ರಾಜ್ಯಕ್ಕೆ ಬರಗಾಲ ಬಂದಿದ್ರೂ ಹೇಮಾವತಿಯಿಂದ ತಮಿಳನಾಡಿಗೆ ನೀರು! ನಿಮ್ಮ ಜಿಲ್ಲೆಯ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ?

Kannadaprabha News   | Kannada Prabha
Published : Sep 22, 2026, 06:24 AM IST
water levels in Karnataka Reservoir today

ಸಾರಾಂಶ

ಸುಪ್ರೀಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಸೇರಿದಂತೆ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಂಡ್ಯ (ಸೆ.22): ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಕಾವೇರಿ ಜಲಾಯನ ಪ್ರದೇಶಗಳ ವ್ಯಾಪ್ತಿಯ ಅಣೆಕಟ್ಟೆಗಳಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸಿದ ಪರಿಣಾಮ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಕಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ: ಐದು ದಶಕಗಳ ಬಳಿಕ ಚಿತ್ರದುರ್ಗ ಪ್ರವೇಶಿಸಿದ ಭದ್ರಾ ನೀರು! ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು!

ಸುಪ್ರೀಂ ಕೋರ್ಟ್ ಸೂಚನೆಯಂತೆ ತಮಿಳನಾಡಿಗೆ ನೀರು

ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರಗಳ ಸೂಚನೆ ಹಾಗೂ ಸುಪ್ರಿಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಅಣೆಕಟ್ಟೆ ಮೂಲಕ ನದಿಗೆ 3800 ಕ್ಯುಸೆಕ್, ಹಾರಂಗಿಯಿಂದ 500 ಕ್ಯುಸೆಕ್ ನೀರು ಕಾವೇರಿ ನದಿಗೆ ಹರಿದು ಬರುತ್ತಿದೆ. ಹೀಗಾಗಿ ಕೆಆರ್‌ಎಸ್‌ಗೆ ಒಳ ಹರಿವು 4,457 ಕ್ಯುಸೆಕ್ ಹೆಚ್ಚಳವಾಗಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂನಿಂದ 6,634 ಕ್ಯುಸೆಕ್ ನೀರನ್ನು ಕಾವೇರಿ ನದಿ ಮೂಲಕ ಹೊರ ಹರಿಸಲಾಗುತ್ತಿದೆ. ಅತ್ತ ಕಬಿನಿ ಜಲಾಶಯದಿಂದಲೂ 900 ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ.

ರಾಜ್ಯದ ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆ: ಜಲಸಂಪನ್ಮೂಲ ಇಲಾಖೆಯಿಂದಲೇ ಶಾಕಿಂಗ್ ಮಾಹಿತಿ!

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

ಕಬಿನಿ 56% 2284 2268.60

ಹೇಮಾವತಿ 43% 2922 2893.65

ತುಂಗಭದ್ರಾ 75% 1633 1625.89

ಸೂಪಾ(ಮೀ.) 59% 564 548.24

ಕೆಆರ್‌ಎಸ್ 56% 124.80 105.86

ಘಟಪ್ರಭಾ 100% 2175 2174.90

ಲಿಂಗನಮಕ್ಕಿ 56% 1819.12 1795.70

ಭದ್ರಾ 85% 2158 2149.41

ಹಾರಂಗಿ 68% 2859 2849.26

ಆಲಮಟ್ಟಿ(ಮೀ.) 94% 519.60 519.13

ನಾರಾಯಣಪುರ(ಮೀ.) 82% 492.25 490.71

ಮಲಪ್ರಭಾ 57% 2079.50 2065.74

Sep 22, 2026, 12:12:11 AM

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿಬಿಎ ಡ್ರೋನ್ ಸರ್ವೇ ಯಡವಟ್ಟು: ಬೆಂಗಳೂರು ಆಸ್ತಿ ಮಾಲೀಕರಿಗೆ ಡಬಲ್ ತೆರಿಗೆ ಶಾಕ್!
ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮರುತನಿಖೆಗೆ ಸುಪ್ರೀಂ ಆದೇಶ, ವರದಿ ನೀಡಲು 3 ತಿಂಗಳ ಗಡುವು