ಕರ್ನಾಟಕಕ್ಕೆ ಸಂತಸದ ಸುದ್ದಿ: ಹುಬ್ಬಳ್ಳಿ-ಪುಣೆ ನಡುವೆ ಶೀಘ್ರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು..!

By Kannadaprabha News  |  First Published Sep 10, 2024, 12:52 PM IST

ಕರ್ನಾಟಕದ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾದ ಹುಬ್ಬಳ್ಳಿ ಮತ್ತು ಪುಣೆಯನ್ನು ಈ ರೈಲು ಸಂಪರ್ಕಿಸಲಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ನಿಲುಗಡೆ ಹೊಂದಿದೆ.


ಹುಬ್ಬಳ್ಳಿ(ಸೆ.10): ಹುಬ್ಬಳ್ಳಿ- ಪುಣೆ ನಡುವೆ ಶೀಘ್ರದಲ್ಲೇ ವಂದೇ ಭಾರತ್‌ ರೈಲು ಪ್ರಾರಂಭವಾಗಲಿದೆ. ಹೌದು, ಬಹು ನಿರೀಕ್ಷೆಯ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸೇವೆಯಿಂದ ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪುಣೆಗೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ. ಪ್ರತಿದಿನ ನೂರಾರು ಜನರು ಉಭಯ ರಾಜ್ಯಗಳ ಎರಡು ಪ್ರಮುಖ ನಗರಗಳ ನಡುವೆ ಸಂಚಾರ ನಡೆಸಲು ಅನುಕೂಲವಾಗಲಿದೆ. ಪುಣೆಯಿಂದ ಮುಂಬೈಗೆ ಮುಂದುವರಿದ ಪ್ರಯಾಣಕ್ಕೂ ಕೂಡಾ ಇದರಿಂದ ಅನುಕೂಲವಾಗಲಿದೆ.

ಕರ್ನಾಟಕದ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾದ ಹುಬ್ಬಳ್ಳಿ ಮತ್ತು ಪುಣೆಯನ್ನು ಈ ರೈಲು ಸಂಪರ್ಕಿಸಲಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ನಿಲುಗಡೆ ಹೊಂದಿದೆ.

Tap to resize

Latest Videos

undefined

ವಂದೇ ಭಾರತ್ ರೈಲನ್ನು ಗೂಡ್ಸ್‌ ರೈಲಿನ ಎಂಜಿನ್‌ನಿಂದ ಎಳೆಸಿದ್ರು: ವಿಡಿಯೋ ನೋಡಿ

2 ತಿಂಗಳ ಹಿಂದೆಯೇ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹುಬ್ಬಳ್ಳಿಯಿಂದ ಪುಣೆಗೆ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು. ಜೋಶಿ ಅವರ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶೀಘ್ರದಲ್ಲೇ ಸೇವೆ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಜೋಶಿ ಅವರು ಭೇಟಿಯಾಗಿ ಚರ್ಚೆ ಕೂಡ ನಡೆಸಿದ್ದರು. ರೈಲು ಸಂಚಾರಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

click me!