ಬ್ಯಾಕ್ ಟು ಬ್ಯುಸಿನೆಸ್| ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತೆರೆದ ಅಂಗಡಿಗಳು| ಕಾರ್ಮಿಕರು ಕೆಲಸಕ್ಕೆ, ಹಸಿರು ಜಿಲ್ಲೆಗಳಲ್ಲಿ ಸಹಜ ಸ್ಥಿತಿಯತ್ತ ಜನಜೀವನ
ಬೆಂಗಳೂರು(ಏ.30): ಲಾಕ್‌ಡೌನ್‌ನಿಂದಾಗಿ ಕುಸಿತ ಕಂಡಿರುವ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ಸಲುವಾಗಿ ಕೊರೋನಾ ಸೋಂಕು ರಹಿತ ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ 14 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಷರತ್ತುಬದ್ಧವಾಗಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಿಸಿದ ಬೆನ್ನಲ್ಲೇ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟುಗಳು ಪ್ರಾರಂಭವಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮುಖಮಾಡಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರೆಡ್ ಝೋನ್ ಹಾಗೂ ಆರೆಂಜ್ ಝೋನ್‌ಗಳಲ್ಲಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಯಥಾಸ್ಥಿತಿಯಲ್ಲೇ ಮುಂದುವರಿದಿದೆ.
ದೇಶದಲ್ಲಿ ಒಂದೇ ದಿನ ಕೊರೋನಾ ವೈರಸ್ ಡಬಲ್!
ರಾಮನಗರ ಹೊರತುಪಡಿಸಿ ಉಳಿದ 13 ಜಿಲ್ಲೆಗಳಲ್ಲೂ ರಾಜ್ಯ ಸರ್ಕಾರ ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ಸರ್ಕಾರ ನೀಡಿರುವುದರಿಂದ ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಣ್ಣಕೈಗಾರಿಕಾ ಘಟಕಗಳು ಸಣ್ಣ ಪ್ರಮಾಣದ ಕಾರ್ಮಿಕರೊಂದಿಗೆ ಕಾರ್ಯ ಪುನರಾರಂಭಿಸಿದ್ದು, ಉಳಿದೆಡೆ ಒಂದೆರಡು ದಿನಗಳೊಳಗಾಗಿ ಪ್ರಾರಂಭವಾಗುವ ನಿರೀಕ್ಷೆಗಳಿವೆ. ಚಾಮರಾಜನಗರ, ಕೊಪ್ಪಳ, ಕೊಡಗು ಜಿಲ್ಲೆಗಳಲ್ಲಿ ಜನಸಂಚಾರ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿವೆ. ಇದೇವೇಳೆ ಉತ್ತರ ಕರ್ನಾಟಕದ ರಾಯಚೂರು, ಕೊಪ್ಪಳ, ಹಾವೇರಿ ಜಿಲ್ಲೆಗಳಿಗೆ ಪರವೂರುಗಳಿಂದ ವಲಸೆ ಕಾರ್ಮಿಕರು ವಾಪಾಸಾಗುತ್ತಿದ್ದಾರೆ.
ಏತನ್ಮಧ್ಯೆ ಗ್ರೀನ್ ಝೋನ್ ಘೋಷಣೆಯಾಗಿದ್ದ ದಾವಣಗೆರೆಯಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಬೆಳಗ್ಗೆ ಸಡಿಲಿಸಲಾಗಿದ್ದ ಲಾಕ್‌ಡೌನ್ ಅನ್ನು ಸಂಜೆ ವೇಳೆ ಮತ್ತೆ ಬಿಗುಗೊಳಿಸಲಾಗಿದೆ. ಉಡುಪಿ ಮತ್ತು ಕೋಲಾರ ಜಿಲ್ಲಾಡಳಿತಗಳು ಮಾತ್ರ ಈವರೆಗೂ ನಿರ್ಬಂಧ ಸಡಿಲಿಸಿಲ್ಲ.
ಎಲ್ಲೆಲ್ಲಿ ಹೇಗಿದೆ ಸ್ಥಿತಿ?
ಸಣ್ಣ ಕೈಗಾರಿಕೆ ಶುರು: ಹಾಸನ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಡಿಮೆ ಸಂಖ್ಯೆಯ ಕಾರ್ಮಿಕರೊಂದಿಗೆ ಹಲವು ಸಣ್ಣಕೈಗಾರಿಕಾ ಘಟಕಗಳು ಬಾಗಿಲು ತೆರೆದಿವೆ. ಅಗತ್ಯವಸ್ತುಗಳ ಅಂಗಡಿಗಳ ಜತೆಗೆ ಗ್ಯಾರೇಜ್‌ಗಳೂ ಕಾರಾರಯರಂಭ ಮಾಡಿವೆ. ಜಿಲ್ಲೆಯೊಳಗೆ ರೈತರ ತರಕಾರಿ ಸಾಗಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ!
ಹೆಚ್ಚಿದ ಜನಸಂಚಾರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೌಕ್‌ಡೌನ್ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದ್ದರಿಂದ ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ತಡೆದು ತಪಾಸಣೆ ಮಾಡುವುದು ಮುಂದುವರೆದಿತ್ತು. ಮೆಡಿಕಲ್ ಸ್ಟೋರ್‌ಗಳು, ದಿನಸಿ ಅಂಗಡಿಗಳೊಂದಿಗೆ ರಸಗೊಬ್ಬರ, ಸ್ವೀಟ್ ಸ್ಟಾಲ್, ಹಣ್ಣು ಮತ್ತು ಹೂವಿನ ಅಂಗಡಿಗಳೂ ತೆರೆದಿದ್ದವು.
ರೈತರ ಅಲೆದಾಟ: ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ತೆಗೆದು ವಹಿವಾಟು ನಡೆಸಿದರು. ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಅಂಗಡಿಗಳಿಗೆ ಅಲೆದಾಡುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಹೋಟೆಲ್‌ಗಳು ಬಾಗಿಲು ತೆಗೆದು ಪಾರ್ಸೆಲ್ ಮಾತ್ರ ನೀಡಿದವು.
ನಿಧಾನವಾಗಿ ಕಾರ್ಯರಂಭ: ಕೊಪ್ಪಳ ಜಿಲ್ಲೆಯಲ್ಲಿ ಜನಸಂಚಾರ ಹೆಚ್ಚಾಗಿದ್ದು ವ್ಯಾಪಾರ, ವಹಿವಾಟುಗಳೂ ನಿಧಾನವಾಗಿ ಕಾರ್ಯಾÜಂಭವಾಗಿದೆ. ನಗರ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಉಲ್ಲಂಘನೆ ಅವ್ಯಾಹವಾಗಿ ನಡೆಯುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜನ ಕೊರೋನಾ ಭಯವಿಲ್ಲದೆ ಓಡಾಡುತ್ತಿದ್ದಾರೆ.
ವ್ಯಾಪಾರ ಚೇತರಿಕೆ: ಯಾದಗಿರಿ ಜಿಲ್ಲೆಯಲ್ಲಿ ಕೃಷ್ಯುಪಯೋಗಿ, ಆಟೋಮಮೊಬೈಲ್ಸ್, ಕಟ್ಟಡ ನಿರ್ಮಾಣ ಕಾರ್ಯಗಳು ಆರಂಭವಾಗಿದ್ದರೆ, ದಾಲ್ ಮಿಲ್, ಕಾಟನ್ ಮಿಲ್ಗ್‌ಳಲ್ಲಿ ಯಂತ್ರಗಳು ಸದ್ದು ಮಾಡಿವೆ. ರಸಗೊಬ್ಬರ, ಹಾರ್ಡ್‌ವೇರ್, ಎಲೆಕ್ಟ್ರಿಕಲ್, ಮೆಕ್ಯಾನಿಕ್ ಶಾಪ್‌ಗಳೂ ತೆರೆದಿದ್ದವು. ಸಾಮಾಜಿಕ ಅಂತರದ ಎಚ್ಚರಿಕೆಯ ನಡುವೆಯೂ ಜನರು ಖರೀದಿಗೆ ಮುಗಿಬಿದ್ದ ದೃಳ್ಯಗಳು ಸಾಮಾನ್ಯವಾಗಿದ್ದವು.
ಈ ದೇಶದ ಆಸ್ಪತ್ರೆಯ ಬಾತ್‌ರೂಂಗಳಲ್ಲಿ ಶವದ ರಾಶಿ!
ದಾವಣಗೆರೆ ಬೆಣ್ಣೆ ದೋಸೆ ಮಾರಾಟ: ಗ್ರೀನ್ ಝೋನ್ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೆ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಿಲ್ಲಾಧಿಕಾರಿಗಳು ಲಾಕ್‌ಡೌನ್ ಸಡಿಲಿಕೆ ಹಿಂಪಡೆದರು. ಹೀಗಾಗಿ ಬೆಳಗ್ಗೆ ಹೊತ್ತು ಪಾರ್ಸಲ್‌ಗೆ ಅನುಮತಿ ಪಡೆದು ಕಾರ್ಯ ನಿರ್ವಹಿಸಿದ್ದ ದಾವಣಗೆರೆ ಬೆಣ್ಣೆ ದೋಸೆ ಕೇಂದ್ರಗಳು ಸಂಜೆಯಾಗುವ ಮೊದಲೇ ವ್ಯಾಪಾರ ನಿಲ್ಲಿಸಬೇಕಾಯಿತು.
ಜ್ಯುವೆಲ್ಲರ್ಸ್ ಮುಚ್ಚಿಸಿದರು: ಗ್ರೀನ್‌ಝೋನ್ ವ್ಯಾಪ್ತಿಯಲ್ಲಿರುವ ಕಾರಣ ಹಾವೇರಿ ನಗರದಲ್ಲಿ ಬೆಳಗ್ಗೆ ಬಟ್ಟೆಅಂಗಡಿಗಳು ತೆರೆದಿದ್ದವು. ಮಧ್ಯಾಹ್ನದ ವೇಳೆ ಆಭರಣದ ಅಂಗಡಿಗಳನ್ನು ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಮುಚ್ಚಿಸಿದರು. ಪ್ರಮುಖರಸ್ತೆಗಳಲ್ಲಿ ಜನ, ವಾಹನ ಸಂಚಾರ ಹೆಚ್ಚಾಗಿತ್ತು.
ಕಾರ್ಮಿಕರು ನಿರಾಸೆಯಿಂದ ತೆರಳಿದರು: ಕೋಲಾರ ಜಿಲ್ಲೆಯಲ್ಲಿ ಇನ್ನೂ ಲಾಕ್‌ಡೌನ್ ಸಡಿಲಿಕೆ ಆಗಿಲ್ಲ. ಕಾರ್ಖಾನೆಗಳು ಬಾಗಿಲು ತೆರೆಯಬಹುದೆಂಬ ನಿರೀಕ್ಷೆಯಿಂದ ಕಾರ್ಮಿಕರು ನಗರಕ್ಕೆ ಬಂದು ನಿರಾಸೆಯಿಂದ ವಾಪಸ್ ತೆರಳಿದರು.
ಕೈಗಾರಿಕೆಗೆ ಅವಕಾಶವಿಲ್ಲ: ರಾಮನಗರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಲಾಕ್‌ಡೌನ್ ಸಡಿಲಿಕೆಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕೆಗಳನ್ನು ತೆರೆಯಲು ಇನ್ನೂ ಅವಕಾಶ ಸಿಕ್ಕಿಲ್ಲ. ಒಂಟಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಮಾವು ಮಾರಾಟ ಮಳಿಗೆಗಳು ಕಾರ್ಯಾರಂಭ ಮಾಡಿದವು.
ಪೊಲೀಸರಿಂದ ನಿರಾಕರಣೆ: ರಾಯಚೂರಿನಲ್ಲಿ ಆಟೋಮೊಬೈಲ್ ಶಾಪ್, ಗ್ಯಾರೇಜ್‌ಗಳೂ ಕಾರಾರಯರಂಭ, ಬಟ್ಟೆವ್ಯಾಪಾರಕ್ಕೆ ವಿನಾಯಿತಿ ಇದ್ದರೂ ಪೊಲೀಸರು ಅವಕಾಶ ನೀಡಲಿಲ್ಲ. ಕೃಷಿ ಚಟುವಟಿಕೆಗಳೊಂದಿಗೆ ನರೇಗಾ ಕಾಮಗಾರಿಗಳು, ಕಟ್ಟಡ, ಇಟ್ಟಿಗೆ ಬಟ್ಟಿ, ಸಣ್ಣಪುಟ್ಟಸಿವಿಲ್ ಕೆಲಸಗಳು ಆರಂಭವಾಗಿದ್ದು, ಪರವೂರಿನಲ್ಲಿದ್ದ ಗುಳೇ ಕಾರ್ಮಿಕರು ವಾಪಾಸಾಗುತ್ತಿದ್ದಾರೆ.
ಸಂಪೂರ್ಣ ಸಡಿಲಿಕೆ ಇಲ್ಲ: ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಿಲ್ಲ. ಜನರು ಅನಗತ್ಯವಾಗಿ ಓಡಾಡಬಾರದು. ಅಗತ್ಯ ವಸ್ತು ಹೊರತಾದ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಕಾಮಗಾರಿಗಳಿಗೆ ಅವಕಾಶ ನೀಡಿದೆ.
ಲಾಕ್‌ಡೌನ್ ಕಮಾಲ್, ಈಗ ಸಹಾರನ್ಪುರದಿಂದ್ಲೂ ಕಾಣಿಸ್ತಿದೆ ಹಿಮಾಚಲ ಪರ್ವತ!
ಮೊದಲೇ ರಿಯಾಯ್ತಿ ಘೋಷಣೆ: ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ನಿರ್ಬಂಧ ಸಡಿಲಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ ಈ ಮೊದಲೇ ಹಸಿರು ವಲಯದಲ್ಲಿ ನೀಡಲಾಗುವ ಎಲ್ಲ ರಿಯಾಯತಿಗಳನ್ನು ಕೆಲವು ನಿರ್ಬಂದಗಳೊಂದಿಗೆ ನೀಡಲಾಗಿದೆ.
ಸಡಿಲಿಕೆಯಿದ್ದರೂ ವಿರಳ ಜನಸಂಚಾರ: ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಸಿದ್ದರೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರ ಜನ ದಟ್ಟಣೆ ವಿರಳವಾಗಿತ್ತು. ಬಹುತೇಕ ಕಡೆ ಲಾಕ್‌ಡೌನ್ ವಾತಾವರಣವೇ ಕಂಡುಬಂತು.
ಪೊಲೀಸರಿಂದ ದಂಡ: ಚಾಮರಾಜನಗರ ಜಿಲ್ಲೆಯ ಎಪಿಎಂಸಿ, ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರವಿಲ್ಲದೇ ವ್ಯವಹರಿಸಿದ್ದಾರೆ. ಆಟೋಗಳೂ ರಸ್ತೆಗಿಳಿದಿವೆ. ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಪೊಲೀಸರು ಪೊಲೀಸರು ಬೈಕ್‌ನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸವಾರಿ ಮಾಡುವವರನ್ನು ಹಿಡಿದು ದಂಡ ಹಾಕಿದರು.