ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಗೌರಿ ಗದ್ದೆ ಅವಧೂತ ವಿನಯ್ ಗುರೂಜಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು (ಆ.27): ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಗೌರಿಗದ್ದೆ ವಿನಯ್ ಗುರೂಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಬುಧವಾರ ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ಯಲ್ಲಿ ಯಡಿಯೂರಪ್ಪ ಜೊತೆ ಚರ್ಚಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗುರೂಜಿ, ‘ಗೋ ಹತ್ಯೆ ನಿಷೇಧ ಕಾನೂನು ಅನಿವಾರ್ಯ. ತಾವು ಕೊಟ್ಟ ಸಲಹೆಗಳನ್ನು ಸಿಎಂ ಎಂದೂ ನಿರಾಕರಿಸಿಲ್ಲ ಎಂದರು.
ಬೇಳೂರು ಟಾಸ್ಕ್ ಫೋರ್ಸ್ ಕಾರ್ಯಕ್ಕೆ ವಿನಯ್ ಗುರೂಜಿ ಶ್ಲಾಘನೆ...
ಎಂಜಲು ಪ್ರಸಾದಕ್ಕೆ ಸ್ಪಷ್ಟನೆ: ತಾವು ತಿಂದುಳಿದ ಅನ್ನವನ್ನು ಪ್ರಸಾದವಾಗಿ ಹಂಚುತ್ತಾರೆ ಎಂಬ ಎಂಎಲ್‌ಸಿ ರಘು ಆಚಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಗುರೂಜಿ, ನಾನು ಊಟ ಮಾಡಿದ ಮೇಲೆ ತಟ್ಟೆಎಲ್ಲಿಟ್ಟಿದ್ದಾರೆ, ಲೋಟ ಎಲ್ಲಿಟ್ಟಿದ್ದಾರೆ ಎಂಬುದನ್ನು ನೋಡಲು ಆಗುವುದಿಲ್ಲ. ಅದು ನನ್ನ ಗಮನಕ್ಕೆ ಬರದೇ ನಡೆದಿರುವ ಪ್ರಸಂಗ. ಒಂದು ವೇಳೆ ಗಮನಕ್ಕೆ ಬಂದಿದ್ದರೆ ಗಾಂಧಿವಾದದ ರೀತಿಯಲ್ಲಿ ಖಂಡಿಸುತ್ತಿದೆ ಎಂದರು.
ಅವರವರ ಭಾವ ಅವರದ್ದು. ಆದರೆ, ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ. ನಾನೇ ನಿಶ್ಚಯ ಮಾಡಿದ ಮದುವೆ ಅದಾಗಿತ್ತು. ಲಿಂಗಾಯತರಲ್ಲಿ ಒಂದು ಸಂಪ್ರದಾಯ ಇದೆ. ಗುರುಗಳು ಊಟ ಮಾಡಿದ ಮೇಲೆ ಭಕ್ತರು ಪ್ರಸಾದ ಸ್ವೀಕರಿಸುವ ಪದ್ಧತಿ ಇದೆ ಎಂದೂ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.