
ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಿಸಿಬಿ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಬ್ಬರೂ ಟೀವಿ ವಾಹಿನಿಯ ಪತ್ರಕರ್ತರಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಓರ್ವ ಆರೋಪಿ ಆ್ಯಂಬಿಡೆಂಟ್ ಪ್ರಕರಣ ದಲ್ಲಿ ಪೊಲೀಸ್ ಪ್ರಕರಣಗಳನ್ನು ನಿಭಾಯಿಸುತ್ತೇನೆ, ನಿಮಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು 30 ಕೋಟಿ ರು. ಹಣ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಈತ ಹಲವು ಬಾರಿ ಆ್ಯಂಬಿಡೆಂಟ್ ಮಾಲಿಕ ಫರೀದ್‌ನಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಮತ್ತೊಬ್ಬ ಪತ್ರಕರ್ತ ಒಟ್ಟು 35 ಕೋಟಿ ರು. ಹಣವನ್ನು ಫರೀದ್ ಅವರಿಂದ ಪಡೆದಿದ್ದು, ಈ ಬಗ್ಗೆ ಸಿಸಿಬಿ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಈ ಹಣದಲ್ಲಿ ಫರೀದ್ ಹೇಳಿದವರಿಗೆ 30 ಕೋಟಿ ರು. ಮೌಲ್ಯದ ಆಸ್ತಿಯನ್ನು ನೋಂದಾಯಿಸಿಕೊಟ್ಟಿದ್ದಾನೆ ಎಂದು ಹೇಳಿದ್ದಾನೆ.
ಇದನ್ನು ಹೊರತುಪಡಿಸಿ ಬ್ಲಾಕ್‌ಮೇಲ್ ಮಾಡಿ 15 ಕೋಟಿ ರು. ಹಣವನ್ನು ಫರೀದ್ ಬಳಿ ವಸೂಲಿ ಮಾಡಿದ್ದಾನೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ. ಇನ್ನು ಆ್ಯಂಬಿ ಡೆಂಟ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಫರೀದ್, ‘ನಾನು ಸಾರ್ವಜನಿಕರಿಗೆ ಹೂಡಿಕೆಯ ಹಣವನ್ನು ವಾಪಸ್ ಕೊಡಬೇಕು ಎಂದುಕೊಂಡಿದ್ದೆ. ಅಷ್ಟೊತ್ತಿಗೆ ನನ್ನ ಮೇಲೆ ದೂರುಗಳು ದಾಖಲಾಗಲು ಪ್ರಾರಂಭವಾಗಿದ್ದವು’ ಎಂದು ತಿಳಿಸಿದ್ದಾನೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ