
ಬೆಂಗಳೂರು(ಏ.30): ಹೊಂಗಸಂದ್ರ ಹಾಗೂ ಪಾದರಾಯನಪುರ ಸೋಂಕು ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳ ಸ್ಫೋಟದ ಆತಂಕದಲ್ಲಿದ್ದ ರಾಜಧಾನಿ ಬೆಂಗಳೂರು ತಕ್ಕಮಟ್ಟಿಗೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ. ಕಳೆದ ಎರಡು ದಿನಗಳಲ್ಲಿ ಏಕಾಏಕಿ 14 ಸೋಂಕು ಪ್ರಕರಣಗಳನ್ನು ಕಂಡ ಕಲಬುರಗಿ ಇದೀಗ ಕೊರೋನಾತಂಕಕ್ಕೆ ಸಿಲುಕಿದೆ. ಒಟ್ಟು ಸೋಂಕಿತರ ಸಂಖ್ಯೆ 52 ಮುಟ್ಟುವ ಮೂಲಕ ಕಲಬುರಗಿ ಆತಂಕಕ್ಕೆ ಒಳಗಾಗಿದೆ.
ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗಬಹುದು ಎಂಬ ಆತಂಕ ರಾಜ್ಯದಲ್ಲಿ ಮನೆ ಮಾಡಿತ್ತು. ಆದರೆ, ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರಿನಲ್ಲಿ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿವೆ. ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ರಾರಯಂಡಮ್ ಪರೀಕ್ಷೆ ನಡೆಸಿದರೂ ಒಂದೇ ಒಂದು ಪ್ರಕರಣ ಮಾತ್ರ ದೃಢಪಟ್ಟಿದೆ. ಬುಧವಾರವೂ ಬೆಂಗಳೂರಿನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಉದ್ಯಾನನಗರಿ ನಿಟ್ಟಿಸಿರು ಬಿಟ್ಟಿದೆ.
ಆದರೆ, ದೇಶದಲ್ಲೇ ಕೊರೋನಾ ಸೋಂಕಿಗೆ ಮೊದಲ ಬಲಿ ಪಡೆದ ಕಲುಬುರಗಿಯಲ್ಲಿ ಕೊರೋನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಬುಧವಾರ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಕಲಬುರಗಿ ಸೋಂಕಿತರ ಸಂಖ್ಯೆ ಅರ್ಧ ಶತಕದ ಗಡಿ ದಾಟಿದ್ದು, 52 ಸೋಂಕು ದಾಖಲಾಗಿದೆ. ಅಲ್ಲದೆ, ಕಳೆದ ವಾರ ಜಿಲ್ಲಾವಾರು ಸೋಂಕಿತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಕಲಬುರಗಿ 4ನೇ ಸ್ಥಾನಕ್ಕೆ ಜಿಗಿದಿದ್ದು, ಸಕ್ರಿಯ ಪ್ರಕರಣಗಳಲ್ಲಿ (40) ವಿಜಯಪುರವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದೆ. ಈ ಬುಧವಾರ ಸೋಂಕು ದೃಢಪಟ್ಟ8 ಪ್ರಕರಣದಲ್ಲಿ ನಾಲ್ಕು ಮಂದಿ ಮಕ್ಕಳೇ ಇರುವುದು ಹಾಗೂ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಏ.25 ರಂದು ಹತ್ತು ಮಂದಿಗೆ ಬೆಂಗಳೂರಿನಲ್ಲಿ ಸೋಂಕು ದೃಢಪಟ್ಟಿತ್ತು. ಬಿಹಾರಿ ಸೋಂಕಿತನಿಂದ ಹೊಂಗಸಂದ್ರದ 30 ಮಂದಿಗೆ ಸೋಂಕು ಹರಡಿತ್ತು. ಅಲ್ಲದೆ ಪಾದರಾಯನಪುರ ವಾರ್ಡ್‌ನಲ್ಲಿ 25 ಮಂದಿಗೆ ಸೋಂಕು ಹರಡಿತ್ತು. ಈ ಎರಡೂ ಕಡೆ ಸಮುದಾಯಕ್ಕೆ ಹರಡಿರುವ ಆತಂಕದ ಹಿನ್ನೆಲೆಯಲ್ಲಿ ಎರಡೂ ವಾರ್ಡ್‌ಗಳಲ್ಲಿ ರಾರಯಂಡಮ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಒಬ್ಬರಿಗೆ ಮಾತ್ರ ಸೋಂಕು ದೃಢಪಟ್ಟು ಬೆಂಗಳೂರು ನಿರಾಳವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ