
ಬೆಂಗಳೂರು, (ನ.5): ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಪರಿಸರಸ್ನೇಹಿ ಮಣ್ಣಿನ ದೀಪಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು(ಶುಕ್ರವಾರ) ಬಿಡುಗಡೆ ಮಾಡಿದರು.
ದೀಪಾವಳಿಯ (Deepavali) ಅಂಗವಾಗಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾಕ್ಕೆ ತೆರಳಿ, ಗ್ರಾಮೀಣ ಮಹಿಳೆಯರು ತಯಾರಿಸಿರುವ ಈ ದೀಪಗಳನ್ನು ಕೊಟ್ಟು, ಶುಭಾಶಯ ಕೋರಿದರು.
ದೀಪಾವಳಿಗೆ ಈ ರೀತಿ ಲಕ್ಷ್ಮಿ ಗಣೇಶ ಪ್ರತಿಮೆ ಮನೆಗೆ ತರೋದು ದುರಾದೃಷ್ಟಕರ
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು `ಹೆಣ್ಣು ಮಕ್ಕಳು ತಯಾರಿಸಿರುವ ಈ ಪರಿಸರಸ್ನೇಹಿ ದೀಪಗಳು ದೀಪಾವಳಿಯ ಅರ್ಥ ಮತ್ತು ಸಂಭ್ರಮವನ್ನು ಹೆಚ್ಚಿಸುವಂತಿವೆ. ಮಹಿಳೆಯರ ಬದುಕಿನ ಘನತೆಯನ್ನು ಹೆಚ್ಚಿಸುವಂತಹ ಇಂತಹ ಉಪಕ್ರಮಗಳು ನಮ್ಮ ಆಚರಣೆಗಳಿಗೆ ಹೊಸ ನೆಲೆಯನ್ನು ತಂದುಕೊಡುವಂತಿವೆ’ ಎಂದು ಶ್ಲಾಘಿಸಿದರು.
ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಜನರು ತಮ್ಮ ಮನೆಯನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಿದ್ದಾರೆ. ಇದಲ್ಲದೆ ಮನೆ ಮನಗಳಲ್ಲಿ ಸಂಜೆ ವೇಳೆ ದೀಪಗಳು ಉರಿಯುತ್ತಿವೆ. ಎಲ್ಲೆಡೆ ದೀಪಗಳಿಂದ ಬೆಳಗುತ್ತದ್ದು, ದೀಪಾವಳಿ ಹಬ್ಬವು ವಾಸ್ತವವಾಗಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ.
ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!
ಉಡುಪಿ (ನ. 02): ದೀಪಗಳ ಹಬ್ಬ ದೀಪಾವಳಿ (Deepavali) ದೀಪ ಹಬ್ಬದ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ದೀಪಾವಳಿಯಲ್ಲಿ ಹಣತೆಗೆ (Diyas) ಭಾರೀ ಡಿಮ್ಯಾಂಡ್. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಲು, ವಿದ್ಯಾಭ್ಯಾಸಕ್ಕೆ ನೆರವಾಗಲು ಹಣತೆಗಳಿಗೆ ಚೆಂದದ ಚಿತ್ತಾರ ಮಾಡಿ ಮಾರಾಟ ಮಾಡುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪನಂಗಡಿ ನಿವಾಸಿ ರಕ್ಷಾಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದೆಂದರೆ ತುಂಬಾ ಇಷ್ಟ. ರಕ್ಷಾ ಆಳ್ವಾಸ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಳೆ. ತಂದೆ ದಿವ್ಯಾಂಗ, ತಾಯಿ ಕೂಲಿ ಮಾಡುತ್ತಿದ್ದಾರೆ. ಓದಿನ ಜೊತೆಗೆ ಪೇಯಿಂಟಿಂಗ್ ಮಾಡುತ್ತಿದ್ದಾರೆ. ಇವರು ಮಾಡುವ ಹಣತೆಗೆ ಇದೀಗ ಭಾರೀ ಬೇಡಿಕೆ ಬರುತ್ತಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ