ನನ್ನ ಮಗ ಅನಿಲ್ ಸಂಬಂಧಿಕರ ಕರೆ ಸ್ವೀಕರಿಸಿದ್ದರೆ ಪಾರಾಗಬಹುದಿತ್ತು. ನನಗೆ ಭೂಕುಸಿತದ ಸದ್ದು ಕೇಳಿಸಿತ್ತು ಎಂದು ವಯನಾಡು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಲೀಲಾವತಿ ಗಂಡ, ಗಾಯಾಳು ದೇವರಾಜು ದುರಂತ ನೆನೆದು ಕಣ್ಣೀರಾದರು.
Wayanad Landslide: ನನ್ನ ಮಗ ಅನಿಲ್ ಸಂಬಂಧಿಕರ ಕರೆ ಸ್ವೀಕರಿಸಿದ್ದರೆ ಪಾರಾಗಬಹುದಿತ್ತು. ನನಗೆ ಭೂಕುಸಿತದ ಸದ್ದು ಕೇಳಿಸಿತ್ತು ಎಂದು ವಯನಾಡು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಲೀಲಾವತಿ ಗಂಡ, ಗಾಯಾಳು ದೇವರಾಜು ದುರಂತ ನೆನೆದು ಕಣ್ಣೀರಾದರು.
ಅನಿ, ಝಾನ್ಸಿ ಪಾಪು ಎತ್ತಿಕೊಂಡು ಹೋಗಿ ಎಂದು ಹೇಳಿದ್ದೆ. ಲೀಲಾವತಿ ನನ್ನ ಮಗನನ್ನು ಬಿಡಬೇಡಿ, ನೋಡಿಕೋ ಎಂದು ಕೂಗಿಕೊಂಡಳು. ಹೋಗಬೇಡ ಎಂದು ತಬ್ಬಿಕೊಂಡೆನು. ಬಂಡೆಗಳು ಉರುಳಿಬಂದು ಅಪ್ಪಳಿಸುತ್ತಿದ್ದವು. ಬಳಿಕ ಲೀಲಾವತಿ ಮಾತು ಕೇಳಿಸಲಿಲ್ಲ. ದಮ್ಮುಕಟ್ಟಿ ಕುಳಿತಿದ್ದೆ. ಕಲ್ಲು ಎತ್ತಿ ಬೆನ್ನು ಭಾಗ ಪೆಟ್ಟಾಗಿತ್ತು ಎಂದು ಭೀಕರ ದುರಂತದ ಬಗ್ಗೆ ತಿಳಿಸಿದ ಗಾಯಾಳು ದೇವರಾಜು. ಆಘಾತಕ್ಕೊಳಗಾಗಿದ್ದರು.
ಕೇರಳ ಗುಡ್ಡ ಕುಸಿತ ದುರಂತ ಪ್ರಕರಣ; ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ಝಾನ್ಸಿರಾಣಿ ಕುಟುಂಬ!
ನಾಪತ್ತೆಯಾಗಿರುವ ಲೀಲಾವತಿ ಇನ್ನೂ ಸಿಕ್ಕಿಲ್ಲ. ದುರಂತದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಝಾನ್ಸಿ ಪಾಪುವನ್ನು 9 ಗಂಟೆಗೆ ಮಲಗಿಸಿದ್ಳು. ನಾನು ಇಷ್ಟು ಬೇಗ ಮಲಗಿಸಬೇಡ ಎಂದು ಹೇಳಿದ್ದೆ. 12 ಗಂಟೆವರೆಗೆ ಮೊಬೈಲ್ ನೋಡುತ್ತಾ ಮಲಗಿದ್ದ ಅನಿಲ್ ಬಳಿಕ ನಿದ್ದೆಗೆ ಜಾರಿದ್ದ. ಅದು ಯಮ ನಿದ್ರೆ ರೀತಿ ಗಾಢವಾದ ನಿದ್ದೆಯಲ್ಲಿದ್ದ ಎಂದು ದುರ್ಘಟನೆ ನೆನೆದು ಕಣ್ಣೀರು ಹಾಕಿದ ಗಾಯಾಳು ದೇವರಾಜು.