ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರ್ತಿರೋದು ಸಂತೋಷವಾಗಿದೆ. ಕಾಶ್ಮೀರದ ಜನರಿಗೆ ವಾಸ್ತವ ಸ್ಥಿತಿ ಇನ್ನು ಮನವರಿಕೆಯಾಗಬೇಕಿದೆ ಎಂದು ಸಂಸದ ಡಾ ಮಂಜುನಾಥ ತಿಳಿಸಿದರು.
ರಾಮನಗರ (ಅ.8): ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರ್ತಿರೋದು ಸಂತೋಷವಾಗಿದೆ ಎಂದು ಸಂಸದ ಡಾ ಮಂಜುನಾಥ ತಿಳಿಸಿದರು.
ಹರಿಯಾಣ, ಜಮ್ಮು ಕಾಶ್ಮೀರ ಚುನಾವಣೆ ಸಂಬಂಧ ಇಂದು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಹಲವು ಕೃಷಿ ನೀತಿಗಳ ಬಗ್ಗೆ ಪಂಜಾಬ್, ಹರಿಯಾಣದಲ್ಲಿ ಹೋರಾಟ ನಡೆದಿತ್ತು. ಬಳಿಕ ಕೃಷಿಗೆ ಪ್ರಧಾನಿ ಮೋದಿ ಹೆಚ್ಚು ಒತ್ತು ನೀಡ್ತಿದ್ದಾರೆ. ಬಜೆಟ್ ನಲ್ಲಿ 1.4ಲಕ್ಷ ಕೋಟಿ ಹಣವನ್ನ ಕೃಷಿಗಾಗಿ ಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಹಣ ಬರ್ತಿದೆ. ಇದು ಹರಿಯಾಣ ಗೆಲುವಿಗೆ ಸಹಕಾರಿ ಆಗಿದೆ. ಈ ಗೆಲುವು ನರೇಂದ್ರ ಮೋದಿಯವರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
undefined
ಇನ್ನು ಕಾಶ್ಮೀರದಲ್ಲಿ ಬಿಜೆಪಿ ಸೋತರೂ ಬಲಾಢ್ಯ ಪಕ್ಷವಾಗಿ ಹೊರಹೊಮ್ಮಿದೆ. ಕಾಶ್ಮೀರದಲ್ಲಿ ಇನ್ನೂ ವಾಸ್ತವ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆರ್ಟಿಕಲ್ 370 ರದ್ದಾದ ಬಳಿಕ ಅಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಚುನಾವಣೆ ಕಾಂಗ್ರೆಸ್ ಒಕ್ಕೂಟಕ್ಕೆ ಅಧಿಕಾರ ಸಿಕ್ಕಿರಬಹುದು. ಆದರೆ ಕಾಲಕ್ರಮೇಣ ಮುಂದಿನ ದಿನಗಳಲ್ಲಿ ಅಲ್ಲಿನ ಜನರಿಗೆ ವಾಸ್ತವ ಅರಿವಾದ ಬಳಿಕ ಅಲ್ಲೂ ಬಿಜೆಪಿ ಬೇರೂರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಾನು ಮಾತನಾಡೊಲ್ಲ. ಆ ವಿಚಾರವಾಗಿ ಎರಡು ಪಕ್ಷಗಳ ಹೈಕಮಾಂಡ್ ನಾಯಕರು ಕೂತು ತೀರ್ಮಾನ ಮಾಡುತ್ತಾರೆ. ಅಭ್ಯರ್ಥಿ ಆಯ್ಕೆಗೆ ಸಮನ್ವಯ ಸಮಿತಿ ಮಾಡಲಾಗಿದೆ. ಆದರೆ ಆ ಸಮಿತಿಯಲ್ಲಿ ನಾನು ಇಲ್ಲದಿರುವುದು ಕಾರಣ ನನಗೆ ಆ ವಿಚಾರವಾಗಿ ಹೆಚ್ಚು ಮಾಹಿತಿ ಇಲ್ಲ ಎಂದರು.