NABARD: ಪಿಎಂ ಸ್ವನಿಧಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ

By Kannadaprabha News  |  First Published Jul 13, 2023, 1:01 PM IST

  ಉಡುಪಿ ಜಿಲ್ಲೆ  ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ರಾಜ್ಯದಲ್ಲೇ ಪ್ರಥಮ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ನಬಾರ್ಡ್‌ ಅಧಿಕಾರಿ ಸಂಗೀತ ಕಾರ್ಥಾ ಹೇಳಿದ್ದಾರೆ.


ಉಡುಪಿ (ಜು.13) :  ಉಡುಪಿ ಜಿಲ್ಲೆ  ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ರಾಜ್ಯದಲ್ಲೇ ಪ್ರಥಮ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ನಬಾರ್ಡ್‌ ಅಧಿಕಾರಿ ಸಂಗೀತ ಕಾರ್ಥಾ ಹೇಳಿದ್ದಾರೆ.

ಅವರು ಮಂಗಳವಾರ ರಜತಾದ್ರಿಯ ಜಿ.ಪಂ.ನ ಡಾ.ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು.

Tap to resize

Latest Videos

undefined

 

'ರೈತರು ಸಾಲ ಕೇಳಿದ್ರೆ ಸಿಬಿಲ್‌ ಸ್ಕೋರ್‌ ನೋಡದಿರಿ': ಸಂಸದ ಡಾ.ಜಿಎಂ ಸಿದ್ದೇಶ್ವರ್ ಸೂಚನೆ

ಕೆನರಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕಿ ಶೀಬಾ ಸೆಹಜಾನ್‌ ಮಾತನಾಡಿ, ಉಡುಪಿ ಜಿಲ್ಲೆ ಪಿಎಂ ಸ್ವನಿಧಿ ಯೋಜನೆಯಲ್ಲಿ ಶೇ. 133 ಸಾಧನೆ ಮಾಡಿದ್ದು, 3,049 ಮಂದಿಗೆ ಸಾಲ ವಿತರಣೆಯ ಗುರಿ ಮೀರಿ 4,046 ಮಂದಿಗೆ ಸಾಲ ವಿತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ಶೇ.267 ಸಾಧನೆ ಮಾಡಿದ್ದು, 180 ಮಂದಿಗೆ ಸಾಲ ವಿತರಣೆಯ ಗುರಿ ಮೀರಿ 481 ಮಂದಿಗೆ ಸಾಲ ವಿತರಣೆ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಅಸಮಾಧಾನ: ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಒಇ ಪ್ರಸನ್ನ ಎಚ್‌. ಅವರು, ಜಿಲ್ಲೆ ಇನ್ನಷ್ಟುಸಾಧನೆ ಮಾಡುವುದಕ್ಕೆ ಬ್ಯಾಂಕುಗಳು ರೈತರ ಆರ್ಥಿಕ ಅಭಿವೃದ್ಧಿಗೆ ಮತ್ತು ಕೃಷಿ ಸಾಲದ ಪ್ರಗತಿಗೆ ಆದ್ಯತೆ ನೀಡಬೇಕು. ಅದಕ್ಕೆ ರೈತರು ಸಲ್ಲಿಸುವ ಸಾಲದ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರ ಸಾಲ ಮಂಜೂರು ಮಾಡಬೇಕು ಎಂದ ಸಿಇಓ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಕೃಷಿ ಮೂಲಭೂತ ಸೌಕರ್ಯಗಳಿಗೆ ನಿಗಧಿಪಡಿಸಿದ್ದ 311.39 ಕೋಟಿ ರು. ಆರ್ಥಿಕ ಗುರಿಯಲ್ಲಿ ಅತ್ಯಂತ ಕಡಿಮೆ ಸಾಧನೆ ತೋರಿರುವ ಬ್ಯಾಂಕ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಿಸವ್‌ರ್‍ ಬ್ಯಾಂಕ್‌ನ ಮುರಳಿ ಮೋಹನ್‌ ಪಾಟಕ್‌, ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಲೀಡ್‌ ಬ್ಯಾಂಕ್‌ ಮೆನೇಜರ್‌ ಪಿ.ಎಂ. ಪಿಂಜಾರ ಸ್ವಾಗತಿಸಿದರು.

ಸಿಬಿಲ್‌ ಸ್ಕೋರ್‌ ಕಡಿಮೆ ಕಾರಣ ನೀಡಿ ಶೈಕ್ಷಣಿಕ ಸಾಲ ರಿಜೆಕ್ಟ್‌ ಮಾಡುವಂತಿಲ್ಲ: ಕೇರಳ ಹೈಕೋರ್ಟ್‌!

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆ ಅರ್ಜಿಗಳನ್ನು ಮಂಜೂರು ಮಾಡಿದ ಬ್ಯಾಂಕ್‌ಗೆ ಅಭಿನಂದಿಸಲಾಯಿತು.

click me!