ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ಇಲ್ಲ, ಕೇರಳ ಸರ್ಕಾರ ಸ್ಪಷ್ಟನೆ

By Suvarna News  |  First Published Jun 28, 2021, 9:19 PM IST

 * ಕಾಸರಗೋಡಿನ ಗ್ರಾಮದ ಕನ್ನಡದ ಹೆಸರು ಬದಲಾವಣೆ ವಿಚಾರ
* ಸ್ಪಷ್ಟನೆ ಕೊಟ್ಟ ಕೇರಳ ಸರ್ಕಾರ
* ಕರ್ನಾಟಕದ ಒತ್ತಾಯ, ಮನವಿಗೆ ಸ್ಪಂದಿಸಿದ ಪಿಣರಾಯಿ ವಿಜಯನ್ ಸರ್ಕಾರ 


ಬೆಂಗಳೂರು, (ಜೂನ್.28): ಕಾಸರಗೋಡಿನಲ್ಲಿರುವ ಬರುವ ಗ್ರಾಮದ ಕನ್ನಡದ ಹೆಸರುಗಳನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.

ಯಾವುದೇ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡುವುದಿಲ್ಲ. ಕಾಸರಗೋಡು, ಮಂಜೇಶ್ವರ ಗ್ರಾಮಗಳ ಹೆಸರನ್ನು ಬದಲಾಯಿಸುವುದಿಲ್ಲ. ಕೇರಳ ಸರ್ಕಾರದ ಬಳಿ ಅಂತಹ ಯಾವುದೇ ಪ್ರಸ್ತಾಪವಿಲ್ಲ. ಗ್ರಾಮಗಳ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎನ್ನುವುದು ವದಂತಿ ಎಂದು ಎಂದಿದೆ.

Tap to resize

Latest Videos

ಗ್ರಾಮಗಳ ಹೆಸರು ಬದಲಾವಣೆ: ಕೇರಳ ಸಿಎಂಗೆ ಪತ್ರ ಬರೆದು 'ಭಾಷಾ ಸಾಮರಸ್ಯ' ಉಳಿಸೋಣ ಎಂದ HDK

ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಹಲವು ಪ್ರಮುಖರು ಕನ್ನಡ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದರು.

ಈ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೇರಳ ಸರ್ಕಾರಕ್ಕೆ ಪತ್ರ ಬರೆದು ಕಾಸರಗೋಡಿನಲ್ಲಿ ಬರುವ ಯಾವುದೇ ಗ್ರಾಮಗಳ ಕನ್ನಡದ ಹೆರುಗಳನ್ನ ಬದಲಿಸದಂತೆ ಮನವಿ ಮಾಡಿದ್ದರು.
 

click me!