ಹಿಂದೂ ಸಮಾಜದ ಪೂಜನೀಯವಾದ ಕೋಕ್ತಿ ಮಹಾಸತಿ ದೇವಸ್ಥಾನದ ಕೆರೆಗೆ ರಕ್ತ ಮಿಶ್ರಿತ ನೀರು ಹರಿದು ಬಂದ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ. ಬಕ್ರೀದ್ ಹಬ್ಬದ ಹಿನ್ನೆಲೆ ಮುಸ್ಲಿಂ ಸಮುದಾಯದವರು ಪ್ರಾಣಿ ವಧೆ ನಡೆಸಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಸಿದ್ದರಿಂದ ಮಳೆನೀರಿನೊಂದಿಗೆ ಕೆರೆಗೆ ಸೇರಿಕೊಂಡಿದೆ.
ಕಾರವಾರ, ಉತ್ತರಕನ್ನಡ (ಜೂ.18): ಹಿಂದೂ ಸಮಾಜದ ಪೂಜನೀಯವಾದ ಕೋಕ್ತಿ ಮಹಾಸತಿ ದೇವಸ್ಥಾನದ ಕೆರೆಗೆ ರಕ್ತ ಮಿಶ್ರಿತ ನೀರು ಹರಿದು ಬಂದ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.
ನಿನ್ನೆ ನಡೆದ ಬಕ್ರೀದ್ ಹಬ್ಬದ ಹಿನ್ನೆಲೆ ಮುಸ್ಲಿಂ ಸಮುದಾಯದವರು ಪ್ರಾಣಿ ವಧೆ ನಡೆಸಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಸಿದ್ದಾರೆ. ಬಂದರ್ ರೋಡ್ ಎರಡನೇ ಕ್ರಾಸ್ ಕೋಕ್ತಿ ನಗರದ ಅಕ್ಕಪಕ್ಕದ ಮುಸ್ಲಿಂ ಸಮುದಾಯದ ಮನೆಗಳಿಂದಲೇ ಜಾನುವಾರು, ಕುರಿಯ ರಕ್ತ ಹರಿಸಿದ್ದಾರೆ. ಮಳೆ ಸುರಿದ ಪರಿಣಾಮ ಮಳೆ ನೀರಿನ ಜೊತೆಗೆ ಅಪಾರ ಪ್ರಮಾಣದ ರಕ್ತ ಮಿಶ್ರಿತ ನೀರು ಕೆರೆಗೆ ಸೇರಿಕೊಂಡಿದೆ. ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆರೆಗೆ ರಕ್ತ ಮಿಶ್ರಿತ ನೀರು ಕಂಡು ಹಿಂದೂ ಸಮಾಜದವರು ಆಕ್ರೋಶಕ್ಕೆ ಕಾರಣವಾಗಿದೆ.
undefined
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಧಾರವಾಡ ಮೂಲದ ಯೋಧ!
ಬಿಗುವಿನ ವಾತಾವರಣ ನಿರ್ಮಾಣವಾಗುವುದನ್ನು ಎಚ್ಚೆತ್ತುಕೊಂಡ ರಕ್ತ ಮಿಶ್ರಿತ ನೀರು ಕೆರೆಗೆ ಹರಿದು ಬರುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದನ್ನ ತಪ್ಪಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪುರಸಭೆ ಅಧಿಕಾರಿಗಳು ಹಾಗೂ ಒಳಚರಂಡಿ ಇಲಾಖೆ ಅಧಿಕಾರಿಗಳು ಕೂಡಲೇ ಪುರಸಭೆ ಸಿಬ್ಬಂದಿ ಮೂಲಕ ರಕ್ತಮಿಶ್ರಿತ ನೀರನ್ನು ಟ್ಯಾಂಕರ್ ಮೂಲಕ ಬೇರೆಡೆ ಸಾಗಿಸಿದ್ದಾರೆ. ಸರಿಯಾಗಿ ವಿಲೇವಾರಿ ಮಾಡದೇ ಈ ರೀತಿ ಚರಂಡಿ ಮೂಲಕ ಹರಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ: ಅಕ್ರಮವಾಗಿ ಜಾನುವಾರು ಸಾಗಾಟ ಯತ್ನ; ಆರೋಪಿ ಬಂಧನ