ಮಳೆಯಿಂದ ಶೀತಗಾಳಿ ಹೆಚ್ಚಳ: ಕೊರೋನಾ, ಇತರ ವೈರಸ್‌ ಹೆಚ್ಚಳ!

By Kannadaprabha News  |  First Published Jul 18, 2020, 10:43 AM IST

ಮಳೆಯಿಂದ ಶೀತಗಾಳಿ ಹೆಚ್ಚಳ: ವೈರಸ್‌ ಭೀತಿ| ಸರಾಸರಿ ಗರಿಷ್ಠ ಉಷ್ಣಾಂಶ 22 ಡಿಗ್ರಿಗೆ ಕುಸಿತ| ಶೀತದಲ್ಲಿ ಕೊರೋನಾ, ಇತರ ವೈರಸ್‌ ಬಲಿಷ್ಠ


ಬೆಂಗಳೂರು(ಜು.18): ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಮುಂಗಾರು ಮಳೆಯಾಗುತ್ತಿರುವುದರಿಂದ ರಾಜ್ಯಾದ್ಯಂತ ಸರಾಸರಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದರಿಂದಾಗಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.

ಈ ವಾತಾವರಣದಲ್ಲಿ ಕೋರೋನಾ ಸೇರಿದಂತೆ ಇತರೆ ವೈರಸ್‌ಗಳು ಬಲಿಷ್ಠಗೊಳ್ಳಲಿದ್ದು, ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

Tap to resize

Latest Videos

ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶುರು!

‘ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಕಳೆದ ಒಂದು ತಿಂಗಳನಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ ತಂಪು ವಾತಾವರಣವಿದೆ. ಅಲ್ಲದೆ, ಮುಂದಿನ ಒಂದು ತಿಂಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಉಷ್ಣಾಂಶ ಮತ್ತಷ್ಟುಕಡಿಮೆಯಾಗಲಿದ್ದು, ಚಳಿ ಹೆಚ್ಚಲಿದೆ’ ಎಂದು ರಾಜ್ಯ ನೈರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಸರಾಸರಿ ಕನಿಷ್ಠ 20 ರಿಂದ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ (ಜುಲೈ ತಿಂಗಳಲ್ಲಿ ಸರಾಸರಿ 22 ಡಿಗ್ರಿ ಸೆಲ್ಸಿಯಸ್‌ ) ಅತಿ ಕಡಿಮೆ ಮಟ್ಟಕ್ಕೆ ಹೋಗಿಲ್ಲ. ಇದು ಸಾಮಾನ್ಯ ಪ್ರಮಾಣದ್ದಾಗಿದೆ. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸರಾಸರಿ 15 ಡಿಗ್ರಿಗೆ ಸೆಲ್ಸಿಯಸ್‌ಗೆ ಇಳಿಯಲಿದೆ.

ಎಚ್ಚರ ಅಗತ್ಯ: ‘ವಾತಾವರಣದಲ್ಲಿ ಶೀತ ಗಾಳಿ ಹೆಚ್ಚಾಗುತ್ತಿರುವುದರಿಂದ ಕೊರೋನಾ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು ಮತ್ತಷ್ಟುತೊಂದರೆ ಅನುಭವಿಸಬೇಕಾದ ಸಾಧ್ಯೆಯಿದೆ. ಶೀತವಾತಾವರಣದಲ್ಲಿ ಕೋರೋನಾ ಸೇರಿದಂತೆ ಇತರೆ ವೈರಸ್‌ಗಳು ಬಲಿಷ್ಠಗೊಳ್ಳಲಿವೆ. ಇದರಿಂದ ವೈರಸ್‌ ಸೋಂಕಿತರ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರಿ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯೆಯಿದ್ದು ಎಚ್ಚರ ವಹಿಸಬೇಕು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ಪ್ರಸ್ತುತ ಬೆಂಗಳೂರು ನಗರದಲ್ಲಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಮುಂದಿನ ದಿನಗಳಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.

ಸುನೀಲ್‌ ಗವಾಸ್ಕರ್‌, ರಾಜ್ಯ ನೈರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಿರಿಯ ವಿಜ್ಞಾನಿ.

‘ಚಳಿಯನ್ನು ಎದುರಿಸಲು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್‌ ಹಾಕಬೇಕು. ತಲೆಗೆ ಬಟ್ಟೆಸುತ್ತಿಕೊಂಡಿರಬೇಕು. ಹವಾನಿಯಂತ್ರಿತ ಕೋಣೆ ಮತ್ತು ಫ್ಯಾನ್‌ ಗಾಳಿಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಎಲ್ಲ ಸಂದರ್ಭದಲ್ಲಿ ಬಿಸಿಯೂಣ ಸೇವಿಸಬೇಕು’ ಎಂದು ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ ಆಹ್ಮದ್‌ ಮಾಹಿತಿ ನೀಡಿದ್ದಾರೆ.

click me!