ಇಂದಿನಿಂದ 4 ದಿನ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

By Kannadaprabha NewsFirst Published Oct 9, 2021, 7:26 AM IST
Highlights
  •  ಇಂದಿನಿಂದ 4 ದಿನ ಮಳೆ  : ಹವಾಮಾನ ಇಲಾಖೆ ಎಚ್ಚರಿಕೆ
  • ಅ.9ರಂದು ಕಲಬುರಗಿಗೆ ‘ಆರೆಂಜ್‌ ಅಲರ್ಟ್‌’ ಮತ್ತು ಉಳಿದೆಲ್ಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ 

 ಬೆಂಗಳೂರು (ಅ.09):  ರಾಜ್ಯದ ಕರಾವಳಿ  (Costal) ಸೇರಿದಂತೆ ಹಲವೆಡೆ ಅ.12ರವರೆಗೆ ಗುಡುಗು, ಗಾಳಿ ಸಹಿತ ಭಾರಿ ಮಳೆ (Rain) ಮುಂದುವರಿಯಲಿದ್ದು, ಅ.9ರಂದು ಕಲಬುರಗಿಗೆ ‘ಆರೆಂಜ್‌ ಅಲರ್ಟ್‌’  (Orange Alert) ಮತ್ತು ಉಳಿದೆಲ್ಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಕೊಡಲಾಗಿದೆ ಎಂದು ಹವಾಮಾನ ಇಲಾಖೆ (Weather Department) ತಿಳಿಸಿದೆ.

ಅ.9ರಂದು ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದ್ದು, 30 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ (Yellow Alert) ಕೊಡಲಾಗಿದೆ. ಶನಿವಾರ ಕಲಬುರಗಿಯಲ್ಲಿ ಮಾತ್ರ ಅತ್ಯಧಿಕ ಮಳೆ ಬೀಳಲಿದ್ದು, ಈ ಒಂದು ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಈ ಮಧ್ಯೆ ಅ.10 ಹಾಗೂ 11ರಂದು ಮಳೆ ಆರ್ಭಟ ತುಸು ಕ್ಷೀಣಿಸಲಿದೆ. ಅಂದು ಕರಾವಳಿ 3 ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ (Bengaluru), ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಿಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ರಾಜ್ಯದ ಕರಾವಳಿ ಭಾಗದ ಅರಬ್ಬಿ ಸಮುದ್ರದದಲ್ಲಿ (Arabian sea)  ಉಂಟಾದ ಮೇಲ್ಮೈ ಸುಳಿಗಾಳಿ (ಸ್ಟ್ರಫ್‌) ಪರಿಣಾಮದಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಈ ಸ್ಟ್ರಫ್‌ ಶನಿವಾರದ ವೇಳೆಗೆ ದುರ್ಬಲಗೊಳ್ಳಲಿದೆ. ನಂತರ ಅಂಡಮಾನ್‌ ಉತ್ತರ ಭಾಗದಲ್ಲಿ ಸಣ್ಣ ಪ್ರಮಾಣದ ಸ್ಟ್ರಫ್‌ ಸೃಷ್ಟಿಯಾಗಲಿದ್ದು, ಅದು ಆಂಧ್ರ ಪ್ರದೇಶದ ಕರಾವಳಿ ಮಾರ್ಗವಾಗಿ ಸಾಗಲಿದೆ. ಈ ಕಾರಣಗಳಿಂದ ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ: ಮಳೆಗಾಗಿ ಸಿಎಂ ಪರ್ಜನ್ಯ ಹೋಮ

ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಚಿಂತಾಮಣಿ ಮತ್ತು ಕೊಪ್ಪಳದಲ್ಲಿ ತಲಾ 9 ಸೆಂ.ಮೀ, ತುಮಕೂರಿನ ಚಿಕ್ಕನಹಳ್ಳಿ ಮತ್ತು ಶಿರಾದಲ್ಲಿ ತಲಾ 8 ಸೆಂ.ಮೀ, ಪಾವಗಡದಲ್ಲಿ 7 ಸೆಂ.ಮೀ. ಮಳೆ ದಾಖಲಾಗಿದ್ದು, ಉಳಿದೆಡೆ ಸಾಧಾರಣ ಮಳೆ ಆಗಿದೆ.

ನಂತರ ಅ.12ರಂದು ಮತ್ತೆ ಚುರುಕಾಗಲಿರುವ ಮುಂಗಾರು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಚಾಮರಾಜ ನಗರ, ರಾಯಚೂರು, ಬೀದರ್‌, ಯಾದಗಿರಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಧಾರಕಾರವಾಗಿ ಸುರಿಯುವ ಸಾಧ್ಯತೆಯಿದೆ. ಅಂದು ಕಲಬುರಗಿಗೆ ‘ಆರೆಂಜ್‌ ಅಲರ್ಟ್‌’ ಹಾಗೂ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

click me!