ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಮುಂದಾಗಿದ್ದ ಸರ್ಕಾರಿ ಅಧಿಕಾರಿ: ಎಸಿಬಿ ದಾಳಿ

By Kannadaprabha NewsFirst Published Aug 27, 2020, 9:26 AM IST
Highlights

ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿ| ಸರ್ಕಾರಿ ಅಧಿಕಾರಿಯ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ| ಹಲವು ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು| 

ಬೆಂಗಳೂರು(ಆ.27):  ಖಾಸಗಿ ವ್ಯಕ್ತಿ ಜತೆ ಶಾಮೀಲಾಗಿ ಸುಮಾರು ಎಂಟು ಎಕರೆ ಜಮೀನಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ವಂಚಿಸಲು ಮುಂದಾಗಿದ್ದ ಓರ್ವ ಸರ್ಕಾರಿ ಅಧಿಕಾರಿಯ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೊಮ್ಮನಹಳ್ಳಿಯ ಹಿರಿಯ ಉಪನೋಂದಾಣಿಧಿಕಾರಿಯ ಕಚೇರಿ, ಖಾಸಗಿ ವ್ಯಕ್ತಿಗಳಾದ ಎಸ್‌.ರಾಜಪ್ಪ ಎಂಬುವರಿಗೆ ಸೇರಿದ ಹೊಸಕೋಟೆಯ ಪರಮನಹಳ್ಳಿ ಗ್ರಾಮ, ಮೋಹನ್‌ ಕುಮಾರ್‌ ಎಂಬುವರಿಗೆ ಸೇರಿದ ಕೊತ್ತನೂರಿನಲ್ಲಿನ ನಿವಾಸ ಮತ್ತು ಎಚ್‌.ಆರ್‌.ಬಿ.ಆರ್‌.ಲೇಔಟ್‌ನಲ್ಲಿನ ಗೆಸ್ಟ್‌ಗೌಸ್‌ ಮೇಲೆ ಕಾರ್ಯಾಚರಣೆ ಮಾಡಲಾಗಿದೆ.

ಮೈಸೂರು ಪಾಲಿಕೆ ಅಧಿಕಾರಿ ಮನೆಯಲ್ಲಿ 1.3 ಕೆ.ಜಿ. ಚಿನ್ನ ಪತ್ತೆ!

ಬಿದರಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ ಎಂಟು ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಬೊಮ್ಮನಹಳ್ಳಿ ಉಪನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಜಮೀನಿನ ದಾಖಲಾತಿಗಳನ್ನು ನಕಲಿ ಮಾಡಿದ್ದಾರೆ.
 

click me!