ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಫೋಟೋ ವೈರಲ್: ಆಧಾರ ಸಹಿತವಾಗಿ ಸ್ಪಷ್ಟನೆ ಕೊಟ್ಟ ಗುರೂಜಿ

By Govindaraj S  |  First Published Oct 25, 2023, 10:03 PM IST

ರಿಯಾಲಿಟಿ ಶೋನಲ್ಲಿ ಹುಲಿ ಉಗುರು ಧರಿಸಿದ್ದ ವರ್ತೂರು ಸಂತೋಷ್ ಬಂಧನವಾಗ್ತಿದ್ದಂತೆ ಕಾಫಿನಾಡ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದ ಪೋಟೋ ವೈರಲ್ ಆಗಿತ್ತು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.25): ರಿಯಾಲಿಟಿ ಶೋನಲ್ಲಿ ಹುಲಿ ಉಗುರು ಧರಿಸಿದ್ದ ವರ್ತೂರು ಸಂತೋಷ್ ಬಂಧನವಾಗ್ತಿದ್ದಂತೆ ಕಾಫಿನಾಡ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದ ಪೋಟೋ ವೈರಲ್ ಆಗಿತ್ತು. ಇದು ಉಡುಗೊರೆಯಾಗಿ ನೀಡಿದ್ದು ಇದನ್ನ ನೀಡಿದವರೇ ಮತ್ತೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ ಅಂತ ವಿನಯ್ ಗುರೂಜಿ ಸ್ಪಷ್ಟನೆ ನೀಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನ ಅರಣ್ಯ ಇಲಾಖೆಗೆ ನೀಡಿದ್ದಾರೆ. ಇದರ ಬೆನ್ನಲ್ಲೆ ಅರಣ್ಯಾಧಿಕಾರಿಗಳ ತಂಡ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

Tap to resize

Latest Videos

ವಿನಯ್ ಗುರೂಜಿಯಿಂದ ಸ್ಪಷ್ಟನೆ: ಕೆಲ ದಿನಗಳ ಹಿಂದೆ ರಿಯಾಲಿಟಿ ಶೋನಲ್ಲಿ ವರ್ತೂರು ಸಂತೋಷ್ ಹುಲಿ ಉಗುರು ಹಾಕ್ಕೊಂಡಿದ್ದ ಹಿನ್ನೆಲೆಯಲ್ಲಿ ಆತನನ್ನ  ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಆತನ ಬಂಧನ ವಾಗ್ತಿದ್ದಂತೆ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ವೈರಲ್ ಆಗಿತ್ತು. ಆದರೆ, ಈ ಪೋಟೋ ಎರಡು ವರ್ಷದ ಹಿಂದೆಯೂ ಇದೇ ರೀತಿ ಸದ್ದು ಮಾಡಿತ್ತು. ಈಗ ಮತ್ತೆ ಸದ್ದು ಮಾಡ್ತಿದೆ. ಇದು ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬುವವರು ಗೌರಿಗದ್ದೆ ಆಶ್ರಮಕ್ಕೆ ಉಡುಗೊರೆಯಾಗಿ ನೀಡಿದ್ರು ಅನ್ನೋ ದಾಖಲೆಯನ್ನ ನೀಡಿದ್ದಾರೆ. ಅಷ್ಟೆ ಅಲ್ಲದೆ ಹುಲಿ ಚರ್ಮ ಅಂದು ವಿವಾದಕ್ಕೆ ಕಾರಣವಾಗ್ತಿದ್ದಂತೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. 

ನಿಖಿಲ್‌ಗೆ ಗಿಫ್ಟ್ ಬಂದಿರೋದು ಎಂದು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರಿನ ಪೆಂಡೆಂಟ್ ಒಪ್ಪಿಸಿದ ಎಚ್‌ಡಿಕೆ!

ಅದು ಅಮರೇಂದ್ರ ಪೂರ್ವಜರಿಂದ ಅಮರೇಂದ್ರ ಅವರಿಗೆ ಬಂದಿತ್ತು. ಅವರು ಅದನ್ನ ಉಡುಗೊರೆಯಾಗಿ ವಿನಯ್ ಗುರೂಜಿಗೆ ನೀಡಿದ್ದರು. ಸುದ್ದಿ ವಿವಾದದ ರೂಪ ಪಡೆಯುತ್ತಿದ್ದಂತೆ ಮತ್ತೆ ವಾಸ್ ನೀಡಿದ್ದರು. ಅದು ಗುರೂಜಿ ಬಳಿ ಇದ್ದದ್ದು ಎರಡೇ ದಿನವಷ್ಟೆ. ಬಳಿಕ ವಿನಯ್ ಗುರೂಜಿ ಅದನ್ನ ವಾಪಸ್ ನೀಡೀದ  ಬಳಿಕ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ವಾಪಸ್ಸು ನೀಡಿದ್ದಾರೆ. ಹುಲಿ ಚರ್ಮ ಅಮರೇಂದ್ರ ಅವರಿಗೆ ಬಂದ ಎಲ್ಲಾ ದಾಖಲೆಗಳು ಅವರ ಬಳಿ ಇವೆ. ಅದೇ ಹುಲಿ ಚರ್ಮ 2 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಈಗ ಅಧಿಕಾರಿಗಳು ಮತ್ತೆ ತನಿಖೆಗೆ ಕರೆದರೆ ಹೋಗಿ ಮಾಹಿತಿ ಹಾಗೂ ದಾಖಲೆ ನೀಡಿ ತನಿಖೆಗೆ ಸಹಕರಿಸ್ತೀನಿ ಅಂತ ವಿನಯ್ ಗುರೂಜಿ ಸ್ಪಷ್ಟನೆ ನೀಡಿದ್ದಾರೆ.... 

ಅರಣ್ಯಾಧಿಕಾರಿಗಳಿಂದ ಸ್ಥಳ ಮಹಜರ್: ಇನ್ನು ತನಿಖೆಗೆ ಸಹಕರಿಸ್ತೀನಿ ಅಂತ ಹೇಳ್ತಾ ಇದ್ದಂತೆ  ಕೊಪ್ಪ ಡಿ.ಎಫ್.ಓ. ನಂದೀಶ್ ಹಾಗೂ ಅಧಿಕಾರಿಗಳ ತಂಡ ಗೌರಿ ಗದ್ದೆ ಆಶ್ರಮಕ್ಕೆ ಆಗಮಿಸಿ, ಆಶ್ರಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಮಹಜರ್ ಕೂಡ ನಡೆಸಿದ್ರು. ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಿಂದ ಸೂಚನೆ ಬಂದ ಹಿನ್ನೆಲೆ ಗೌರಿ ಗದ್ದೆ ಆಶ್ರಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ವಿನಯ್ ಗುರೂಜಿ ಸೇರಿದಂತೆ ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿಯನ್ನ ಪಡೆದ್ರು. ಬೆಂಗಳೂರು ಕೇಂದ್ರ ಕಚೇರಿಯಿಂದ ಸೂಚನೆ ಬಂದಿದ್ರಿಂದ ಅಗಮಿಸಿದ್ದೇವೆ. ಯಾರು ದೂರು ನೀಡಿದ್ದಾರೋ ಮಾಹಿತಿ ಇಲ್ಲ. 

Jailer ನರಸಿಂಹನ ಪಾತ್ರವೇ ಸಿನಿಮಾ ಆಗುತ್ತಾ?: ಶಿವಣ್ಣನ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?

ಹುಲಿ ಚರ್ಮದ ಉಡುಗರೆಯ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ. ಇಲ್ಲಿನ ವರದಿಯನ್ನ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು ಎಂದು ಡಿ.ಎಫ್.ಓ ನಂದೀಶ್  ಹೇಳಿದ್ದಾರೆ.ಒಟ್ಟಾರೆ, ಗೌರಿ ಗದ್ದೆಯಲ್ಲಿ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದ ಪೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಹುಲಿ ಚರ್ಮ ವಾಪಸ್ದು ನೀಡಿ ಎರಡು ವರ್ಷ ಕಳೆದಿದೆ ಅಂತಿದ್ರು ವೈರಲ್ ಆಗ್ತಿದ್ದಂತೆ ಅರಣ್ಯ ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ ಸರ್ಚ್ ಮಾಡಿದ್ರು. ಮುಂದೆ ಯಾವ ಹಂತಕ್ಕೆ ಅಧಿಕಾರಿಗಳು ಬರ್ತಾರೆ ಅನ್ನೋದು ಕಾದು ನೋಡಬೇಕಾಗಿದೆ.

click me!