ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಹೆಚ್ಚಿಸುವ ಕೂಗು ಈಗೇಕೆ?

Published : Oct 22, 2024, 11:09 AM ISTUpdated : Oct 22, 2024, 11:12 AM IST
ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಹೆಚ್ಚಿಸುವ ಕೂಗು ಈಗೇಕೆ?

ಸಾರಾಂಶ

ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಕಾರಣ ಜನ ಸಂಖ್ಯೆ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗಿದೆ. ಆದರೆ ಉತ್ತರ ಭಾರತದ ರಾಜ್ಯಗಳು ದಕ್ಷಿಣಕ್ಕಿಂತ ದೊಡ್ಡವಾಗಿವೆ ಹಾಗೂ ದಕ್ಷಿಣದಷ್ಟು ಜನಸಂಖ್ಯೆ ನಿಯಂತ್ರಣ ಮಾಡಿಲ್ಲ ಎಂಬ ಅಭಿಪ್ರಾಯವಿದೆ.   

ಬೆಂಗಳೂರು(ಅ.22): ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಹಿಂದಿನಿಂದಲೂ ಇದೇ ನಿಯಮ ಜಾರಿಯಲ್ಲಿದೆ. ಆದರೆ ಮುಂಬರುವ ಕ್ಷೇತ್ರ ಮರುವಿಂಗಡಣೆ ದಕ್ಷಿಣದ ರಾಜ್ಯಗಳಲ್ಲಿ ಆತಂಕ ಹುಟ್ಟು ಹಾಕಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ದಕ್ಷಿಣಕ್ಕೇಕೆ ಆತಂಕ? 

ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಕಾರಣ ಜನ ಸಂಖ್ಯೆ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗಿದೆ. ಆದರೆ ಉತ್ತರ ಭಾರತದ ರಾಜ್ಯಗಳು ದಕ್ಷಿಣಕ್ಕಿಂತ ದೊಡ್ಡವಾಗಿವೆ ಹಾಗೂ ದಕ್ಷಿಣದಷ್ಟು ಜನಸಂಖ್ಯೆ ನಿಯಂತ್ರಣ ಮಾಡಿಲ್ಲ ಎಂಬ ಅಭಿಪ್ರಾಯವಿದೆ. ಹೀಗಾಗಿ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ಆದರೆ ಕಮ್ಮಿ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಇಳಿಯಲಿದೆ ಹಾಗೂ ಉತ್ತರ ಭಾರತದ ಕ್ಷೇತ್ರಗಳ ಸಂಖ್ಯೆ ಹೆಚ್ಚಲಿದೆ. ಇದರಿಂದ ಲೋಕಸಭೆಯಲ್ಲಿ ದಕ್ಷಿಣದ ಪ್ರಾತಿನಿಧ್ಯ ಕಡಿಮೆ ಆಗಲಿದೆ ಎಂಬುದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಆತಂಕ. ದ.ಭಾರತದಲ್ಲಿ ಟಿಎಫ್‌ಆ‌ರ್ ಪ್ರಮಾಣ ಭಾರೀ ಇಳಿಕೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನ್ವಯ ಕಳೆದ ಕೆಲ ದಶಕಗಳಿಂದ ದಕ್ಷಿಣ ಭಾರತದಲ್ಲಿ ಟಿಎಫ್‌ ಆರ್ ಪ್ರಮಾಣ ಕಡಿಮೆ ಆಗಿದೆ. ಅಂದರೆ ದಕ್ಷಿಣ ಭಾರತೀಯ ಕುಟುಂಬಗಳಲ್ಲಿ ಮಕ್ಕಳ ಜನನ ಪ್ರಮಾಣ ಇಳಿಕೆಯಾಗಿದೆ. ರಾಷ್ಟ್ರೀಯ ಟಿಎಫ್‌ಆರ್ ಸರಾಸರಿ ಶೇ.2.1 ಇದ್ದರೆ, ದಕ್ಷಿಣ ಭಾರತದಲ್ಲಿ ಅದು ಸರಾಸರಿ 1.6ಕ್ಕಿಂತ ಕಡಿಮೆ ಇದೆ.

ಜನಸಂಖ್ಯೆ ಹೆಚ್ಚಿಸಲು ನಾಯ್ಡು ಬೆನ್ನಲ್ಲೇ ತಮಿಳ್ನಾಡು ಸಿಎಂ ಸ್ಟಾಲಿನ್ ಕೂಡ ಕರೆ, 16 ಮಕ್ಕಳ ಹೆರಲು

ಟಿಎಫ್‌ಆರ್ ಎಂದರೇನು? 

ಟಿಎಫ್‌ಆರ್ ಎಂದರೆ ಟೋಟಲ್ ಫರ್ಟಿಲಿಟಿ ರೇಟ್. ಅಂದರೆ ಸಂತಾನೋತ್ಪತ್ತಿ ಪ್ರಮಾಣ. ಪ್ರತಿ 100 ಕುಟುಂಬಗಳಲ್ಲಿ ಎಷ್ಟು ಮಕ್ಕಳು ಜನಿಸುತ್ತಾರೆ ಎಂಬುದರ ಆಧಾರದಲ್ಲಿ ಇದನ್ನು ಅಂದಾಜು ಮಾಡಲಾಗುತ್ತದೆ. ದೇಶದ ಸರಾಸರಿ ಟಿಎಫ್‌ಆರ್ ಸರಾಸರಿ 2.1 ಇದೆ ಎಂದರೆ ಪ್ರತಿ 100 ಕುಟುಂಬದಲ್ಲಿ 201 ಮಕ್ಕಳು ಜನಿಸುತ್ತಿದಾರೆ. ಇನ್ನು ದಕ್ಷಿಣ ಭಾರತದಲ್ಲಿ ಟಿಎಫ್‌ಆ‌ರ್ ಸರಾಸರಿ 1.6 ಇದೆ ಎಂದರೆ ಪ್ರತಿ 100 ಕುಟುಂಬಗಳಲ್ಲಿ 160 ಮಕ್ಕಳು ಮಾತ್ರ ಜನಿಸುತ್ತಿದ್ದಾರೆ ಎಂದರ್ಥ. ಇದು ಇನ್ನಷ್ಟು ಕುಸಿದರೆ 2047ಕ್ಕೆ ದಕ್ಷಿಣದಲ್ಲಿ ಯುವಕರಿಗಿಂತ ವೃದ್ದರೇ ಹೆಚ್ಚಾಗುವ ಆತಂಕ ಇದೆ.

ದಕ್ಷಿಣ ರಾಜ್ಯಗಳ ಸ್ಥಾನ ಇಳಿಕೆ ಹಿಂದಿ ಭಾಷಿಕ ರಾಜ್ಯಗಳ ಲೋಕಸಭಾ ಸ್ಥಾನ ಏರಿಕೆ 

2026ರಲ್ಲಿ ಕ್ಷೇತ್ರ ಮರುವಿಂಗಡನೆ ಆಗಬಹುದು ಎಂಬ ಲೆಕ್ಕಾಚಾರ ಮತ್ತು ಆಗಿನ ಅಂದಾಜು ಜನಸಂಖ್ಯೆ ಆಧರಿಸಿ ಹೇಳುವುದಾರೆ, ಕ್ಷೇತ್ರ ಮರುವಿಂಗಡನೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡ ದಕ್ಷಿಣದ ರಾಜ್ಯಗಳಿಗೆ ಭಾರೀ ಹೊಡೆತ ಬೀಳಲಿದ್ದರೆ, ಜನಸಂಖ್ಯೆ ನಿಯಂತ್ರಿಸದ ಹಿಂದಿ ಭಾಷಿಕ ರಾಜ್ಯಗಳು ಭಾರೀ ಲಾಭ ಪಡೆದುಕೊ ಳ್ಳಲಿದೆ. ಉದಾಹರಣೆಗೆ ಹಾಲಿ ಲೋಕಸಭೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳ ಪಾಲು ಶೇ.42ರಷ್ಟು ಇದ್ದು, ಅದು ವಿಸ್ತರಿತ ಲೋಕಸಭೆಯಲ್ಲಿ ಶೇ.48ಕ್ಕೆ ಏರಲಿದೆ. ಇನ್ನು ದಕ್ಷಿಣ ಭಾರತದ ರಾಜ್ಯಗಳ ಪಾಲು ಶೇ.24ರಿಂದ ಶೇ.20ಕ್ಕೆ ಕುಸಿಯಲಿದೆ. ಉಳಿದ ರಾಜ್ಯಗಳ ಪಾಲು ಕೂಡಾ ಶೇ.34ರಿಂದ ಶೇ.32ಕ್ಕೆ ಇಳಿಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್