ನಕ್ಸಲರನ್ನು ವಿಧಾನಸೌಧಕ್ಕೆ ಕರೆತರದಿರುವುದೇ ಪುಣ್ಯ: ಜೆಡಿಎಸ್‌ ನಾಯಕ ಜ್ಯೋತಿ ಪ್ರಕಾಶ ಮಿರ್ಜಿ

By Kannadaprabha News  |  First Published Jan 11, 2025, 12:43 PM IST

ನಕ್ಸಲ್ ಶರಣಾಗತಿ ಉತ್ತಮ ಕೆಲಸ. ಗೃಹ ಕಚೇರಿ ಕೃಷ್ಣದಲ್ಲಿ ಶರಣಾಗತಿ ಮಾಡಿರುವುದು ತಪ್ಪು. ಸರ್ಕಾರ ಈ ಕೆಲಸದಲ್ಲಿ ಕ್ರೆಡಿಟ್ ಮಾತ್ರ ತೆಗೆದುಕೊಳ್ಳಲಿ. ಈ ರೀತಿ ಪ್ರಚಾರ ಬೇಕಿ ರಲಿಲ್ಲ. ನಕ್ಸಲ್‌ರನ್ನು ನ್ಯಾಯಾಲಯ ಅಥವಾ ಕೋರ್ಟ್ ಮುಂದೆ ಹಾಜರಪಡಿಸುವ ಬದಲಿಗೆ ಸಿಎಂ ಕಚೇರಿಯಲ್ಲಿ ಹಾಜರು ಮಾಡಿದ್ದು ಸರಿಯಲ್ಲ ಎಂದ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ 
 


ಧಾರವಾಡ(ಜ.11):  ರಾಜ್ಯ ಸರ್ಕಾರವು ನಕ್ಸಲ್‌ರನ್ನು ವಿಧಾನಸೌಧದಲ್ಲಿ ಶರಣಾಗತಿ ಮಾಡಿಸದೇ ಇರುವುದು ನಮ್ಮ ಪುಣ್ಯ ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಹೇಳಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ಉತ್ತಮ ಕೆಲಸ. ಗೃಹ ಕಚೇರಿ ಕೃಷ್ಣದಲ್ಲಿ ಶರಣಾಗತಿ ಮಾಡಿರುವುದು ತಪ್ಪು. ಸರ್ಕಾರ ಈ ಕೆಲಸದಲ್ಲಿ ಕ್ರೆಡಿಟ್ ಮಾತ್ರ ತೆಗೆದುಕೊಳ್ಳಲಿ. ಈ ರೀತಿ ಪ್ರಚಾರ ಬೇಕಿ ರಲಿಲ್ಲ. ನಕ್ಸಲ್‌ರನ್ನು ನ್ಯಾಯಾಲಯ ಅಥವಾ ಕೋರ್ಟ್ ಮುಂದೆ ಹಾಜರಪಡಿಸುವ ಬದಲಿಗೆ ಸಿಎಂ ಕಚೇರಿಯಲ್ಲಿ ಹಾಜರು ಮಾಡಿದ್ದು ಸರಿಯಲ್ಲ ಎಂದರು. 

Tap to resize

Latest Videos

ನಕ್ಸಲರ ಶಸ್ತ್ರಾಸ್ತ್ರ ಎಲ್ಲಿದೆ ಅಂತ ಗೊತ್ತು: ಸಿಎಂ ಸಿದ್ದರಾಮಯ್ಯ

ನಕ್ಸಲ್‌ರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಶರಣಾಗತಿ ಮಾಡಿಸಿ, ರಾಜಕೀ ಯ ಲಾಭ ಪಡೆಯುವುದು ಬೇಡವಾಗಿ ತ್ತು. ನಾನು ಅಧಿಕಾರದಲ್ಲಿ ಇದ್ದಾಗ ಹಲವು ಭಯೋತ್ಪಾದಕರನ್ನು ಬಂಧಿಸಿದಾಗ, ಠಾಣೆಗೆ ಕರೆ ತಂದಿದ್ದೇನೆ ಹೊರತು ಮುಖ್ಯಮಂತ್ರಿಗಳ ಗೃಹ ಕಚೇರಿಗಲ್ಲ. ಈ ಸರ್ಕಾರ ಭವಿಷ್ಯದಲ್ಲಿ ವಿಧಾನಸೌಧದಲ್ಲಿ ಶರಣಾಗತಿ ಮಾಡಿಸಿದರೂ ಅಚ್ಚರಿ ಏನಲ್ಲ ಎಂದರು. 

ನಕ್ಸಲರ ಹಾಗೂ ಸರ್ಕಾರದ ನಡುವಿನ ಮಾತುಕತೆ ಏನು ಗೊತ್ತಿಲ್ಲ. ಪರಿಹಾರ ಕೊಡುವುದು ಮಧ್ಯಸ್ಥಿಕೆ ವಹಿಸಿದವರಿಗೆ ಗೊತ್ತು ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಕಮಿಷನ್ ಹಾವಳಿಯೂ ಸಹ ಹೆಚ್ಚಿದೆ. ಕಾಂಗ್ರೆಸ್ ಊಟೋಪಚಾರ, ಸಭೆ-ಸಮಾರಂಭಕ್ಕೂ ಹೈಕಮಾಂಡ್ ಅನುಮತಿ ನಾಚಿಕೆಗೇಡು. ಹೀಗೆ ಪಕ್ಷ ನಡೆಸುವುದೇ ಅಸಹ್ಯಕರ ಎಂದು ಜ್ಯೋತಿ ಪ್ರಕಾಶ, ಜಿಪಂ-ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದೆ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು. 

ನಕ್ಸಲರು ಶರಣಾಗಿದ್ದಾರೋ?, ಸರ್ಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ.ರವಿ

ವಿಜಯಪುರ:  ನಕ್ಸಲರು ಶರಣಾಗಿದ್ದರೇ ಅವರು ಸರ್ಕಾರಕ್ಕೇ ಕಂಡಿಷನ್ ಹಾಕುತ್ತಿರಲಿಲ್ಲ. ಅವರ ಬಳಿಯ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಇಲ್ಲಿ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಗಿದೆಯೋ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಮುಕ್ತ ಕರ್ನಾಟಕ ಮಾಡಲು ಹೊರಟ ರಾಜ್ಯ ಸರ್ಕಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಯಾರು ಯಾರಿಗೆ ಶರಣಾಗಿರೋದು? ಯಾರು ಶರಣಾಗಿರೋದು ಎಂಬುವುದು ನನ್ನ ಮೂಲಭೂತ ಪ್ರಶ್ನೆಯಾಗಿದೆ ಎಂದು ವ್ಯಂಗ್ಯವಾಡಿದರು.

ನಕ್ಸಲರ ಶಸ್ತ್ರಾಸ್ತ್ರಗಳ ರಹಸ್ಯ, ಮತ್ತೊಬ್ಬ ನಕ್ಸಲ್ ರವೀಂದ್ರನ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ!

ನಕ್ಸಲರು ಶರಣಾಗಿದ್ದಹಾರ ಕೊಡುವ ಪ್ರಶ್ನೆಯೇ ಬರೋದಿಲ್ಲ. ಅವರಿಗೆ ನೆರವು ಕೊಟ್ಟವರ ತನಿಖೆ ಮಾಡಬೇಕು. ಶಸ್ತ್ರಾಸ್ತ್ರ ಪೂರೈಕೆ ಯಾರು ಮಾಡಿದ್ದರು ಎಂಬುವುದು ತನಿಖೆ ಆಗಬೇಕು. ನಕ್ಸಲರ ವಿಚಾರಧಾರೆಗಳೇ ಬೇರೆಯಾಗಿರುತ್ತವೆ. ಸಂವಿಧಾನದ ಮೇಲೆ ನಂಬಿಕೆ ಇಡುವವರು ಬ್ಯಾಲೆಟ್ ಮೇಲೆ ನಂಬಿಕೆ ಇಡ್ತಾರೆ. ಬುಲೆಟ್ ಮೇಲೆ ನಂಬಿಕೆ ಇಡಲ್ಲ. ಸಂವಿಧಾನ ವಿರೋಧಿ, ರಾಷ್ಟ್ರಘಾತುಕ ನಕ್ಸಲರನ್ನು ಬೆಂಬಲಿಸುವವರು ರಾಷ್ಟ್ರ ವಿರೋಧಿಗಳೇ? ನಕ್ಸಲರ ವಿಚಾರಧಾರೆ ಸಮರ್ಥನೆ ಮಾಡಿಕೊಂಡರೆ ಅರೇ ಅವರಿಗೆ ಪರಿದು ಸಂವಿಧಾನ ವಿರೋಧಿಯೇ ಆಗುತ್ತದೆ. ಈ ನೆಟ್‌ವರ್ಕ್‌ನಲ್ಲಿ ಯಾರ್‍ಯಾರು ಇದ್ದಾರೆ ಎಂಬುವುದು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆ ಬಿಸಿ:

ವಿದ್ಯುತ್ ಬೆಲೆ, ನೀರಿನ ಕರ, ಬಸ್ ದರ ಏರಿಕೆ ಇತರೆ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರವೇ ಇವರ ಸಾಧನೆಯಾಗಿದೆ. ಜನರ ಸಂಕಷ್ಟದ ಸಮಯದಲ್ಲಿ ಅಧಿಕಾರದ ಹಪಾಹಪಿ ಇರಬಾರದು. ಸಿಎಂ ಸಿದ್ದರಾಮಯ್ಯಗೆ ಸೀಟು ಉಳಿಸಿಕೊಳ್ಳುವ ಚಿಂತೆ, ಡಿಸಿಎಂ ಡಿ.ಕೆ.ಶಿವಕುಮಾರಗೆ ಸಿಎಂ ಆಗುವ ಆತುರ. ಇದರ ಮಧ್ಯೆ ನಾವು ಯಾರ ಕಡೆ ಇರಬೇಕು ಎಂಬುವುದು ಶಾಸಕರ, ಸಚಿವರ ಚಿಂತೆಯಾಗಿದೆ ಎಂದು ಲೇವಡಿ ಮಾಡಿದರು.

click me!