ವಾಲ್ಮೀಕಿ ನಿಗಮ ಅಕ್ರಮ ತನಿಖೆ ಎಸ್‌ಐಟಿಗೇಕೆ?

By Kannadaprabha News  |  First Published Jun 1, 2024, 11:15 AM IST

ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ?. ಇದರಲ್ಲಿ ಸರ್ಕಾರಕ್ಕೆ ಹಾನಿಯಾಗಬಹುದಾದ ಅಂತಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರವನ್ನು ಸುರಕ್ಷಿತವನ್ನಾಗಿಸಿಕೊಳ್ಳುವ ಜತೆಗೆ ಆಕ್ರಮವಾಗಿ ವರ್ಗಾವಣೆ ಆಗಿರುವ ಹಣವನ್ನು ಪುನರ್ ಸಂಗ್ರಹಿಸಲು ಆರ್ಥಿಕ ಅಪರಾಧಗಳ ವಿಭಾಗದ ಅಡಿ ಎಸ್ಐಟಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ ಎನ್ನಲಾಗಿದೆ. 

ಬೆಂಗಳೂರು(ಜೂ.01): ಮಹರ್ಷಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಅಕ್ರಮ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆಯಿದ್ದರೂ ರಾಜ್ಯ ಸರ್ಕಾರವು ಹಗರಣದ ಆಳ-ಅಗಲದ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ಉಪಯುಕ್ತ ಮಾಹಿತಿ ಸಂಗ್ರಹಿಸಲು ಎಸ್. ಐಟಿ ರಚನೆ ಮಾಡಿ ಆದೇಶಿಸಿದೆ.

ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ?. ಇದರಲ್ಲಿ ಸರ್ಕಾರಕ್ಕೆ ಹಾನಿಯಾಗಬಹುದಾದ ಅಂತಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರವನ್ನು ಸುರಕ್ಷಿತವನ್ನಾಗಿಸಿಕೊಳ್ಳುವ ಜತೆಗೆ ಆಕ್ರಮವಾಗಿ ವರ್ಗಾವಣೆ ಆಗಿರುವ ಹಣವನ್ನು ಪುನರ್ ಸಂಗ್ರಹಿಸಲು ಆರ್ಥಿಕ ಅಪರಾಧಗಳ ವಿಭಾಗದ ಅಡಿ ಎಸ್ಐಟಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ ಎನ್ನಲಾಗಿದೆ. 

Latest Videos

undefined

Breaking: ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ, ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಇನ್ನು ಮೂಲಗಳ ಪ್ರಕಾರ, ಹಿಂದಿನ ಸರ್ಕಾರಗಳಲ್ಲೂ ನಿಗಮದಲ್ಲಿ ಹಣದ ಅಕ್ರಮ ವರ್ಗಾವಣೆ, ದುರ್ಬಳಕೆಗಳು ನಡೆದಿವೆ. ಇದರಲ್ಲಿ ಮಧ್ಯವರ್ತಿಗಳು ವ್ಯವಸ್ಥಿತವಾಗಿ ತೊಡಗಿಸಿ ಕೊಂಡಿದ್ದಾರೆ. ಹಿಂದಿನ ಸರ್ಕಾಗಳಲ್ಲಿ ಸಕ್ರಿಯರಾಗಿದ್ದವರೇ ಹಗರಣದಲ್ಲಿ ಭಾಗವಹಿಸಿರುವ ಸಾಧ್ಯತೆಯಿದೆ. ಹೀಗಾಗಿ ಮೂಲ ಕೆದಕಿ ಹಿಂದಿನ ಅವಧಿಯಲ್ಲಿ ಆಗಿರಬಹುದಾದ ಅಕ್ರಮಗಳನ್ನು ಕೆದಕಿ ಪ್ರತಿ ಅಸ್ತ್ರ ಸಿದ್ದಪಡಿಸಿಕೊಳ್ಳಲು ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

click me!