ಪಟ್ಟಣದ ಹೃದಯ ಭಾಗವಾದ ಹಳೆ ಪಿ.ಬಿ ರಸ್ತೆಯ ಮಧ್ಯೆ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣವಾಗದೆ ಇರುವುದು ರಾಯಣ್ಣ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆನಂದ ಭಮ್ಮಣ್ಣವರ
ಸಂಕೇಶ್ವರ (ಜು.13) : ಪಟ್ಟಣದ ಹೃದಯ ಭಾಗವಾದ ಹಳೆ ಪಿ.ಬಿ ರಸ್ತೆಯ ಮಧ್ಯೆ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣವಾಗದೆ ಇರುವುದು ರಾಯಣ್ಣ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಾರಾತುರಿಯಲ್ಲಿ ರಾತ್ರೋರಾತ್ರಿ ಪ್ಲಾಸ್ಟಿಕ್‌ದಿಂದ ಮುಚ್ಚಿದ ಕಂಚಿನ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ರಾಯಣ್ಣ ವೃತ್ತದಲ್ಲಿ ಅಳವಡಿಸಲಾಗಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಮುಚ್ಚಿದ ರಾಯಣ್ಣ ಮೂರ್ತಿ ಉದ್ಘಾಟನೆ ಯಾವಾಗ ಎಂಬ ಪ್ರಶ್ನೆ ರಾಯಣ್ಣ ಅಭಿಮಾನಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ.
ಬೆಳಗಾವಿ: ದುಷ್ಕರ್ಮಿಗಳಿಂದ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನ
ದೇಶ ಭಕ್ತ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಳೆ ಪಿ.ಬಿ ರಸ್ತೆಯಲ್ಲಿ ಪ್ಲಾಸ್ಟಿಕ್‌ದಿಂದ ಮುಚ್ಚಿ ಅಳವಡಿಸಲಾಗಿದೆ. ತರಾತುರಿಯಲ್ಲಿ ರಾಯಣ್ಣ ಮೂರ್ತಿ ರಾತ್ರೋರಾತ್ರಿ ಅಳವಡಿಸುವ ಅವಸರ ಯಾಕಿತ್ತು ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಅಳವಡಿಸಿದರು ಪುತ್ಥಳಿ ಅನಾವರಣ ಮಾಡದೆ ಮುಚ್ಚಿ ನಿಲ್ಲಿಸಿರುವುದು ರಾಷ್ಟ್ರಪ್ರೇಮಿ ರಾಯಣ್ಣ ಅವಮಾನ ಮಾಡಿದಂತಾಗಿದೆ.
ಕನ್ನಡ ಪರ ಸಂಘಟನೆಗಳ ಅಸಮಾಧಾನ:
ಸಂಕೇಶ್ವರ ಪಟ್ಟಣದ ಹಳೆ ಪಿ.ಬಿ ರಸ್ತೆ ಮಧ್ಯದಲ್ಲಿ ಉದ್ಘಾಟನೆಯಾಗದೆ ನಿಂತಿರುವ ಕಂಚಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದ ಪಟ್ಟಣದ ಕನ್ನಡ ಪರ ಸಂಘಟನೆಗಳನ್ನು ನಿರ್ಲಕ್ಷ್ಯಿಸಿರುವುದು ಕನ್ನಡ ಪರ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರೋರಾತ್ರಿ ಪುತ್ಥಳಿ ನಿಲ್ಲಿಸಿರುವುದು ಯಾಕೆ? ಕನ್ನಡ ನಾಡಿನ ವೀರ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಒಂದು ಸಮುದಾಯಕ್ಕೆ ಸಿಮಿತ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕನ್ನಡಪರ ಸಂಘಟನೆ ಮುಖಂಡರದ್ದಾಗಿದೆ.
ಉದ್ಘಾಟನಾ ಭಾಗ್ಯ ಯಾವಾಗ?
ಗಡಿ ಭಾಗ ಸಂಕೇಶ್ವರದಲ್ಲಿ ಕನ್ನಡ ಪರ ಸಂಘಟನೆಯ ಹಾಗೂ ರಾಯಣ್ಣ ಅಭಿಮಾನಿಗಳಿಗೆ ಪಟ್ಟಣದ ರಾಯಣ್ಣ ವೃತ್ತ ಹಾಗೂ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಸಿದ್ಧವಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಆದರೆ, ಎಲ್ಲ ಕಾಮಗಾರಿ ಪೂರ್ಣಗೊಂಡರು ರಾಯಣ್ಣ ಪುತ್ಥಳಿ ಪ್ಲಾಸ್ಟಿಕ್‌ದಿಂದ ಮುಚ್ಚಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಮೂಡಿದೆ. ದೇಶ ಭಕ್ತಿ, ತ್ಯಾಗ ಬಲಿದಾನದ ಸಂಕೇತವಾದ ದೇಶ ಭಕ್ತ ರಾಯಣ್ಣ ಪುತ್ಥಳಿಗೆ ಉದ್ಘಾಟನಾ ಭಾಗ್ಯ ಬರಲಿ ಎಂದು ಇಲ್ಲಿನ ಕನ್ನಡಿಗರ ಒತ್ತಾಯವಾಗಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರಕ್ಕೆ ಶಾಸಕ ಸಿಟಿ ರವಿ ಆಪ್ತನಿಗೆ ಘೇರಾವ್: ಸ್ಥಳದಿಂದ ಕಾಲ್ಕಿತ್ತು ಬಚಾವ್
ಕನ್ನಡಪರ ಹೋರಾಟಗಾರ ಫಲವಾಗಿ ಪಟ್ಟಣದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮಾಜಿ ವೃತ್ತಗಳು ಪುರಸಭೆಯಿಂದ ಠರಾವ ಮೂಲಕ ಅಧಿಕೃತಗೊಳಿಸಲಾಗಿದೆ. ಆದರೆ, ದೇಶ ಭಕ್ತ ರಾಯಣ್ಣನ ಪುತ್ಥಳಿ ರಾತ್ರೋರಾತ್ರಿ ಕನ್ನಡ ಪರ ಸಂಘಟನೆಗಳನ್ನು ಕಡೆಗಣಿಸಿ ಅಳವಡಿಸಲಾಗಿದೆ. ಆದಷ್ಟುಬೇಗ ರಾಯಣ್ಣ ಪುತ್ಥಳಿ ಅನಾವರಣ ಆಗಬೇಕಿದ್ದು, ಎಲ್ಲರನ್ನು ಗಣನೆಗೆ ತೆಗೆದುಕೊಂಡು ರಾಯಣ್ಣ ಪುತ್ಥಳಿ ಅನಾವರಣ ಮಾಡಬೇಕು.
ದಿಲೀಪ ಹೊಸಮನಿ, ಕನ್ನಡಪರ ಸಂಘಟನೆಯ ಮುಖಂಡರು.