ಸಿದ್ದರಾಮಯ್ಯ ಪ್ರಮಾಣ ವಚನ: ಕಂಠೀರವದಲ್ಲಿ ಯಾರಿಗೆಲ್ಲಿ ಪ್ರವೇಶ?

By Kannadaprabha NewsFirst Published May 20, 2023, 8:37 AM IST
Highlights

ಕ್ರೀಡಾಂಗಣದಲ್ಲಿ ಸುಮಾರು 35000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಅವಕಾಶ ನೀಡಿ ಉಳಿದ ಜಾಗದಲ್ಲಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಮ್ಯಾಟ್‌ ಹಾಕಲಾಗುತ್ತಿದ್ದು, ಅಲ್ಲೂ ಕುರ್ಚಿ ವ್ಯವಸ್ಥೆ ಮಾಡುವ ಮೂಲಕ ಸುಮಾರು 1 ಲಕ್ಷ ಮಂದಿಗೆ ವ್ಯವಸ್ಥೆ 

ಬೆಂಗಳೂರು(ಮೇ.20): ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪದಗ್ರಹಣ ಕಾರ್ಯಕ್ರಮ ಜರುಗುವ ಹಿನ್ನೆಲೆಯಲ್ಲಿ ಅತಿಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರು ಕ್ರೀಡಾಂಗಣ ಪ್ರವೇಶಿಸುವ ಕುರಿತು ನಗರ ಪೊಲೀಸರು ಸೂಚನೆಗಳನ್ನು ನೀಡಿದ್ದಾರೆ.

* ಕೆಂಪು ಪಾಸ್‌ ಇದ್ದವರು:

ಕಸ್ತೂರಾಬಾ ರಸ್ತೆ ಮೂಲಕ ಕ್ರೀಡಾಂಗಣದ ಗೇಟ್‌ ಸಂಖ್ಯೆ 1 ಮತ್ತು ರಾಜಾರಾಮ ಮೋಹನರಾಯ್‌ ರಸ್ತೆಯ ಗೇಟ್‌ ಸಂಖ್ಯೆ 5ರ ಮುಖಾಂತರ ವಾಹನಗಳ ಅಧಿಕೃತ ಪಾಸ್‌ನೊಂದಿಗೆ ವಾಹನ ಸಮೇತ ಪ್ರವೇಶ ಪಡೆಯಬಹುದು

*ಹಸಿರು ಪಾಸ್‌ ಇದ್ದವರು:

ರಾಜಾರಾಮ ಮೋಹನರಾಯ್‌ ರಸ್ತೆಯ ಗೇಟ್‌ ಸಂಖ್ಯೆ 5ರ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರ ಕ್ರೀಡಾಂಗಣ ಪ್ರವೇಶಿಸಬೇಕು. ವಾಹನಗಳಿಗೆ ಪ್ರವೇಶವಿಲ್ಲ

ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆ: ಸಿಎಂ, ಡಿಸಿಎಂ ಜತೆ 8 ಜನ ಸಚಿವರ ಪ್ರಮಾಣ ವಚನ

* ಹಳದಿ ಪಾಸ್‌ ಇದ್ದವರು:

ಸಿದ್ದಲಿಂಗಯ್ಯ ವೃತ್ತದ ಗೇಟ್‌ ಸಂಖ್ಯೆ 2ರ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರ ಪ್ರವೇಶಿಸಬೇಕು. ವಾಹನಗಳಿಗೆ ಪ್ರವೇಶವಿಲ್ಲ

* ಯಾವುದೇ ಪಾಸ್‌ ಇಲ್ಲದವರು:

ವಿಠಲ್‌ ಮಲ್ಯ ರಸ್ತೆಯ ಗೇಟ್‌ ಸಂಖ್ಯೆ 3 ಮತ್ತು 4ರ ಮುಖಾಂತರ ಕಾಲ್ನಡಿಗೆಯಲ್ಲಿ ಕ್ರೀಡಾಂಗಣ ಪ್ರವೇಶಿಸಬೇಕು. ಸಾರ್ವಜನಿಕರು ಕಾರ್ಯಕ್ರಮದ ವೇಳೆ ಸಂಯಮದಿಂದ ಇರಬೇಕು. ಸ್ಥಳದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕು.

1 ಲಕ್ಷಕ್ಕೂ ಹೆಚ್ಚು ಜನ ಭಾಗಿ:

ಕ್ರೀಡಾಂಗಣದಲ್ಲಿ ಸುಮಾರು 35000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಅವಕಾಶ ನೀಡಿ ಉಳಿದ ಜಾಗದಲ್ಲಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಮ್ಯಾಟ್‌ ಹಾಕಲಾಗುತ್ತಿದ್ದು, ಅಲ್ಲೂ ಕುರ್ಚಿ ವ್ಯವಸ್ಥೆ ಮಾಡುವ ಮೂಲಕ ಸುಮಾರು 1 ಲಕ್ಷ ಮಂದಿಗೆ ವ್ಯವಸ್ಥೆ ಕಲ್ಪಿಸುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.

ಬೆಂಗಳೂರು: ಸಿದ್ದು ಪದಗ್ರಹಣಕ್ಕೆ ಪೊಲೀಸ್‌ ಸರ್ಪಗಾವಲು..!

3,000ಕ್ಕೂ ಅಧಿಕ ಪೊಲೀಸರ ನಿಯೋಜನೆ:

ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಅಂದಾಜಿಗಿಂತ ಹೆಚ್ಚು ಮಂದಿ ಆಗಮಿಸಿದರೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಂಗಣದ ಹೊರ ಭಾಗದಲ್ಲಿ ಟಿವಿ ಪರದೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಗೃಹರಕ್ಷಕ ದಳ, ಸಂಚಾರಿ ಪೊಲಸ್‌ ಸಿಬ್ಬಂದಿ ಸೇರಿ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಭದ್ರತೆಗೆ ನಿಯೋಜಿಸಲಾಗಿದೆ. ವಿಶೇಷ ಪೊಲೀಸ್‌ ಆಯುಕ್ತ ಸಲೀಂ, ಕೇಂದ್ರ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಮೆಟಲ್‌ ಡಿಟೆಕ್ಟರ್‌ನಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಿಪಕ್ಷಗಳ ಒಗ್ಗಟ್ಟಿಗೆ ಕರ್ನಾಟಕ ವೇದಿಕೆ?

ಬೆಂಗಳೂರು: ಸಿದ್ದರಾಮಯ್ಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹ್ಲೋಟ್‌, ಭೂಪೇಶ್‌ ಬಾಘೇಲ್‌, ನಿತೀಶ್‌ ಕುಮಾರ್‌, ಸುಖ್ವಿಂದರ್‌ ಸಿಂಗ್‌ ಸುಖು, ಎನ್‌.ರಂಗಸ್ವಾಮಿ, ಎಂ.ಕೆ.ಸ್ಟಾಲಿನ್‌, ಹೇಮಂತ್‌ ಸೊರೇನ್‌ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಸಮಾರಂಭವು ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗೂಡುವ ವೇದಿಕೆ ಎಂದು ಹೇಳಲಾಗುತ್ತಿದೆ.

click me!