Latest Videos

ಕೋಲಾರ: ದಸರಾ ಆನೆ ಅಶ್ವತ್ಥಾಮ ಸಾವಿನ ಬೆನ್ನಲ್ಲೇ ಗಂಗಶ್ರೀ ಸಾವು!

By Ravi JanekalFirst Published Jun 18, 2024, 8:39 PM IST
Highlights

ದಸರಾ ಆನೆ ಅಶ್ವತ್ಥಾಮ ವಿದ್ಯುತ್ ಸ್ಪರ್ಶದಿಂದ ದುರ್ಮರಣಕ್ಕೀಡಾದ ಬೆನ್ನಲ್ಲೇ ಇದೀಗ ಕೋಲಾರ ತಾಲೂಕಿನ ಕಾಜಿಕಲ್ಲಹಳ್ಳಿ ಬಳಿ ಇರುವ ಆನೆ ಪುನರ್ವಸತಿ ಕೇಂದ್ರದಲ್ಲಿದ್ದ ಗಂಗಶ್ರೀ ಆನೆ ಸಾವಿಗೀಡಾಗಿದೆ.

ಕೋಲಾರ (ಜೂ.18): ದಸರಾ ಆನೆ ಅಶ್ವತ್ಥಾಮ ವಿದ್ಯುತ್ ಸ್ಪರ್ಶದಿಂದ ದುರ್ಮರಣಕ್ಕೀಡಾದ ಬೆನ್ನಲ್ಲೇ ಇದೀಗ ಕೋಲಾರ ತಾಲೂಕಿನ ಕಾಜಿಕಲ್ಲಹಳ್ಳಿ ಬಳಿ ಇರುವ ಆನೆ ಪುನರ್ವಸತಿ ಕೇಂದ್ರದಲ್ಲಿದ್ದ ಗಂಗಶ್ರೀ ಆನೆ ಸಾವಿಗೀಡಾಗಿದೆ.

ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿದ್ದ ಗಂಗಶ್ರೀಗೆ 70 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳು ಮಾರ್ಚ್ 13ರಂದು 2024ರಂದು ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗಿತ್ತು. ವಯೋಸಹಜ ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ  ಗಂಗಶ್ರೀ. ವಯಸ್ಸಾಗಿದ್ದರಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ಆನೆ. ಪುನರ್ವಸತಿ ಕೇಂದ್ರದಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಾದರೂ ಇಂದು ಮಧ್ಯಾಹ್ನದ ಸುಮಾರಿಗೆ ಗಂಗಶ್ರೀ ಮೃತಪಟ್ಟಿದ್ದಾಳೆ.

ಆನೆ ಸಾವು ತಡೆಯಲು ಏನು ಕ್ರಮಕೈಗೊಂಡಿದ್ದೀರಿ: ಕೇಂದ್ರ ಮತ್ತು ರಾಜ್ಯಕ್ಕೆ ಕರ್ನಾಟಕ ಹೈಕೋರ್ಟ್‌ ನೊಟೀಸ್

ಸದ್ಯ ಆನೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಪುನರ್ವಸತಿ ಕೇಂದ್ರ ಮುಖ್ಯಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

click me!