ಗ್ರಾಮಗಳ ಹೆಸರು ಬದಲಾವಣೆ: ಕೇರಳ ಸಿಎಂಗೆ ಪತ್ರ ಬರೆದು 'ಭಾಷಾ ಸಾಮರಸ್ಯ' ಉಳಿಸೋಣ ಎಂದ HDK

By Suvarna NewsFirst Published Jun 28, 2021, 7:47 PM IST
Highlights

* ಕಾಸರಗೋಡು ಜಿಲ್ಲೆಯ ಕನ್ನಡದ ಊರುಗಳ ಹೆಸರು ಬದಲಾವಣೆ
* ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದ ಕುಮಾರಸ್ವಾಮಿ
* ಪರಿವರ್ತನೆ ಮಾಡುವ ಪ್ರಕ್ರಿಯೆ ಕೈಬಿಡಿ ಎಂದು ಮನವಿ 

ಬೆಂಗಳೂರು, (ಜೂನ್.28) ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕನ್ನಡದ ಊರುಗಳ ಹೆಸರು ಬದಲಾವಣೆಗೆ ಅಲ್ಲಿನ ಸರ್ಕಾರ ಮೂಂದಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದು, ಕಾಸರಗೋಡಿನ ಕೆಲವು ಗ್ರಾಮಗಳ ಹೆಸರನ್ನು ಮಲಯಾಳಿಗೆ ಪರಿವರ್ತನೆ ಮಾಡುವ ಪ್ರಕ್ರಿಯೆ ಕೈಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಾಸರಗೋಡಿನ ಕೆಲ ಊರುಗಳ ಹೆಸರು ಮಲಯಾಳಂಗೆ: ಕೊನೆಗೂ ಎಚ್ಚೆತ್ತ ಸಿಎಂ 

ಹಲವಾರು ಶತಮಾನಗಳಿಂದ ಆ ಭಾಗದ ಜನರಿಗೆ ಗ್ರಾಮಗಳ, ಮತ್ತು ಅವುಗಳ ಹೆಸರಿನ ಜೊತೆ ಭಾವನಾತ್ಮಕ ನಂಟಿದೆ. ಇದು ಭಾವನೆಗಳ ವಿಚಾರ. ಹಾಗಾಗಿ ಹೆಸರು ಬದಲಾವಣೆ ಮಾಡುವ ಪ್ರಯತ್ನ ಮಾಡಬೇಡಿ. ಗ್ರಾಮದ ಹೆಸರಿನ ಅರ್ಥವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರುವ ಕೇರಳ ಸರ್ಕಾರ ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೆಯೇ ಕಾಪಾಡಬೇಕೆಂದು ಎಂದು ಹೇಳಿದ್ದಾರೆ.

ಇನ್ನು ಪತ್ರ ಬರೆದಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಎಚ್‌ಡಿಕೆ, ಕನ್ನಡದ ಗ್ರಾಮಗಳ ಹೆಸರನ್ನ ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು ಅವರಿಗೆ ಪತ್ರ ಬರೆದಿದ್ದೇನೆ. 

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು ಅವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ. pic.twitter.com/NfnmBkI1CC

— H D Kumaraswamy (@hd_kumaraswamy)

ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ ಎಂದಿದ್ದಾರೆ.

click me!