
ಬೆಂಗಳೂರು (ಫೆ.10) : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ಶೇ.50ರಷ್ಟುವಿನಾಯಿತಿಗೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ಮುಂದುವರೆದಿದ್ದು, ಗುರುವಾರ 4.84 ಲಕ್ಷ ಪ್ರಕರಣಗಳಿಂದ ದಾಖಲೆಯ .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಕಳೆದ ಏಳು ದಿನಗಳಲ್ಲಿ 23.73 ಲಕ್ಷ ಪ್ರಕರಣಗಳಿಂದ ಒಟ್ಟು .65.93 ಕೋಟಿ ದಂಡ ಸಂಗ್ರಹವಾಗಿದೆ.
ಗುರುವಾರ ಸಂಚಾರ ಪೊಲೀಸ್ ಠಾಣೆಗಳಲ್ಲಿ 2.51 ಲಕ್ಷ ಪ್ರಕರಣಗಳಿಂದ .5.99 ಕೋಟಿ, ಪೆಟಿಎಂ ಮುಖಾಂತರ 1.49 ಲಕ್ಷ ಪ್ರಕರಣಗಳಿಂದ .4.24 ಕೋಟಿ, ಟಿಎಂಸಿ ಕೌಂಟರ್‌ನಲ್ಲಿ 595 ಪ್ರಕರಣಗಳಿಂದ .1.52 ಕೋಟಿ ಹಾಗೂ ಬೆಂಗಳೂರು ಒನ್ ವೆಬ್‌ಪೋರ್ಟಲ್‌ನಲ್ಲಿ 82 ಸಾವಿರ ಪ್ರಕರಣಗಳಿಂದ .2.11 ಕೋಟಿ ಸೇರಿದಂತೆ ಒಟ್ಟು .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.
ವಿನಾಯಿತಿ ಅಂತ್ಯಕ್ಕೆ 2 ದಿನ ಬಾಕಿ
ಬಾಕಿ ದಂಡ ಪಾವತಿಗೆ ಶೇ.50ರಷ್ಟುವಿನಾಯಿತಿ ಸೌಲಭ್ಯ ಶುಕ್ರವಾರ ಮತ್ತು ಶನಿವಾರ(ಫೆ.11) ಮಾತ್ರ ಇರಲಿದೆ. ಈ ಎರಡೂ ದಿನ ಬಾಕಿ ದಂಡ ಪಾವತಿಸುವವರ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆಯಿದೆ. ಗುರುವಾರವೇ ಬಾಕಿ ದಂಡ ಪಾವತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನಗರ ಸಂಚಾರ ಪೊಲೀಸ್ ಠಾಣೆಗಳಿಗೆ ಮುಗಿಬಿದ್ದರು. ಇನ್ನು ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದ ಕೌಂಟರ್ ಬಳಿಯೂ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಇದರ ಜತೆಗೆ ಆನ್‌ಲೈನ್‌ನಲ್ಲಿ ದಂಡ ಪಾವತಿಸುವವರ ಸಂಖ್ಯೆಯೂ ಹೆಚ್ಚಿತ್ತು.
6ನೇ ದಿನ ದಾಖಲೆಯ 9 ಕೋಟಿ ಟ್ರಾಫಿಕ್ ದಂಡ; ಈವರೆಗೆ 18 ಲಕ್ಷ ಪ್ರಕರಣ ಇತ್ಯರ್ಥ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ