
ವಿಜಯಪುರ (ನ.14): ಟನ್ ಕಬ್ಬಿಗೆ 3300 ರುಪಾಯಿ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ವಿಜಯಪುರದ ಆಲಮೇಲ್ ಕೆಪಿಆರ್ ಹಾಗೂ ನಾದ ಕೆ.ಡಿಯ ಜಮಖಂಡಿ ಶುಗರ್ಸ್ ದರ ಘೋಷಣೆ ಮಾಡದೆ ಯಡವಟ್ಟು ಮಾಡಿಕೊಂಡಿವೆ. ಪರಿಣಾಮ ಇಂಡಿ ಹಾಗೂ ಆಲಮೇಲ ತಾಲೂಕಿನಲ್ಲಿ ರೈತರ ಹೋರಾಟ ತೀವ್ರಗೊಂಡಿದೆ.
ಹೋರಾಟದ ಸ್ಥಳಕ್ಕೆ ರೈತ ನಾಯಕ ಗುರ್ಲಾಪುರ ರೈತ ಹುಲಿ ಚೂನಪ್ಪ ಪೂಜಾರ್ ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿದ್ದಾರೆ. ಆಲಮೇಲ ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಾಟದ ಸ್ಥಳಕ್ಕೆ ಆಗಮಿಸಿದ ಚೂನಪ್ಪ ಪೂಜಾರ್‌ಗೆ ರೈತರು ಸನ್ಮಾನಿಸಿ ಸ್ವಾಗತಿಸಿಕೊಂಡರು. ಬಳಿಕ ವೇದಿಕೆ ಮೂಲಕ ಕಲಬುರ್ಗಿಯಲ್ಲಿ ನೀಡಲಾಗಿರೊ ದರವನ್ನೆ ವಿಜಯಪುರದಲ್ಲೂ ರೈತರಿಗೆ ನೀಡಬೇಕು. ಕಬ್ಬು ತೂಕದಲ್ಲಿ ಮೋಸ, ದರ ನಿಗದಿಗೆ ಪ್ಯಾಕ್ಟರಿಗಳು ಮಾಡ್ತಿರೊ ವಿಳಂಬ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ದರ ನಿಗದಿ ಮಾಡದೆ ಹೋದ್ರೆ ಮತ್ತೆ ರಾಜ್ಯ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಆದಷ್ಟು ಬೇಗನೇ ರೈತರಿಗೆ ದರ ನೀಡದೆ ಹೋದ್ರೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಚೂನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ