ರಾಜ್ಯದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿರುವ ಎರಡನೇ ಜಿಲ್ಲೆ ವಿಜಯಪುರದಲ್ಲಿ ಇದೀಗ ವಕ್ಫ್ ಆಸ್ತಿಗೆ ಸಂಬಂಧಿಸಿ ವಿವಾದ ಭುಗಿಲೆದ್ದಿದೆ.
ವಿಜಯಪುರ (ಅ.27): ರಾಜ್ಯದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿರುವ ಎರಡನೇ ಜಿಲ್ಲೆ ವಿಜಯಪುರದಲ್ಲಿ ಇದೀಗ ವಕ್ಫ್ ಆಸ್ತಿಗೆ ಸಂಬಂಧಿಸಿ ವಿವಾದ ಭುಗಿಲೆದ್ದಿದೆ. ಕಂದಾಯ ಇಲಾಖೆಯಿಂದ ಜಿಲ್ಲೆಯ 139 ರೈತರಿಗೆ ನೀಡಿದ ತಿಳಿವಳಿಕೆ ನೋಟಿಸ್ ಇದೀಗ ಜಿಲ್ಲೆಯ ನೂರಾರು ಅನ್ನದಾತರನ್ನು ಆತಂಕಕ್ಕೆ ತಳ್ಳಿದೆ. ರೈತರ ಪಹಣಿಯಲ್ಲಿ ವಕ್ಫ್ ಅಸ್ತಿಯೆಂದು ನಮೂದಿಸಲು ಮುಂದಾಗಿರುವುದು ಸಿಟ್ಟಿಗೆ ಕಾರಣವಾಗಿದೆ.
ಏನಿದು ವಿವಾದ?:
undefined
ಹೊನವಾಡದ 1200 ಎಕರೆ ಸೇರಿ ಜಿಲ್ಲೆಯಲ್ಲಿ ಸುಮಾರು 13000 ಎಕರೆ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ನಮೂದಿಸಲು ರಾಜ್ಯ ವಕ್ಫ್ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದ್ದ ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ್ ಈ ಮೊದಲೇ ಗೆಜಿಟ್ ಆಗಿರುವ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವಂತೆ ಮೌಖಿಕ ಆದೇಶ ಹೊರಡಿಸಿದ್ದರು. ಇದರಿಂದಾಗಿ ಕಂದಾಯ ಇಲಾಖೆಯಿಂದ ಇದೀಗ ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ.
ವಕ್ಫ್ ಮಂಡಳಿ ಸಭೆ ವೇಳೆ ಹೈಡ್ರಾಮಾ; ಗ್ಲಾಸ್ ಒಡೆದು ಪೀಠದತ್ತ ಎಸೆದ ಬ್ಯಾನರ್ಜಿ
ನೊಟೀಸ್‌ನಲ್ಲಿ ಏನಿದೆ?:
ಜಿಲ್ಲಾ ವಕ್ಫ್ ಅಧಿಕಾರಿಗಳು ಸೆ.26 ರಂದು ಜಿಲ್ಲೆಯ ವಕ್ಫ್ ಆಸ್ತಿಗಳ ವಿವರಣೆ ನೀಡಿದ್ದು, ಕಂದಾಯ ಇಲಾಖೆಯಲ್ಲಿ ಇಂಡೀಕರಣ(ಅಪ್ ಡೇಟ್)ಗೊಳಿ ಸಲು ಕೋರಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ವಕ್ಸ್ ಆಸ್ತಿಗಳ ಹೆಸರನ್ನು ಪಹಣಿಯಲ್ಲಿ ಇಂದೀಕರಣಗೊಳಿಸಲು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಪಹಣಿ ಕಾಲಂ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ದಾಖಲಿಸಲು ತಮಗೆ ಆಕ್ಷೇಪಣೆ ಇದ್ದಲ್ಲಿ ಪತ್ರ ತಲುಪಿದ 2 ದಿನಗಳೊಳಗಾಗಿ ಖುದ್ದಾಗಿ ಕಚೇರಿಗೆ ಆಗಮಿಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
News Hour: ವಕ್ಫ್ ಬೋರ್ಡ್‌ಗೆ ಬಿಸಿ ಮುಟ್ಟಿಸಿದ ಹಿಂದೂ ಸಂಘಟನೆಗಳು!
ಜಿಲ್ಲಾಡಳಿತದನಿಲುವೇನು?:
1974ರಲ್ಲೇ ವಕ್ಫ್ ಮಂಡಳಿಯಿಂದ ಹೊರಡಿಸಿದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಇರುವ ಆಸ್ತಿ ಗಳನ್ನು ಕಂದಾಯ ಇಲಾಖೆ ಇಂದೀಕರಣಕ್ಕಾಗಿ ಪಟ್ಟ ಒದಗಿಸಲಾಗಿದೆ. ಹೀಗಾಗಿ ರೈತರಿಗೆ ನೋಟಿಸ್ ನೀಡಲಾಗುತ್ತಿದ್ದು ರೈತರು, ಖಾಸಗಿ ಭೂ ಮಾಲೀಕರು ಹೆದರುವ ಅವಶ್ಯಕತೆ ಇಲ್ಲ. ತಮ್ಮ ಬಳಿಯಿರುವ ದಾಖಲೆ ಕಂದಾಯ ಇಲಾಖೆಗೆ ಸಲ್ಲಿಸಿದರೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಹೋರಾಟ: ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಅ.15ರಂದು ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.