ಕೇರಳ ಗುಡ್ಡ ಕುಸಿತ ದುರಂತ ಪ್ರಕರಣ; ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ಝಾನ್ಸಿರಾಣಿ ಕುಟುಂಬ!

By Ravi Janekal  |  First Published Jul 30, 2024, 8:35 PM IST

ಕೇರಳ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಕರ್ನಾಟಕದ ಝಾನ್ಸಿರಾಣಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಗುಡ್ಡ ಕುಸಿತದ ಬಳಿಕ ಅನಿಲ್ ತಾಯಿ ಲೀಲಾವತಿ(55) ಪುತ್ರ ನಿಹಾಲ್(2.5). ನಾಪತ್ತೆಯಾಗಿದ್ದಾರೆ. ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.


Wayanad Landslide: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಮಣ್ಣಿನಲ್ಲಿ ಗ್ರಾಮಗಳೇ ಹೂತುಹೋಗಿವೆ. ಸಾವು ನೋವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿದೆ. ಮಕ್ಕಳು, ವಯಸ್ಕರ ಮೃತದೇಹಗಳು ನದಿಯಲ್ಲಿ ತೇಲುತ್ತಿರುವ ಭೀಕರ ದೃಶ್ಯ ಕಂಡು ದೇಶವೇ ಬೆಚ್ಚಿಬಿದ್ದಿದೆ. ಹಿಂದೆಂದೂ ಈ ರೀತಿಯ ಭೂಕುಸಿತ ಸಂಭವಿಸಿರಲಿಲ್ಲ. ಈ ದುರಂತದಲ್ಲಿ ಕರ್ನಾಟಕದ ಕುಟುಂಬವೊಂದು ನಾಪತ್ತೆಯಾಗಿದೆ.

Wayanad Landslide: ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ!

Tap to resize

Latest Videos

undefined

ಹೌದು ಕೇರಳ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಕರ್ನಾಟಕದ ಝಾನ್ಸಿರಾಣಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

 

Wayanad Landslide: ಸಾವಿನ ಸಂಖ್ಯೆ 115ಕ್ಕೆ ಏರಿಕೆ, ಶವಗಳಿಂದ ಆಸ್ಪತ್ರೆಗಳೇ ಭರ್ತಿ!

ಮದುವೆ ಬಳಿಕ ಇಬ್ಬರೂ ಕೇರಳದ ಮುಂಡಕೈಯಲ್ಲಿ ನೆಲೆಸಿದ್ದರು. ಅನಿಲ್, ಪತ್ನಿ ಝಾನ್ಸಿಯೊಂದಿಗೆ ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಆದರೆ ಗುಡ್ಡ ಕುಸಿತದ ಬಳಿಕ ನಾಪತ್ತೆಯಾಗಿರುವ ಅನಿಲ್ ತಾಯಿ ಲೀಲಾವತಿ(55) ಪುತ್ರ ನಿಹಾಲ್(2.5). ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಹಾಗೂ ಪತ್ನಿ ಝಾನ್ಸಿ, ತಂದೆ ದೇವರಾಜು, ಮೂವರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತ ಬಳಿಕ ಕುಟುಂಬಸ್ಥರನ್ನು ಕಾಣಲು ಕೇರಳಕ್ಕೆ ತೆರಳಿದ ಝಾನ್ಸಿರಾಣಿ ಕುಟುಂಬಸ್ಥರು.

click me!