Latest Videos

ಡಿಕೆಶಿಗೆ ಯೋಗವಿದೆ, ಸಿಎಂ ಪಟ್ಟ ಖಚಿತ: ಜ್ಯೋತಿಷಿ ದ್ವಾರಕಾನಾಥ್‌

By Kannadaprabha NewsFirst Published May 20, 2023, 7:00 AM IST
Highlights

ರಾಜ್ಯದಲ್ಲಿ ಕಾಂಗ್ರೆಸ್‌ ಜಯಗಳಿಸುತ್ತದೆ ಎಂದು ಹಿಂದೆಯೇ ಹೇಳಿದ್ದೆ. ಜನರು ಬಹುಮತ ನೀಡಿದ್ದು, ನಿಸ್ವಾರ್ಥದಿಂದ ಜನಸೇವೆ ಮಾಡಲು ಕಾಂಗ್ರೆಸ್‌ ಶಾಸಕರು ಮುಂದಾಗಬೇಕು: ದ್ವಾರಕಾನಾಥ್‌ 

ಬೆಂಗಳೂರು(ಮೇ.20): ಡಿ.ಕೆ. ಶಿವಕುಮಾರ್‌ ಅವರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗವಿದೆ. ಅವರಿಗೆ ಅಧಿಕಾರ ತಪ್ಪಿ ಹೋಗುವ ಮಾತೇ ಇಲ್ಲ ಎಂದು ಜ್ಯೋತಿಷಿ ದ್ವಾರಕಾನಾಥ್‌ ಹೇಳಿದರು.

ತಮ್ಮ ನಿವಾಸಕ್ಕೆ ಬಂದ ಎಐಸಿಸಿ ವೀಕ್ಷಕ ಸುಶೀಲ್‌ ಕುಮಾರ್‌ ಶಿಂಧೆ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ತಪ್ಪಿ ಹೋಗುವ ಮಾತೇ ಇಲ್ಲ. ಮುಂದೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಮುಂದಿನ 2.5 ವರ್ಷದ ನಂತರ ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರದ ಯೋಗವಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತಾರೆ’ ಎಂದರು.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

‘ರಾಜ್ಯದಲ್ಲಿ ಕಾಂಗ್ರೆಸ್‌ ಜಯಗಳಿಸುತ್ತದೆ ಎಂದು ಹಿಂದೆಯೇ ಹೇಳಿದ್ದೆ. ಜನರು ಬಹುಮತ ನೀಡಿದ್ದು, ನಿಸ್ವಾರ್ಥದಿಂದ ಜನಸೇವೆ ಮಾಡಲು ಕಾಂಗ್ರೆಸ್‌ ಶಾಸಕರು ಮುಂದಾಗಬೇಕು’ ಎಂದರು. ದ್ವಾರಕಾನಾಥ್‌ ಅವರ ಪುತ್ರ ಡಾ. ಶಂಕರ್‌ ಗುಹಾ ಇತರರಿದ್ದರು.

click me!