Panchamasali : ಪಂಚಮಸಾಲಿ 3ನೇ ಪೀಠ ರಚನೆಗೆ ಸಿದ್ಧತೆ, ಚಾರಿಟೇಬಲ್ ಟ್ರಸ್ಟ್‌ ಅಸ್ತಿತ್ವಕ್ಕೆ

By Suvarna NewsFirst Published Nov 6, 2021, 7:46 PM IST
Highlights

* ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್​ ನೋಂದಣಿ
* ಜಮಖಂಡಿಯಲ್ಲಿ 15 ಜನ ಪಂಚಮಸಾಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಟ್ರಸ್ಟ್ ಅಸ್ತಿತ್ವಕ್ಕೆ
 * ಜಮಖಂಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ

ಬಾಗಲಕೋಟೆ, (ನ.06): ರಾಜ್ಯದಲ್ಲಿ ಪ‌ಂಚಮಸಾಲಿ 3ನೇ ಪೀಠ ಸಿದ್ಧತೆ ಬೆನ್ನಲ್ಲೆ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್‌ (Trust) ನೋಂದಾಣಿ ಮಾಡಲಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ (Veerashaiva Lingayat Panchamasali) ಮಠಾಧೀಶರ ಒಕ್ಕೂಟ ಚಾರಿಟಬಲ್​ ಟ್ರಸ್ಟ್ ಎಂಬ ಹೆಸರಿನಲ್ಲಿ ಜಮಖಂಡಿ  (Jamkhandi) ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. 

2ಎ ಮೀಸಲಾತಿ ಸಿಗುವತನಕ ಹೋರಾಟ: ಜಯಮೃತ್ಯುಂಜಯ ಶ್ರೀ

ಅಧ್ಯಕ್ಷರಾಗಿ ಬಬಲೇಶ್ವರ ಮಠದ ಮಹದೇವ ಶಿವಾಚಾರ್ಯಶ್ರೀ, ಉಪಾಧ್ಯಕ್ಷರಾಗಿ ರೇವಣಸಿದ್ದಸ್ವಾಮೀಜಿ ಬೆಂಡವಾಡ, ಟ್ರಸ್ಟ್​ನ ಕಾರ್ಯದರ್ಶಿಯಾಗಿ ಸಂಗನ ಬಸವಶ್ರೀ ಮತ್ತು ಇತರ ಸುಮಾರು 15 ಸ್ವಾಮೀಜಿಗಳ  ಸಮ್ಮುಖದಲ್ಲಿ ಟ್ರಸ್ಟ್​ ನೋಂದಣಿ ಮಾಡಲಾಗಿದೆ.

ಜಮಖಂಡಿ ಹೊರವಲಯದ ಅಲಗೂರು ರಸ್ತೆ ಬಳಿ 3ನೇ ಪೀಠಕ್ಕಾಗಿ ಸ್ಥಳ ಗುರುತಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಈಗಾಗಲೇ ಪಂಚಮಸಾಲಿ ಸಮುದಾಯದ 2 ಪೀಠಗಳಿವೆ. ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಒಂದು ಪೀಠ, ದಾವಣಗೆರೆ ಜಿಲ್ಲೆಯ ಹರಹರದಲ್ಲಿ ಮತ್ತೊಂದು ಪೀಠವಿದೆ. 2 ಪೀಠಗಳ ಹೊರತಾಗಿ 3ನೇ ಪೀಠಕ್ಕಾಗಿ ಪ್ರಕ್ರಿಯೆ ಆರಂಭವಾಗಿದೆ.

ಟ್ರಸ್ಟ್ ಮೂಲಕ ಪಂಚಮಸಾಲಿ ಸಮಾಜದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕ್ರತಿಕ, ಧಾಮಿ೯ಕ ಕಾಯ೯ಕ್ರಮ ಕೈಗೊಳ್ಳಲು ಸ್ವಾಮೀಜಿಗಳು ನಿಧಾ೯ರ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮನಗೂಳಿಯ ಸಂಗನಬಸವ ಸ್ವಾಮೀಜಿ, ರಾಜ್ಯದಲ್ಲಿ 3ನೇ ಪೀಠ ಅಸ್ಥಿತ್ವಕ್ಕೆ ಬಂದರೆ ತಪ್ಪೇನು. ಭಕ್ತರು ಬಯಸಿದರೆ 3ನೇ ಪೀಠ ರಚನೆ ಎಂಬ ಮಾತಿಗೆ ಈಗಲೂ ಬದ್ಧನೆಂದ ಎಂದು ಸ್ಪಷ್ಟಪಡಿಸಿದರು.

ಈಗಿನ ಒಕ್ಕೂಟ ರಚನೆ ಉದ್ದೇಶ ಸಮಾಜದಲ್ಲಿ ಲಿಂಗದೀಕ್ಷೆ ಸೇರಿದಂತೆ ಒಳ್ಳೆಯ ಆಚಾರ ವಿಚಾರ ಕಲಿಸುವ ಉದ್ಧೇಶವಿದೆ. 3ನೇ ಪೀಠ ಸ್ಥಾಪನೆಯಾಗುವುದಾದರೆ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕಲಬುರಗಿಯಲ್ಲಿ ಹೆಚ್ಚು ಜನ ಇದ್ದಾರೆ, ಅವರು ಬಯಸಿದಲ್ಲಿ ರಚನೆಗೆ ಆಗುತ್ತೆ ಎಂದರು.

ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆ ಇರುವ ದೊಡ್ಡ ಸಮುದಾಯ. ಹೀಗಾಗಿ ಐದು ಪೀಠಗಳು ಬೇಕು ಎಂದು ಈ ಹಿಂದೆ ಹರಿಹರ ಪೀಠದ ಮೊದಲ ಶ್ರೀಗಳಾಗಿದ್ದ ಡಾ.ಮಹಾಂತ ಶಿವಾಚಾರ್ಯರು ಹೇಳಿದ್ದರು. ಆದರೆ ಅವರು ಲಿಂಗೈಕ್ಯರಾಗಿದ್ದರಿಂದ ಅವರ ಆಸೆ ಈಡೇರಿರಲಿಲ್ಲ. ಈಗ ಜನರಿಂದ ಒತ್ತಡ ಬಂದರೆ ಮೂರನೇ ಪೀಠ ಆಗಬಹುದು' ಎಂದು ಜಮಖಂಡಿ ಸಭೆಯ ನಂತರ ಸಂಗನಬಸವ ಶ್ರೀಗಳು ಮಾರ್ಮಿಕವಾಗಿ ಹೇಳಿದ್ದರು.

ಪಂಚಮಸಾಲಿ ಸಮುದಾಯದ ಮೂರನೇ ಪೀಠಕ್ಕೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಸಂಸುದ್ದಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಗುರುತಿಸಲಾಗಿದೆ. ಪಂಚಮಸಾಲಿ ಸಮಾಜದ ಕೂಡಲಸಂಗಮ ಹಾಗೂ ಹರಿಹರ ಪೀಠಗಳಿಗೆ ಪರ್ಯಾಯವಾಗಿ ಆ ಸಮುದಾಯದ ಸ್ವಾಮೀಜಿಗಳ ಪ್ರತ್ಯೇಕ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

click me!