Vijayapura: ದ್ರಾಕ್ಷಿ ಬೆಳೆ ರಕ್ಷಣೆಗೆ ಹೊಸ ಅಸ್ತ್ರ ಹುಡುಕಿಕೊಂಡ ರೈತರು: ಹಕ್ಕಿಗಳ ಕಾಟಕ್ಕೆ ಸಿಕ್ತು ಮುಕ್ತಿ

By Sathish Kumar KH  |  First Published Jan 24, 2023, 7:54 PM IST

ದ್ರಾಕ್ಷಿ ಬೆಳೆಯ ರಕ್ಷಣೆಗೆ ವಿಜಯಪುರ ರೈತರು ಹೊಸ ಅಸ್ತ್ರವನ್ನು ಹುಡುಕಿಕೊಂಡಿದ್ದಾರೆ. ಕಾಡು ಪ್ರಾಣಿಗಳು, ಪಕ್ಷಿಗಳಿಂದ ತಮ್ಮ ತೋಟದಲ್ಲಿರುವ ದ್ರಾಕ್ಷಿ ಹಣ್ಣಿನ ಬೆಳೆಯನ್ನಯ ರಕ್ಷಣೆ ಮಾಡಿಕೊಳ್ಳಲು ಗನ್‌ ಫೈರಿಂಗ್‌ ಸೌಂಡ್‌ ಬಳಸುವ ಮೂಲಕ ದ್ರಾಕ್ಷಿ ಬೆಳೆ ರಕ್ಷಣೆಯಲ್ಲಿ ರೈತರು ಯಶಸ್ವಿ ಆಗಿದ್ದಾರೆ.


ವಿಜಯಪುರ (ಜ.24): ದ್ರಾಕ್ಷಿ ಬೆಳೆಯ ರಕ್ಷಣೆಗೆ ವಿಜಯಪುರ ರೈತರು ಹೊಸ ಅಸ್ತ್ರವನ್ನು ಹುಡುಕಿಕೊಂಡಿದ್ದಾರೆ. ಕಾಡು ಪ್ರಾಣಿಗಳು, ಪಕ್ಷಿಗಳಿಂದ ತಮ್ಮ ತೋಟದಲ್ಲಿರುವ ದ್ರಾಕ್ಷಿ ಹಣ್ಣಿನ ಬೆಳೆಯನ್ನ ರಕ್ಷಣೆ ಮಾಡಿಕೊಳ್ಳಲು ಗನ್‌ ಫೈರಿಂಗ್‌ ಸೌಂಡ್‌ ಬಳಸುವ ಮೂಲಕ ದ್ರಾಕ್ಷಿ ಬೆಳೆ ರಕ್ಷಣೆಯಲ್ಲಿ ರೈತರು ಯಶಸ್ವಿ ಆಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗಾರರ ಸಂಖ್ಯೆ ಅಧಿಕವಾಗಿದೆ. ಜೊತೆಗೆ, ದ್ರಾಕ್ಷಿ ಬೆಳೆಯಿಂದ ಲಾಭವೂ ಸಿಗುತ್ತಿದೆ. ಆದರೆ, ದ್ರಾಕ್ಷಿ ಬೆಳೆ ಕಟಾವಿಗೆ ಬರುವ ಅವಧಿವರೆಗೂ ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿತ್ತು. ದ್ರಾಕ್ಷಿ ಗೊಂಚಲು ಆರಂಭವಾಯಿತು ಎಂದಾಕ್ಷಣ ಅದಕ್ಕೆ ಹಕ್ಕಿ, ಪಕ್ಷಿಗಳು ಮತ್ತು ಕಾಡು ಪ್ರಾಣಿಗಳ ಕಾಟ ಭಾರಿ ಪ್ರಮಾಣದಲ್ಲಿ ಹಚ್ಚಾಗುತ್ತದೆ. ಇನ್ನು ಕಳ್ಳ ಕಾಕರ ಹಾವಳಿಯೂ ದ್ರಾಕ್ಷಿ ತೋಟಕ್ಕೆ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ಪ್ರತಿವರ್ಷ ದ್ರಾಕ್ಷಿ ಕಟಾವು ಬಂತೆಂದರೆ ಹಗಲು- ರಾತ್ರಿ ಎನ್ನದೇ ನಿದ್ದೆಯಿಲ್ಲದೇ ತೋಟ ಕಾಯುವುದು ಅನಿವಾರ್ಯ ಆಗುತ್ತಿತ್ತು. ಆದರೂ ತೋಟದ ಎಲ್ಲ ಮೂಲೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. 

Tap to resize

Latest Videos

ತೊಗರಿ ಬೆಳೆಗಾರರಿಗೆ ಗುಡ್‌ ನ್ಯೂಸ್‌- ಬೆಳೆ ನಷ್ಟಕ್ಕೆ ಸಂಜೆಯೊಳಗೆ ಪರಿಹಾರ ಧನ ಘೋಷಣೆ: ಸಿಎಂ ಬೊಮ್ಮಾಯಿ ಭರವಸೆ

ಇಲ್ಲಿ ಶಬ್ದವೇ ಸೆಕ್ಯೂರಿಟಿ ಗಾರ್ಡ್: ವಿಜಯಪುರ ರೈತರು ತಮ್ಮ ದ್ರಾಕ್ಷಿ ಬೆಳೆ ರಕ್ಷಣೆ ಮಾಡಲು ಕಲ್ಲು ಬೀಸುವ ಕವಣಿ, ಪಾತ್ರೆ ಅಥವಾ ಖಾಲಿ ಡಬ್ಬಗಳನ್ನು ಬಾರಿಸುವುದು, ಹೊಲಗಳನ್ನು ಕಾಯಲು ಕಾರ್ಮಿಕನ್ನು ನೇಮಕ ಮಾಡುವುದು ಸೇರಿ ಅನೇಕ ಕಾರ್ಯಕ್ಕೆ ಮುಂದಾಗುತ್ತಿದ್ದರು. ಆದರೂ ಇದರಲ್ಲಿ ಭಾರಿ ಪ್ರಮಾಣದ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಈ ವರ್ಷ ದ್ರಾಕ್ಷಿ ಸೀಸನ್‌ನಲ್ಲಿ ದ್ರಾಕ್ಷಿ ಹೊಲಗಳನ್ನ ಕಾಯೋದಕ್ಕೆ ರೈತರ ಹೊಸ ಟೆಕ್ನಿಕ್ ಆರಂಭಿಸಿದ್ದಾರೆ. ಈ ಹೊಸ ತಂತ್ರದಲ್ಲಿ ಸೌಂಡ್‌ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದೆ. ಅದು ಹೇಗೆ ಅಂತೀರಾ.? ಇಲ್ಲಿದೆ ನೋಡಿ ಉತ್ತರ..

ದ್ರಾಕ್ಷಿ ಸೀಸನ್‌‌ನಲ್ಲಿ ಹಕ್ಕಿ-ಪಕ್ಷಿಗಳ ಹಾವಳಿ: ಹಕ್ಕಿಗಳ ಹಾವಳಿಗೆ ಬೆಳೆ ಬಂದರೂ ರೈತರ ಕೈಗೆ ದ್ರಾಕ್ಷಿ ಬೆಳೆ ಹಾಗೂ ಅದರ ಲಾಭ ಸಿಗುತ್ತಿರಲಿಲ್ಲ. ಈ ಬಾರಿ ಪಕ್ಷಿಗಳಿಂದ ದ್ರಾಕ್ಷಿ ಬೆಳೆ ರಕ್ಷಣೆಗೆ ಬಂದೂಕು ಗುಂಡು ಹಾರಿಸುವ ಶಬ್ದ (ಗನ್ ಪೈರಿಂಗ್ ಸೌಂಡ್) ಬಳಸಿ ದ್ರಾಕ್ಷಿ ರಕ್ಷಣೆಗೆ ಮುಂದಾಗಿದೆ. ಸೌಂಡ್ ಸಿಸ್ಟಮ್‌ನಲ್ಲಿ ಗನ್ ಪೈರಿಂಗ್ ಸೌಂಡ್ ಮಾಡಲಾಗುತ್ತದೆ. ಹೀಗೆ ಪ್ರತಿ ಬಾರಿ ಗನ್‌ ಫೈರಿಂಗ್‌ ಶಬ್ದ ಉಂಟಾದ ತಕ್ಷಣ ಹೊಲದ ಯಾವುದೇ ಮೂಲೆಯಲ್ಲಿ ಹಕ್ಕಿ, ಪಕ್ಷಿಗಳಿದ್ದರೂ ಸಾವಿನ ಭಯದಿಂದ ಹಾರಿ ಹೋಗುತ್ತವೆ. ಈ ಪ್ರಯೋಗವನ್ನು ಮಾಡಿ ರೈತರು ಯಶಸ್ವಿಯೂ ಆಗಿದ್ದಾರೆ.

ಸೌಂಡ್‌ ಸಿಸ್ಟಂಗೆ ಸೋಲಾರ್‌ ಅಳವಡಿಕೆ: ಇನ್ನು ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಇದ್ದೇ ಇರುತ್ತದೆ. ಹೀಗಾಗಿ, ಸೌಂಡ್‌ ಸಿಸ್ಟಂ ಯಾವಗಲೂ ಚಾಲೂ ಮಾಡಿ ಇಡಲು ಸಮಸ್ಯೆ ಎದುರಾಗಿತ್ತು. ಹೀಗಾಗಿ, ಹೊಲದಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿದ್ದು, ಸೋಲಾರ್ ವಿದ್ಯುತ್‌ ಅನ್ನು ಸೌಂಡ್‌ ಸಿಸ್ಟಂಗೆ ಸಂಪರ್ಕ ಮಾಡಲಾಗಿದೆ. ಹಗಲು ಹೊತ್ತಿನಲ್ಲಿ ಯಾವಾಗಲೂ ಸೌಂಡ್‌ ಸಿಸ್ಟಂ ಓಡುತ್ತಲಿರುತ್ತದೆ. ಪ್ರತಿ ನಿಮಿಷಕ್ಕೆ ಐದಾರು ಬಾರಿ ಗನ್‌ ಫೈರಿಂಗ್‌ ಶಬ್ದ ಬರುತ್ತದೆ. ಆಗ ಹಕ್ಕಿಗಳು ದ್ರಾಕ್ಷಿ ಹೊಲದಲ್ಲಿ ಕುಳಿತುಕೊಳ್ಳದೇ ಹಾರಿ ಹೋಗುತ್ತವೆ. ಇನ್ನು ಪದೇ ಪದೆ ಗನ್‌ ಫೈರಿಂಗ್‌ ಆಗುತ್ತಿರುವುದರಿಂದ ಇಲ್ಲ ಆಹಾರ ಸಿಗುವುದಿಲ್ಲ ಎಂದು ಪಕ್ಷಿಗಳು ಶಾಶ್ವತವಾಗಿ ಬೇರೆ ಕಡೆಗೆ ಆಹಾರ ಹುಡಿಕಿಕೊಂಡು ಹೋಗಿವೆ. ಇದರಿಂದ ಪಕ್ಷಿಗಳ ಕಾಟ ಕಡಿಮೆಯಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ. 

ವಿಜಯಪುರ ಸಿದ್ದರಾಮೇಶ್ವರ ಜಾತ್ರೆ: ಕಂಕಣ ಭಾಗ್ಯ ಕರುಣಿಸುವ ನಂದಿಕೋಲು

ಬಸವನ ಬಾಗೇವಾಡಿಯಲ್ಲಿ ಅತ್ಯಧಿಕ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರು, ಟಕ್ಕಳಕಿ, ಕಾರಜೋಳ ಸೇರಿ ದ್ರಾಕ್ಷಿ ಬೆಳೆಯುವ ಕಡೆಗಳಲ್ಲಿ ರೈತರು ಸೌಂಡ್‌ ಸಿಸ್ಟಂ ಮೂಲಕ ಗನ್‌ಫೈರಿಂಗ್‌ ಮಾಡುವ ರಕ್ಷಣಾ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಬಂದೂಕಿನಿಂದ ಗುಂಡು ಹಾರಿಸುವ ತೀಕ್ಷ್ಣ ಶಬ್ದಕ್ಕೆ ದ್ರಾಕ್ಷಿ ಹೊಲಗಳತ್ತ ಹಕ್ಕಿ, ಪಕ್ಷಿಗಳು ಸುಳಿಯುತ್ತಿಲ್ಲ. ಪ್ರತಿ ಒಂದು ಎಕರೆಗೆ 2 ಸೋಲಾರ್ ಸೌಂಡ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಹಕ್ಕಿಗಳಿಂದ ದ್ರಾಕ್ಷಿ ಕಾಯೋದಕ್ಕಾಗಿಯೇ ತಿಂಗಳಿಗೆ 15 ರಿಂದ 20 ಸಾವಿರ ಖರ್ಚು ಮಾಡ್ತಿದ್ದ ರೈತರು, ಈಗ ಕೇವಲ 2 ಸಾವಿರ ರೂ.ಗಳಲ್ಲಿ ಸೌಂಡ್ ಸಿಸ್ಟಂ ಅಳವಡಿಸಿ ದ್ರಾಕ್ಷಿ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. 

click me!