
ವಿಜಯನಗರ (ಅ.21): ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಮಸೀದಿಯ ಇಮಾಮ್ ಜಹೀರ್ ಹುಸೇನ್ ತನ್ನ ಪತ್ನಿ ಸೀಮಾ ಬೇಗಂ (52) ಪವಿತ್ರ ಉಮ್ರಾ ಯಾತ್ರೆಗೆ ಹೋಗುವ ಮಾರ್ಗಮಧ್ಯೆ ಬಹರೇನ್‌ನಲ್ಲಿ ಹೃದಯಾಘದಿಂದ ನಿಧನರಾಗಿದ್ದಾರೆ.
ಬಳಿಕ ಕರ್ನಾಟಕ ಕಲ್ಬರಲ್ ಸಂಘಟನೆ ಸಹಾಯದಿಂದ ಬಹರೇನ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ 6 ವರ್ಷಗಳಿಂದ ಇಲ್ಲಿಯ ಮಸೀದಿಯಲ್ಲಿ ಇಮಾಮ್ ಆಗಿ ಜಹೀರ್‌ಹುಸೇನ್ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿ ಬಿಹಾರ ಮೂಲದವರು. ಈ ಹಿಂದೆ ಬಳ್ಳಾರಿಯಲ್ಲಿ ಹಲವು ವರ್ಷಗಳ ಕಾಲ ಇಮಾಮ್ ಸೇವೆ ಮಾಡಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಓರ್ವ ಬಿಹಾರನಲ್ಲಿ ಮತ್ತೋರ್ವ ಓಡಿಶಾದಲ್ಲಿ ಇದ್ದಾರೆ.
ಹಜ್ ಯಾತ್ರೆ ನಿಯಮದಲ್ಲಿ ಮಹತ್ವದ ಬದಲಾವಣೆ, ಪುರುಷ ರಕ್ಷಕರಿಲ್ಲದೆ ಮಹಿಳೆಯರ ಉಮ್ರಾಗೆ ಅವಕಾಶ!
ಸೌದಿ ಅರೇಬಿಯಾಕ್ಕೆ ಹೋಗಲು ನೇರ ವಿಮಾನ ಸಿಗದಿದ್ದ ಕಾರಣ ದಂಪತಿ ಭಾರತದಿಂದ ಬಹರೇನ್ ಪ್ರಯಾಣ ಬೆಳೆಸಿದ್ದರು. ಬಹರೇನ್‌ನಲ್ಲಿ ಇಳಿದು ಸೌದಿ ಅರೇಬಿಯಾ ವಿಮಾನ ಹತ್ತುವ ವೇಳೆಗೆ ಇಮಾಮ್ ಜಹೀರ್‌ಹುಸೇನ್ ಅವರ ಪತ್ನಿ ಸೀಮಾ ಬೇಗಂ ಅವರಿಗೆ ಹೃದಯಾಘಾತವಾಗಿ ಮರಣ ಹೊಂದಿದರು. ಮೃತದೇಹ ಕೊಂಡೊಯ್ಯಲು ಕಾನೂನು ಸಮಸ್ಯೆ ಎದುರಾಯಿತು. ಆಗ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ ಮೆಂಟ್ ಕರ್ನಾಟಕ ಪೋರಂ ರಾಜ್ಯಾಧ್ಯಕ್ಷ ಬೆಂಗಳೂರಿನ ಸಯ್ಯದ್ ನಜೀರ್ ಅವರ ನೆರವಿಗೆ ಬಂದರು.
ಕೆಲಸದ ಒತ್ತಡ: 10 ವರ್ಷದಲ್ಲಿ 113 ಪಿಡಿಒಗಳ ಅಸಹಜ ಸಾವು
ಬಹರೇನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಎನ್ನುವ ಸಮಾಜ ಸೇವಾ ಧಾರ್ಮಿಕ ಸಂಘಟನೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ವಿವರಿಸಿದರು. ಕೆಸಿಎಫ್ ಅಧ್ಯಕ್ಷ ಜಮಾಲ್ ಬಾಯಿ ಹಾಗೂ ಕಲಂದರ್‌ಬಾಯಿ ಅವರ ಸತತ ಪ್ರಯತ್ನದಿಂದ ಬಹರೇನ್‌ನಲ್ಲಿ ಅಂತ್ಯಕ್ರಿಯೆ (ದಫನ್) ನಡೆಸಿದರು. ಅನಂತರ ಮಹಮ್ಮದ್ ಜಹೀರ್ ಹುಸೇನ್ ಸೌದಿ ಅರೇಬಿಯಾಕ್ಕೆ ಉಮ್ರಾ ಯಾತ್ರೆಗೆ ಹೋಗಲು ಅನುಕೂಲ ಮಾಡಿಕೊಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ