ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನದ ಪ್ರಯುಕ್ತ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿ ಬಸ್‌ಸ್ಟಾಪ್ ಮುಚ್ಚಲಾಗಿದೆ. ಡಿ.ಕೆ. ಶಿವಕುಮಾರ್ ಸೂಚನೆಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು (ಏ.15): ನಗರದ ಸೌಂದರ್ಯಗಳನ್ನು ಹಾಳು ಮಾಡುವುದರಲ್ಲಿ ಫ್ಲೆಕ್ಸ್, ಬ್ಯಾನರ್‌ಗಳು ಎತ್ತಿದ ಕೈ. ಫ್ಲೆಕ್ಸ್, ಬ್ಯಾನರ್‌ಗಳ ವಿಚಾರದಲ್ಲಿ ದೇಶದ ಕೋರ್ಟ್‌ಗಳು ಈಗಾಗಲೇ ಸಾಕಷ್ಟು ಆದೇಶವನ್ನು ನೀಡಿದೆ. ಯಾವುದೇ ಕಾರಣಕ್ಕೂ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಂತಿಲ್ಲ.
ಆದರೆ, ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಒಂದಾದ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಾರೋಷವಾಗಿ ಶಾಸಕ ಅಪ್ಪ-ಮಕ್ಕಳಾದ ಎಂ.ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಬ್ಯಾನರ್‌ಗಳನ್ನು ಕಟ್ಟುತ್ತಿದ್ದರೂ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಏಪ್ರಿಲ್ 16ಕ್ಕೆ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನ ಇಡೀ ವಿಜಯನಗರ ಪೂರ್ತಿ ಎಂ. ಕೃಷ್ಣಪ್ಪರಿಗೆ ಶುಭ ಕೋರುವ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ಇಡಿ ಪ್ರದೇಶದ ಸೌಂದರ್ಯವನ್ನು ಹಾಳು ಮಾಡಲಾಗಿದೆ.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜನಗರದ ಪ್ರಸಿದ್ಧ ಮಾರುತಿ ಮಂದಿರದ ಎದುರಿಗಿದ್ದ ಬಸ್‌ಸ್ಟಾಪ್‌ಅನ್ನೇ ಬ್ಯಾನರ್, ಬಂಟಿಂಗ್ಸ್ ಹಾಗೂ ಫ್ಲೆಕ್ಸ್‌ಗಳಿಂದ 'ಬ್ಯಾನರ್' ಕೃಷ್ಣಪ್ಪ ಮುಚ್ಚಿದ್ದಾರೆ. ಸಾರ್ವಜನಿಕರಿಗೆ ಸೇವೆ ಮಾಡುವಲ್ಲಿ ನಿರತರಾಗಬೇಕಿದ್ದ ವ್ಯಕ್ತಿಗಳು ಸಾರ್ವಜನಿಕರನ್ನೇ ಹಿಂಸೆ ಮಾಡುತ್ತಿರುವ ಪ್ರಕರಣಗಳು ವಿಜಯನಗರ ವ್ಯಾಪ್ತಿಯಲ್ಲಿ ಸಾಕಷ್ಟು ನಡೆಯುತ್ತಿದ್ದರೂ ಬಿಬಿಎಂಪಿ ಮಾತ್ರ ತಮಗೆ ಇದು ಸಂಬಂಧವೇ ಇಲ್ಲ ಎನ್ನುವಂತೆ ಕುಳಿತಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಆಕ್ಷೇಪ ಎತ್ತಿರುವ ಶ್ರುತಿ ಎನ್ನವವರು, 'ಇದು ವಿಜಯನಗರದ ಮಾರುತಿಮಂದಿರದ ಎದುರಿನ ಬಸ್ ಸ್ಟಾಪ್. ಅದರ ಮುಂದೆಯೇ ಇಷ್ಟು ದೊಡ್ಡ ಫ್ಲೆಕ್ಸ್ ಹಾಕಿದಾರೆ.ಬಸ್ ಸ್ಟಾಪ್ ಶೆಲ್ಟರನಲ್ಲಿ ಕೂತಿರುವವರಿಗೆ ಬಸ್ ಬರುವುದು ಹೋಗುವುದು ಗೊತ್ತಾಗದಷ್ಟು ದೊಡ್ಡ ಫ್ಲೆಕ್ಸ್ ಹಾಕಿದಾರೆ. ಬಿಬಿಎಂಪಿ ಕಮೀಷನರ್, ಬಿಬಿಎಂಪಿ ಫ್ಲೆಕ್ಸ್ ಹಾರಬಾರದೆಂದು ಕೋರ್ಟ್ ಆದೇಶ ಇಲ್ವೇ? ಬಿಬಿಎಂಪಿ ಕಣ್ಮುಚ್ಚಿ ಕುಳಿತಿರುವುದೇಕೆ?' ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಬ್ಯಾನರ್ ಕೃಷ್ಣಪ್ಪನಾದ ಎಂ.ಕೃಷ್ಣಪ್ಪ: ಇನ್ನು ಇಡೀ ವಿಜಯನಗರ ವ್ಯಾಪ್ತಿಯಲ್ಲಿ ಎಂ.ಕೃಷ್ಣಪ್ಪರನ್ನು 'ಬ್ಯಾನರ್' ಕೃಷ್ಣಪ್ಪ ಎಂದೇ ಕರೆಯುತ್ತಾರೆ. ಇನ್ನು ಅವರ ಪುತ್ರ ಪ್ರಿಯಾಕೃಷ್ಣರಿಗೆ 'ಫ್ಲೆಕ್ಸ್' ಪ್ರಿಯಾಕೃಷ್ಣ ಎಂದು ಕರೆಯುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ರೂ ಅದನ್ನೂ ಫ್ಲೆಕ್ಸ್, ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಅಪ್ಪ-ಮಗ ಮುಂದಿದ್ದಾರೆ ಅನ್ನೋದನ್ನ ವಿಧಾನಸಭಾ ಕ್ಷೇತ್ರದ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುನೀತಾ ವಿಲಿಯಮ್ಸ್ ಭೂಮಿಗೆ ಯಶಸ್ವಿಯಾಗಿ ವಾಪಾಸಾಗಿದ್ದಾಗ ಇಡೀ ವಿಜಯನಗರ ಕ್ಷೇತ್ರದಲ್ಲಿ ಶುಭಕೋರುವ ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಂಟಿಸಿಕೊಂಡ ಪ್ರಚಾರ ಪ್ರಮುಖರಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಕೆಶಿಯಿಂದಶೇ.15ರಷ್ಟು ಕಮಿಷನ್: ಮುನಿರತ್ನ
ಡಿಕೆಶಿ ಮಾತೂ ಲೆಕ್ಕಕ್ಕಿಲ್ಲ: ಇತ್ತೀಚೆಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ. ಆದರೆ, ಅವರ ಈ ಸೂಚನೆಗಳು ವಿಜನಗರ ರಿಪಬ್ಲಿಕ್‌ಗೆ ಅನ್ವಯವಾಗೋದಿಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ.
BBMPಯ ದುಂದುವೆಚ್ಚ: ಅಂಡರ್‌ಪಾಸ್ ಲೈಟಿಂಗ್‌ಗೆ ₹3 ಕೋಟಿ ಖರ್ಚು!
ಇದು ವಿಜಯನಗರದ ಮಾರುತಿಮಂದಿರದ ಎದುರಿನ ಬಸ್ ಸ್ಟಾಪ್. ಅದರ ಮುಂದೆಯೇ ಇಷ್ಟು ದೊಡ್ಡ ಫ್ಲೆಕ್ಸ್ ಹಾಕಿದಾರೆ.ಬಸ್ ಸ್ಟಾಪ್ ಶೆಲ್ಟರನಲ್ಲಿ ಕೂತಿರುವವರಿಗೆ ಬಸ್ ಬರುವುದು ಹೋಗುವುದು ಗೊತ್ತಾಗದಷ್ಟು ದೊಡ್ಡ ಫ್ಲೆಕ್ಸ್ ಹಾಕಿದಾರೆ. ಫ್ಲೆಕ್ಸ್ ಹಾರಬಾರದೆಂದು ಕೋರ್ಟ್ ಆದೇಶ ಇಲ್ವೇ? ಬಿಬಿಎಂಪಿ ಕಣ್ಮುಚ್ಚಿ ಕುಳಿತಿರುವುದೇಕೆ? pic.twitter.com/mRz3t6MnNH
— ಶ್ರುತಿ | Shruthi Marulappa (@shruthihm1)