ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಪತಿಯೊಬ್ಬರು ಪತ್ನಿಯ ಜೊತೆ ಜಗಳವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ಲೇಡ್‌ನಿಂದ ಕುತ್ತಿಗೆ, ಕೈ ಕೊಯ್ದುಕೊಂಡು ಸ್ನೇಹಿತರಿಗೆ ವಿಡಿಯೋ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.16) : ಪತಿ ಪತಿಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ಉಂಟಾಗಿ ಮನನೊಂದು ಪತಿ ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.ಹಾಸನ ಮೂಲದ ಮನು ಚಾರ್ಮಾಡಿ ಘಾಟ್ ನಲ್ಲಿಬ ಕುತ್ತಿಗೆ-ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಡ-ಹೆಂಡತಿ ಜಗಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಹಾಸನ ಜಿಲ್ಲೆ ಮೂಲದ ಮನು ಎಂದು ಗುರುತಿಸಲಾಗಿದೆ.
ಸ್ನೇಹಿತರಿಗೆ ವಿಡಿಯೋ ಕಾಲ್ :
ಹಾಸನದಿಂದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದಚಾರ್ಮಾಡಿ ಘಾಟಿಯ ಏಕಲವ್ಯ ವಸತಿ ಶಾಲೆ ಬಳಿ ಬಂದು ಬ್ಲೇಡ್ ನಿಂದ ಕುತ್ತಿಗೆ-ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡ ಮನು ತನ್ನ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದನು. ಕೂಡಲೇ ಆತನ ಸ್ನೇಹಿತರು, 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ 112 ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ಆತನನ್ನ ರಕ್ಷಿಸಿದ್ದಾರೆ. ಆತನ ಕುತ್ತಿಗೆಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ಆತನನ್ನ ಬಣಕಲ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ: ಸಿ.ಟಿ. ರವಿ
ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಕುತ್ತಿಗೆಗೆ ಹೊಲಿಗೆ ಹಾಕಿಸಿ, ಆತನ ಜೀವ ಉಳಿಸಿದ್ದಾರೆ. ಬಳಿಕ ಪೊಲೀಸರೇ ಆತನ ಪತ್ನಿಗೆ ಕರೆ ಮಾಡಿ ಕರೆಸಿ, ಗಂಡ-ಹೆಂಡತಿ ಇಬ್ಬರಿಗೂ ಬುದ್ಧಿ ಹೇಳಿ ಊರಿಗೆ ವಾಪಸ್ ಕಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು, ಕಾರ್ಯಕರ್ತರಾದ ಹಿನ್ನೆಲೆ ಕುತ್ತಿಗೆ ಕೊಯ್ದುಕೊಂಡಿದ್ದ ಜೀವವೊಂದು ಉಳಿದಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.