ರೇಪ್‌ ಕೇಸ್‌: ಜಾಮೀನು ಅರ್ಜಿ ವಜಾ, ಬೇಲ್‌ ಪಡೆಯಲು ಪ್ರಜ್ವಲ್‌ ರೇವಣ್ಣ ಅರ್ಹರಲ್ಲ ಎಂದ ಹೈಕೋರ್ಟ್‌!

By Kannadaprabha News  |  First Published Oct 22, 2024, 10:42 AM IST

ಮೇಲ್ನೋಟಕ್ಕೆ ಅರ್ಜಿದಾರರ ಕೃತ್ಯಗಳು ಲಂಪಟ ಹಾಗೂ ಇಂದ್ರಿಯಗಳ ಮೇಲೆ ನಿಯಂತ್ರಣ ಕಳೆದುಕೊಂಡಿರುವುದು ಮತ್ತು ಸ್ವಾಸ್ಥ ಸಮಾಜದ ಬೆನ್ನುಹುರಿಗೆ ಚಳಿ ಹುಟ್ಟಿಸುವುದನ್ನು ಚಿತ್ರಿಸುತ್ತಿದೆ. ಹಾಗಾಗಿ, ಜಾಮೀನು ಪಡೆಯಲು ಪ್ರಜ್ವಲ್ ರೇವಣ್ಣ ಅರ್ಹರಾಗಿಲ್ಲ ಎಂದು ಕಟುವಾಗಿ ನುಡಿದ ಹೈಕೋರ್ಟ್ 


ಬೆಂಗಳೂರು(ಅ.22): ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸಲ್ಲಿಸಿದ್ದ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ಸೋಮವಾರ ಆದೇಶಿಸಿದೆ. 

ಪ್ರಜ್ವಲ್‌ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಸಂಬಂಧ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪ್ರಜ್ವಲ್ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಮೂರು ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮೇಲ್ನೋಟಕ್ಕೆ ಅರ್ಜಿದಾರರ ಕೃತ್ಯಗಳು ಲಂಪಟ ಹಾಗೂ ಇಂದ್ರಿಯಗಳ ಮೇಲೆ ನಿಯಂತ್ರಣ ಕಳೆದುಕೊಂಡಿರುವುದು ಮತ್ತು ಸ್ವಾಸ್ಥ ಸಮಾಜದ ಬೆನ್ನುಹುರಿಗೆ ಚಳಿ ಹುಟ್ಟಿಸುವುದನ್ನು ಚಿತ್ರಿಸುತ್ತಿದೆ. ಹಾಗಾಗಿ, ಜಾಮೀನು ಪಡೆಯಲು ಪ್ರಜ್ವಲ್ ರೇವಣ್ಣ ಅರ್ಹರಾಗಿಲ್ಲ ಎಂದು ಕಟುವಾಗಿ ನುಡಿದಿದ್ದಾರೆ. 

Tap to resize

Latest Videos

undefined

ಪ್ರಜ್ವಲ್ ರೇವಣ್ಣ 'ಸೀರೆ'ಯಸ್ ಕೇಸ್ ಡಿಎನ್‌ಎ ಟೆಸ್ಟ್‌ನಲ್ಲಿ ಸಾಬೀತು!

ಹೈಕೋರ್ಟ್‌ನ ಈ ಆದೇಶದಿಂದ ಪ್ರಜ್ವಲ್ ಅವರು ಈಗ ಜಾಮೀನುಗಾಗಿ ಸುಪ್ರಿಂ ಕೋರ್ಟ್ ಮೊರೆ ಹೋಗಬೇಕಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮನೆಕೆಲಸದಾಕೆ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದರು.

click me!