗ್ ಬ್ರಿಡ್ಜ್) ಮತ್ತು ಸಂಗೀತ ನೃತ್ಯ ಕಾರಂಜಿಯನ್ನೂ ಲೋಕಾರ್ಪಣೆ ಮಾಡಲಿದೆ.
ತಮಿಳುನಾಡಿನ ಊಟಿ ಬಟಾನಿಕಲ್ ಗಾರ್ಡನ್‌ಗೆ ಹೊಂದಿಕೊಂಡಂತಿರುವ ಕರ್ನಾಟಕ ತೋಟಗಾರಿಕೆ ಇಲಾಖೆ ಒಡೆತನದ ಫರ್ನ್ ಹಿಲ್ ಪ್ರದೇಶದ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನ್ನು ಅಂತಾರಾಜ್ಯ ಉದ್ಯಾನವಾಗಿ ಪರಿವರ್ತಿಸಲಾಗಿದೆ. ಊಟಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ರಾಜ್ಯ ತೋಟಗಾರಿಕೆ ಇಲಾಖೆ ಹೊಸ ಯೋಜನೆಗಳನ್ನು ಕೈಗೊಂಡಿದೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಮಾದರಿಯಲ್ಲಿ ಊಟಿಯಲ್ಲೂ ಜ.20ರೊಳಗೆ ಐದು ದಿನಗಳ 'ಊಟಿ ವಿಂಟರ್ ಪ್ಲವರ್ ಫೆಸ್ಟ್ -2024' ನಡೆಯಲಿದೆ.
ಲಾಲ್‌ಬಾಗ್‌ನಲ್ಲಿ ನೀರಿಗಾಗಿ ಪರದಾಟ ಶುರು: 5 ಲಕ್ಷ ಲೀಟರ್ ನೀರಿನ ಕೊರತೆ
ತಮಿಳುನಾಡಿನ ಊಟ ಬಟಾನಿಕಲ್ ಗಾರ್ಡನ್‌ನಲ್ಲಿ ಬೇಸಿಗೆ ಯಲ್ಲಿ ಉತ್ಸವ ನಡೆಸಲಾಗುತ್ತದೆ. ನಾವು ಅದಕ್ಕಿಂತ ಭಿನ್ನವಾಗಿ ಮಾಡಬೇಕೆ೦ದು ಚಳಿ ಗಾಲದಲ್ಲಿ ಮಾಡುತ್ತಿದ್ದೇವೆ. ಇದು ಕೇವಲ ಪುಷ್ಪಗಳ ಉತ್ಸವ ಮಾತ್ರವಲ್ಲದೆ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯೂ ಮೇಲೈಸಲಿದೆ.
5 ದಿನ ಉತ್ಸವದಲ್ಲಿ 50ರಿಂದ 70ಕ್ಕೂ ಹೆಚ್ಚು ವಿವಿಧ ಬಗೆಯ ಹೂವಿನ ಪ್ರತಿಕೃತಿಗಳ ಜತೆಗೆ 3 ರಾಜ್ಯಗಳ ಕಲಾವಿದರಿಂದ ನಿರಂತರವಾಗಿ ಸಂಗೀತ, ನೃತ್ಯ ಸೇರಿ ನಾನಾ ಸಾಂಸ್ಕೃತಿಕ ಕಾರ ಕ್ರಮ ಆಯೋಜಿಸಲಾಗುವುದು ಎಂದು ರಾಜ್ಯ ತೋಟಗಾರಿಕೆ ಇಲಾಖೆ (ಪಾರ್ಕ್ಸಸ್ ಆ್ಯಂಡ್ ಗಾರ್ಡನ್ಸ್) ಜಂಟಿ ನಿರ್ದೇಶಕ ಡಾ| ಎಂ ಜಗದೀಶ್ ತಿಳಿಸಿದರು.
ಲಾಲ್‌ಬಾಗ್‌ನಲ್ಲಿ ಆಕರ್ಷಿಸುತ್ತಿದೆ ‘ವಿಶ್ವಗುರು ಬಸವಣ್ಣ’ ಫಲಪುಷ್ಪ ಪ್ರದರ್ಶನ: ಶಾಲಾ ಮಕ್ಕಳಿಗೆ ಉಚಿತ ಪ್ರವೇಶ!
ವಿಧಾನಸೌಧದ ಪುಷ್ಪ ಮಾದರಿ:
'ಊಟಿ ಎಂಟರ್‌ಫೆಸ್ಟ್-2024 ನಲ್ಲಿ 12 ಎಕರೆ ಜಾಗದ ಹಚ್ಚಹಸಿರಿನ ಹುಲ್ಲುಹಾಸಿನ ಮಧ್ಯೆ ಲಕ್ಷಾಂತರ ಹೂವುಗಳನ್ನು ಬಳಸಿ ವಿಧಾನಸೌಧದ ಪುಷ್ಪ ಮಾದರಿ ನಿರ್ಮಿಸಲಾಗುವುದು. ವೇದಿಕೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇರಲಿದ್ದು, ಇದು ಎರಡು ರಾಜ್ಯಗಳ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ.
ಸಂಗೀತ ನೃತ್ಯ ಕಾರಂಜಿ ಲೋಕಾರ್ಪಣೆ:
ದುಬೈ ಮೂಲ ಮಾದರಿಯಲ್ಲಿ 2.55 ಕೋಟಿ ವೆಚ್ಚದಲ್ಲಿ ಸಂಗೀತನೃತ್ಯ ಕಾರಂಜಿಯನ್ನು (ಮ್ಯೂಸಿ ಕಲ್‌ಚೇಸಿಂಗ್ ಫೌಂಟೇನ್)ಸುಮಾರು ಅರ್ಧ ಎಕರೆ ಜಾಗದಲ್ಲಿ 60 ಮೀಟರ್ ಉದ್ದ, 28 ಲಕ್ಷ ಲೀಟರ್ ಸಾಮರ್ಥ್ಯದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದ 'ಫರ್ನ್ ಹಿಲ್ ಗಾರ್ಡನ್'ನಲ್ಲಿ 2.16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 70- 100 ಅಡಿ ಎತ್ತರ ತೂಗು ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.