ಬೆಂಗಳೂರು ತಂಪು.. ತಂಪು.. ಕೂಲ್‌.. ಕೂಲ್‌: ದಶಕದ ಬಳಿಕ ದಾಖಲೆಯಾಯ್ತು ಅಕ್ಟೋಬರ್‌ ಚಳಿ

By Sathish Kumar KH  |  First Published Oct 25, 2023, 5:34 PM IST

ಉದ್ಯಾನನಗರಿ ಬೆಂಗಳೂರಿನಲ್ಲಿ ಕಳೆದ 10 ವರ್ಷದಲ್ಲಿಯೇ ಅಕ್ಟೋಬರ್‌ ತಿಂಗಳಲ್ಲಿ ಅತಿ ಹೆಚ್ಚು ಚಳಿಯ ವಾತಾವರಣ ದಾಖಲಾಗಿದೆ.


ಬೆಂಗಳೂರು (ಅ.25): ರಾಜ್ಯದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ 10 ವರ್ಷಗಳ ಬಳಿಕ ಅಕ್ಟೋಬರ್‌ 24ರಂದು ಅತ್ಯಂತ ಹೆಚ್ಚಿನ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕಳೆದ 2013ರಲ್ಲಿ ದಾಖಲಾಗಿದ್ದ ಚಳಿಯ ವಾತಾವರಣದ ಮಾದರಿಯಲ್ಲಿಯೇ ಈ ವರ್ಷವೂ ಹೆಚ್ಚಿನ ಚಳಿಯ ವಾತಾವರಣ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ.

ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆ ಎದುರಾಗಿದ್ದು, 216 ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಲಾಗಿದೆ. ಇನ್ನು ರಾಜ್ಯದಲ್ಲಿನ ಬಹುತೇಕ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಹೀಗಿರುವಾಗ ಹಿಂಗಾರು ಮಳೆಯ ಅವಧಿಯಲ್ಲಿಯೇ ಚಳಿಗಾಲ ಶುರುವಾದಂತೆ ಕಾಣುತ್ತಿವೆ. ಮಳೆಗಾಲವೇ ಮುಗಿಯದಿದ್ದರೂ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಚಳಿಯ ಅನುಭವ ಉಂಟಾಗುತ್ತಿದೆ. ರಾತ್ರಿ ಸಂಚಾರದ ವೇಳೆ ಬೆಂಗಳೂರು: ಈಶಾನ್ಯ ಗಾಳಿ ಆರಂಭ ಆಗಿರುವುದನ್ನು ಹವಾಮಾನ ಇಲಾಖೆ ಅಧಿಕೃತಗೊಳಿಸದಿದ್ದರೂ, ನಗರದಲ್ಲಿ ಚಳಿ ವಾತಾವರಣ ಶುರುವಾಗಿದೆ.

Latest Videos

undefined

ಹುಲಿ ಉಗುರು ಪೆಂಡೆಂಟ್‌ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್‌: ನಿಖಿಲ್‌ ಕುಮಾರಸ್ವಾಮಿ ಬಚಾವ್‌!

ಹೌದು, ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಕ್ಟೋಬರ್‌ 24ರ (ಮಂಗಳವಾರ) ಬೆಳಗ್ಗೆ 8.30ರ ಹೊತ್ತಿಗೆ 17.1 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ 10 ವರ್ಷಗಳಲ್ಲಿಯೇ ದಾಖಲಾದ ಅತಿ ಕಡಿಮೆ ಉಷ್ಣಾಂಶವಾಗಿದೆ. ಅಂದರೆ, ಕಳೆದ ಹತ್ತು ವರ್ಷಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚಿನ ಚಳಿಯಾಗಿದೆ. ಇನ್ನು ಸಾಮಾನ್ಯ ದಿನಗಳಿಗಿಂತ 2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 17.2 ಡಿಗ್ರಿ ಸೆಲ್ಸಿಯಸ್‌  ಹಾಗೂ ಹೆಚ್‌ಎಲ್‌ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 18 ರಂದು ಬೆಳಗ್ಗೆ 18.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದಾದ ನಂತರ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ವಾತಾವರಣ ಇರಬೇಕಿತ್ತು. ಆದರೆ, ನಗರದಲ್ಲಿ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಆಶ್ಚರ್ಯಕರವಾಗಿದೆ. ಈ ಕುಸಿತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನು ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಅತಿಹೆಚ್ಚಿನ ಉಷ್ಣಾಂಶ ಹಾಗೂ ಬೆಳಗ್ಗೆ 6 ರಿಂದ 8 ಗಂಟೆ ನಡುವೆ ಅತಿ ಕಡಿಮೆ ಉಷ್ಣಾಂಶ ದಾಖಲಾಗುತ್ತಿದೆ.

ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ: ಭಕ್ತರು ಆಗಮಿಸದಂತೆ ನಿಷೇಧಾಜ್ಞೆ ಜಾರಿ

ಬೆಂಗಳೂರಿನ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನವೆಂಬರ್ ಕೊನೆಯ ವಾರದಿಂದ ಬೆಂಗಳೂರಿನಲ್ಲಿ ಚಳಿಗಾಲದ ವಾತಾವರಣ ಅನುಭವಕ್ಕೆ ಬರಲಿದೆ. ಎಲ್‌ನಿನೋ ಪ್ರಭಾವದಿಂದಾಗಿ ಕಳೆದ ವರ್ಷದಂತೆ ಕಠಿಣ ಚಳಿಗಾಲದ ಸಂಭವನೀಯತೆ ಕಡಿಮೆಯಿದೆ. ಜೊತೆಗೆ, ನವೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

city observatory sees the coolest October morning in at least 10 years by recording a minimum of 17.1c which is 2.3c below normal. HAL and KIAL record a min of 17c and 17.2c respectively.

— Bengaluru Weather (@BngWeather)
click me!