
ವಿಜಯಪುರ (ಜ.11): ನೀವು ಸಾಬರಿಗೆ ಮುತ್ತು ಕೊಡಿ, ಕೆಜಿ ಹಳ್ಳಿ ಡಿಜೆ ಹಳ್ಳಿ ಆರೋಪಿಗಳಿಗೆ ಮುತ್ತು ಕೊಡಿ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಮುತ್ತುಕೊಡಿ. ಅವರಿಗೆ ದಿನಾ ಮುತ್ತು ಕೊಡ್ತಾ ಹೋಗಿ 'ಮುತ್ತು ಕೊಡುವ ಗೃಹ ಮಂತ್ರಿ ಆಗುತ್ತೀರಿ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ಹಿಂದೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದ ವೇಳೆ ಲಾಠಿ ಚಾರ್ಜ್ ನಡೆಸದೇ ಮುತ್ತು ಕೊಡಬೇಕಿತ್ತಾ? ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿರುದ್ಧ ಮುತ್ತು ಕೊಡುವ ಗೃಹ ಮಂತ್ರಿ ಎಂದು ವ್ಯಂಗ್ಯ ಮಾಡಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗಿ ಲಾಠಿ ಚಾರ್ಜ್ ಮಾಡಲಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಮೇಲೆ ಲಾಠಿ ಚಾರ್ಜ್ ಮಾಡಲಿಲ್ಲ. ಮೀಸಲಾತಿ ಕೇಳಿದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿದರು. ಸಾಬರಿಗೆ ಹೀಗೆ ಮುತ್ತು ಕೊಡ್ತಾ ಇರಿ, ಮುತ್ತು ಕೊಡುವ ಗೃಹ ಮಂತ್ರಿ ಆಗ್ತೀರಿ ಎಂದು ವ್ಯಂಗ್ಯ ಮಾಡಿದರು.
ವಕ್ಫ್ ಮಂಡಳಿ ದೇಶಕ್ಕಂಟಿದ ಕ್ಯಾನ್ಸರ್ ಇದ್ದಂತೆ, ಅದನ್ನು ದೇಶದಿಂದ ತೊಲಗಿಸಬೇಕು: ಶಾಸಕ ಯತ್ನಾಳ್
ಮಾಧ್ಯಮಗಳ ವಿರುದ್ಧ ಯತ್ನಾಳ್ ಗರಂ
ಯತ್ನಾಳ್ ಬಣದ ವಿರುದ್ಧ ವಿಜಯೇಂದ್ರ ಶಕ್ತಿ ಪ್ರದರ್ಶನ ವಿಚಾರ ಮಾಧ್ಯಮಗಳ ಪ್ರಸಾರ ಕಂಡು ಗರಂ ಆದ ಯತ್ನಾಳರು, ನಾನು ಮಾಧ್ಯಮಗಳಲ್ಲಿ ಸುದ್ದಿ ನೋಡಿ ಅಂಜಿ ಹೋದೆ, ನಡುಗಿ ಹೋದೆ, ಅಖಾಡಕ್ಕಿಳಿದ ಯಡಿಯೂರಪ್ಪ, ಯತ್ನಾಳ್‌ಗೆ ಭಾರೀ ಹಿನ್ನಡೆ ಎಂದೆಲ್ಲ ಸುದ್ದಿ ಮಾಡಿದ್ರಿ, ವಾಹ್ ರೇ ವಾಹ್ ಮಾಧ್ಯಮಗಳೇ ಎಂದು ಗರಂ ಆದರು ಮುಂದುವರಿದು, ಯಾರು ಅಖಾಡಕ್ಕಿಳಿದ್ರೆ ಆಗೋದೇನಿದೆ? ಯತ್ನಾಳ್‌ಗೆ ಯಾರೂ ಏನೂ ಮಾಡೋಕೆ ಆಗೋಲ್ಲ ನೀವು ಎರಡು ದಿನ ಇದೇ ಸುದ್ದಿ ಹೊಡೀರಿ ಎಂದ ಯತ್ನಾಳ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ