
ಬೆಂಗಳೂರು (ಏ.15): ಸಂವಿಧಾನದ 21ನೇ ವಿಧಿಯ ಭಾಗವಾಗಿ ಮಹಿಳೆಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಮೂಲಭೂತ ಹಕ್ಕಿದೆ. ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕು ಮಹಿಳೆಯ ಮಾನವ ಹಕ್ಕಾಗಬೇಕು ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆ ಜಂಟಿಯಾಗಿ ಆಯೋಜಿಸಿದ್ದ 'ಸಂತಾನೋತ್ಪತ್ತಿ ಹಕ್ಕುಗಳು ಮತ್ತು ನೀತಿ ಪರಿವರ್ತನೆ' ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಗರ್ಭಪಾತ ಕಾಯ್ದೆ-197 ಪ್ರಗತಿಪರ ಶಾಸನವೆಂದು ತೋರುತ್ತದೆ. ತಾಂತ್ರಿಕ ಮತ್ತು ಕಾನೂನು ಬೆಳವಣಿಗೆಗಳಿಗೆ ಅನುಗುಣವಾಗಿ ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದೆ. ಗರ್ಭಪಾತ ಮಾಡಲು ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ತಿಳಿಸಿದರು.
ಆಫ್ರಿಕಾ ಮತ್ತು ಅಮೆರಿಕದ ಕೆಲವು ರಾಜ್ಯಗಳಲ್ಲಿ ಗರ್ಭಪಾತವು 12 ವಾರಗಳವರೆಗೆ ಸಂಭೋಗ ಅಥವಾ ಲೈಂಗಿಕ ಅಪರಾಧದ ಪರಿಣಾಮವಾಗಿದ್ದರೂ ಸಹ, 23 ರಿಂದ 20 ವಾರಗಳವರೆಗೆ ಗರ್ಭಪಾತವು ಸಾಮಾಜಿಕ-ಆರ್ಥಿಕ ಅಥವಾ ವೈದ್ಯಕೀಯ ಆಧಾರದ ಮೇಲೆ ಮಾನ್ಯವಿರುತ್ತದೆ. ಗರ್ಭಧಾರಣೆಯ ಮುಂದುವರಿದ ಹಂತದಲ್ಲಿ ಗರ್ಭಪಾತ ಮಾಡಬಹುದೇ ಎಂಬುದು ಚರ್ಚೆಯ ಅಗತ್ಯವಿರುವ ಪ್ರಶ್ನೆಯಾಗಿದೆ. ಇಲ್ಲಿ ರಾಜ್ಯದ ಹಿತಾಸಕ್ತಿ ಬರುತ್ತದೆ. ರಾಜ್ಯವು ಪಿತೃಪ್ರಧಾನ ಪಾತ್ರವನ್ನು ವಹಿಸಿಕೊಳ್ಳುತ್ತದೆ ಮತ್ತು ಹುಟ್ಟಲಿರುವ ಮಗುವಿನ ಹಿತಾಸಕ್ತಿಗಾಗಿ ಗರ್ಭಿಣಿ ಮಹಿಳೆಯ ಹಕ್ಕುಗಳ ಮೇಲೆ ನಿಬರ್ಂಧಗಳನ್ನು ವಿಧಿಸುತ್ತದೆ. ಸುಪ್ರೀಂ ಕೋರ್ಟ್ ಸುಚಿತ್ರಾ ಶ್ರೀವಾತ್ಸವ ಅವರ ಪ್ರಕರಣದಲ್ಲಿ ರೋಯ್ ವರ್ಸಸ್ ವೇಡ್ ತೀರ್ಪಿನಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ನ್ ವಿಧಾನವನ್ನು ತನ್ನ ನಿರ್ಧಾರಗಳ ಮೂಲಕ ಬೆಂಬಲಿಸಿದೆ ಎಂದರು.
ಇದನ್ನೂ ಓದಿ: ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ
ಸೇವೆ ಸಲ್ಲಿಸುತ್ತಿರುವ ಗರ್ಭಿಣಿ ಮಹಿಳೆಗೆ ವೈದ್ಯಕೀಯ ಸೌಲಭ್ಯಕ್ಕೆ ಹೋಗಿ ಗರ್ಭಧಾರಣೆಯ ಪರೀಕ್ಷೆಯನ್ನು ಪಡೆಯಲು ಸಾಧ್ಯವಾಗುವಂತೆ, ಮಾತೃತ್ವ ಪ್ರಯೋಜನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಅಥವಾ ಗರ್ಭವತಿಗೆ ಪ್ರತಿ ತಿಂಗಳು ಒಂದು ದಿನ ರಜೆ ನೀಡುವಂತಹ ಕಾಯ್ದೆಯನ್ನು ಮಾಡಲು ಕಿಲ್ಪಾರ್ ಸರ್ಕಾರಕ್ಕೆ ಸಲಹೆ/ವರದಿ ನೀಡಬೇಕು ಎಂದು ಅವರು ಬಲವಾಗಿ ಅಭಿಪ್ರಾಯಪಡುತ್ತಾ, ಈ ವಿಷಯದಲ್ಲಿ ಹಕ್ಕು ಆಧಾರಿತ ಕಾನೂನು ಆಡಳಿತ ಇರಬೇಕು ಎಂದು ಸೂಚಿಸಿದರು.
ಅತಿಥಿಯಾಗಿದ್ದ ಪ್ರೊ. ಜೋಗರಾವ್ ಮಾತನಾಡಿ, 'ಪುಟ್ಟಸ್ವಾಮಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿದಂತೆ ದೈಹಿಕ ಸಮಗ್ರತೆ ಮತ್ತು ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಗೌಪ್ಯತೆಯ ಒಂದು ಭಾಗವಾಗಿದೆ' ಎಂದು ಅಭಿಪ್ರಾಯ ಪಟ್ಟರು. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ, 2021 ಬಾಡಿಗೆ ತಾಯ್ತನ' (ನಿಯಂತ್ರಣ) ಕಾಯ್ದೆ, 2021 ಕ್ಕೆ ಅನೇಕ ಸವಾಲುಗಳಿವೆ. ಸಂಘರ್ಷದ ಹಿತಾಸಕ್ತಿಗಳು ಮತ್ತು ಪಾಲುದಾರರ ಸ್ಪರ್ಧಾತ್ಮಕ ಹಕ್ಕುಗಳ ನಡುವೆ ಸೂಕ್ತ ಸಮತೋಲನವನ್ನು ಸಾಧಿಸುವ ಅಗತ್ಯವಾಗಿದೆ. ರಾಜ್ಯವು ಎಷ್ಟರ ಮಟ್ಟಿಗೆ ಹಸ್ತಕ್ಷೇಪಕಾರಿಯಾಗಿರಬಹುದು, ವೈದ್ಯಕೀಯ ಅವಶ್ಯಕತೆಯೊಂದಿಗೆ ಸಮತೋಲನವಾಗಿರಲು ವೈಯಕ್ತಿಕ ಆಯ್ಕೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ. ವಿಚ್ಛೇದಿತ ಮಹಿಳೆ ಮತ್ತು ತೃತೀಯ ಲಿಂಗಿಗೆ ಹೋಲಿಸಿದರೆ ಒಂಟಿ ಮಹಿಳೆ ಏಕೆ ಅನಾನುಕೂಲಕರ ಸ್ಥಾನದಲ್ಲಿದ್ದಾರೆ ಇತ್ಯಾದಿಗಳ ಬಗ್ಗೆ ಅವರು ಮೂಲಭೂತ ಪ್ರಶ್ನೆಗಳನ್ನು ಎತ್ತಿದರು.
ಇದನ್ನೂ ಓದಿ: ಕಪಲ್ಸ್ ವಯಸ್ಸಿನ ಅಂತರ ಹೆಚ್ಚಿದ್ದರೆ ಅನುಕೂಲಗಳು & ಅನಾನುಕೂಲಗಳು?
ಕಿಲ್ಪಾರ್ನ್ ನಿರ್ದೇಶಕ ಪ್ರೊ. ಚಿದಾನಂದ್ ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡೀನ್ ಪ್ರೊ.ಮಾಧವನ್ ನಾಯರ್, ಡಿ.ಸ್ವಪ್ನ, ಅಸೋಸಿಯೇಟ್ ಡೀನ್, ಡಾ.ರೇವಯ್ಯ ಒಡೆಯರ್, ಸಂಶೋಧನಾ ಮುಖ್ಯಸ್ಥರು ಮತ್ತು ಇತರ ಅಧ್ಯಾಪಕರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮನಿಪಾಲ್ ಕಾನೂನು ಕಾಲೇಜಿನ ಡಾ.ಅನುಜಾ ಎಸ್. ಹೈಕೋರ್ಟಿನ ವಕೀಲರಾದ ಡಾ. ಗಿರೀಶ್ ಕುಮಾರ್ ಆರ್., ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಡಾ.ಸಪ್ಪಾ ಎಸ್. ಮತ್ತು ಪ್ರೊ.ಡಾ.ವಲರ್ಮತಿ ಆರ್., ಡಾ.ಚೈತ್ರ ಆರ್.ಬೀರಣ್ಣವರ್, ಬಿಎಂಎಸ್ಎಲ್ ಎ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನ ಪ್ರೊ.ಡಾ.ಇಂದಿರಾಣಿ ಕೆ.ಎಸ್., ಡಾ.ಗಾಯತ್ರಿ ಬಾಯಿ ಎಸ್. ಕ್ರೈಸ್ಟ್ ಅಕಾಡೆಮಿ ಕಾನೂನು ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ದೀಪ್ತಿ ಸುಸಾನ್ ಥಾಮಸ್ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ