ಆಲಮಟ್ಟಿ ಡ್ಯಾಂನಿಂದ ಲಾಭ ಯಾವಾಗ? ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ?

Published : Jun 16, 2025, 04:01 AM IST
Alamatti Dam

ಸಾರಾಂಶ

 ಆಲಮಟ್ಟಿ ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ? ಗೊತ್ತಿದೆಯಾ ಅದೊಂದು ಕಾಂಕ್ರಿಟ್ ಡ್ಯಾಮ್. ಅದರಲ್ಲೂ ತಗ್ಗು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ರೈತರು ಅದರ ಲಾಭ ಪಡೆಯುವುದು ಯಾವಾಗ ? ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪ್ರಶ್ನಿಸಿದರು.

ವಿಜಯಪುರ : ಆಲಮಟ್ಟಿ ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ? ಗೊತ್ತಿದೆಯಾ ಅದೊಂದು ಕಾಂಕ್ರಿಟ್ ಡ್ಯಾಮ್. ಅದರಲ್ಲೂ ತಗ್ಗು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ರೈತರು ಅದರ ಲಾಭ ಪಡೆಯುವುದು ಯಾವಾಗ ? ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಖ್ಯಾತೆ ನೆಪ ಹೇಳಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆಲಮಟ್ಟಿ ಜಲಾಶಯದಲ್ಲಿ ೫೨೪ ಮೀಟರ್‌ಗೆ ನೀರು ನಿಲ್ಲಿಸುವ ಕೆಲಸವನ್ನು ಇಲ್ಲಿಗೆ ನಿಲ್ಲಿಸಬಾರದು. ನ್ಯಾಯಾಧಿಕರಣದ ತೀರ್ಪಿನಂತೆ ಜಲಾಶಯದಲ್ಲಿ ನೀರು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲಿಸಲು ಪ್ರಾರಂಭಿಸಿದರೆ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಆಧಾರ ರಹಿತ ಖ್ಯಾತೆ ತೆಗೆದಿದೆ. ನ್ಯಾಯಾಧೀಕರಣದ ಆದೇಶದಂತೆ ೫೨೪ ಮೀಟರ್‌ಗೆ ನೀರು ನಿಲ್ಲಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಕೃಷ್ಣಾ ನದಿಯಲ್ಲಿ ಮಹಾಪುರ ಬಂದಾಗ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸಲು ಸಾಧ್ಯವೇ ? ಬೇರೆ ಯಾವುದೇ ಜಲಾಶಯವಿರಲಿ ಮಹಾಪೂರ ಬಂದಂತಹ ಸಂದರ್ಭದಲ್ಲಿ ನೀರು ಸಂಗ್ರಹಿಸುವುದಿಲ್ಲ. ನಂತರ ಮಳೆ ಕಡಿಮೆಯಾಗುತ್ತಿದ್ದಂತೆ ನೀರು ನಿಲ್ಲಿಸಲು ಪ್ರಾರಂಭಿಸಲಾಗುತ್ತದೆ. ಮಹಾರಾಷ್ಟ್ರ ಸರ್ಕಾರಕ್ಕೆ ಅಷ್ಟು ಅರ್ಥವಾಗುವುದಿಲ್ಲವೇ ? ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃಷ್ಣಾ ಸಂತ್ರಸ್ತರ ನೋವು ಅರ್ಥವಾಗುವುದು ಯಾವಾಗ? ಚುನಾವಣೆಯಲ್ಲಿ ನಾವು ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಹಣ ನೀಡುತ್ತೇವೆ ಎಂದು ಹೇಳಿ ಈಗ ಮಾತು ಮರೆತು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಂಡ ಸಂತ್ರಸ್ತರು ಬೀದಿಪಾಲಾಗಿ ಮನೆ-ಮಠ ಮಾರಿಕೊಂಡು ಬಯಲಲ್ಲಿ ನಿಂತಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನಸಿಂಗ್ ಸರ್ಕಾರ ರೈತರ ಭೂಮಿಗೆ ನಾಲ್ಕು ಪಟ್ಟು ಪರಿಹಾರ ನೀಡುವುದಾಗಿ ಕಾಯ್ದೆ ಜಾರಿಗೊಳಿಸಿತು. ಇದು ನಿಜಕ್ಕೂ ಅನ್ಯಾಯದಿಂದ ಕೂಡಿದೆ. ಭೂಮಿ ಬೆಲೆಗಳು ಹಳ್ಳಿಯಿಂದ ಹಳ್ಳಿಗೆ ಬೇರೆ-ಬೇರೆ ರೀತಿಯಾಗಿದ್ದು, ಪರಿಹಾರವೂ ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ. ಆಗಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪನ್ನು ಇಂದು ಕೃಷ್ಣಾ ಸಂತ್ರಸ್ತರು ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸರ್ಕಾರಕ್ಕೆ ₹ 1 ಲಕ್ಷ ಕೋಟಿ ಹಣ ಬೇಕು. ಗ್ಯಾರಂಟಿಯಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಬರಿದಾಗಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಇನ್ನೂ ವಿಳಂಭ ಮಾಡುವುದನ್ನು ರೈತರು ಸಹಿಸುವುದಿಲ್ಲ. ದಿ.ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಗೆ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿದ್ದರು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಬಾಂಡ್‌ಗಳನ್ನು ಮಾರಾಟ ಮಾಡಿ ಯೋಜನೆ ಪೂರ್ಣಗೊಳಿಸಲಿ ಎಂದು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜ್ಯೋಶಿ ಸೇರಿದಂತೆ ಮುಂತಾದವರು ಇದ್ದರು

ಕೋಟ್‌ಕೃಷ್ಣಾನದಿಯಲ್ಲಿ ಮಹಾಪುರ ಬಂದಾಗ ಆಲಮಟ್ಟಿಯಲ್ಲಿ ನೀರು ಸಂಗ್ರಹಿಸಲು ಸಾಧ್ಯವೇ ? ಯಾವುದೇ ಜಲಾಶಯದಲ್ಲಿಯೂ ಮಹಾಪೂರದ ಸಂದರ್ಭದಲ್ಲಿ ನೀರು ಸಂಗ್ರಹಿಸುವುದಿಲ್ಲ. ಮಳೆ ಕಡಿಮೆಯಾಗುತ್ತಿದ್ದಂತೆ ನೀರು ನಿಲ್ಲಿಸಲು ಪ್ರಾರಂಭಿಸಲಾಗುತ್ತದೆ. ಮಹಾರಾಷ್ಟ್ರ ಸರ್ಕಾರಕ್ಕೆ ಅಷ್ಟು ಅರ್ಥವಾಗುವುದಿಲ್ಲವೇ ? ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃಷ್ಣಾ ಸಂತ್ರಸ್ತರ ನೋವು ಅರ್ಥವಾಗುವುದು ಯಾವಾಗ? ಚುನಾವಣೆಯಲ್ಲಿ ನಾವು ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಹಣ ನೀಡುತ್ತೇವೆ ಎಂದು ಹೇಳಿ ಈಗ ಮಾತು ಮರೆತು ಬಿಟ್ಟಿದೆ.ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ಹೋಟೆಲ್‌ಗಳಲ್ಲಿ 10 ರೂ ಕಾಫಿ ಹೀರುತ್ತಾ ಕೂತರೆ ಗ್ರಾಹಕರಿಗೆ ಬೀಳಲಿದೆ 1000 ರೂ.ವರೆಗೆ ದಂಡ!
ಬಾರ್ ಲೈಸೆನ್ಸ್‌ಗೆ ರಾಕೆಟ್ ವೇಗದಲ್ಲಿ ಕೆಲಸ ಮಾಡಿದ ಸರ್ಕಾರ; ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ ನವೀಕರಣ!