ವಾಲ್ಮೀಕಿ ನಿಗಮದ ಹಗರಣದ ಆಡಿಯೋ ಬಾಂಬ್‌..!

Published : Jul 10, 2024, 07:35 AM ISTUpdated : Jul 10, 2024, 09:29 AM IST
ವಾಲ್ಮೀಕಿ ನಿಗಮದ ಹಗರಣದ ಆಡಿಯೋ ಬಾಂಬ್‌..!

ಸಾರಾಂಶ

ಈ ಪ್ರಕರಣದಲ್ಲಿ ಈ ಇಬ್ಬರೂ ಅಧಿಕಾರಿಗಳು ಬಂಧಿತರಾಗಿದ್ದು, ಈ ಡೀಲ್ ಮಾತುಕತೆ ಆಡಿಯೋದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ರವರ ಹೆಸರು ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಆದರೆ ಅವರ ಸೋದರ ಜಿಲ್ಲೆಯ ನೆಕ್ಕುಂಟಿ ನಾಗರಾಜ್ ಇಡೀ ಪ್ರಕರಣದ ಸೂತ್ರಧಾರ ಎನ್ನುವಂತೆ ಅಧಿಕಾರಿಗಳು ಮಾತನಾಡಿದ್ದಾರೆ. ಹಾಗೆಯೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಹಣ ವರ್ಗಾವಣೆ ಮಾಹಿತಿಯೇ ಇರಲಿಲ್ಲವೆಂದು ಈ ಇಬ್ಬರು ಸಂಭಾಷಣೆಯಲ್ಲಿ ಪ್ರಸ್ತಾಪವಾಗಿದೆ.

ಬೆಂಗಳೂರು(ಜು.10):  ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ನಿಗಮದ ಮಾಜಿ ವ್ಯವ ಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್ ಮತ್ತು ಲೆಕ್ಕಪರಿಶೋಧಕ ಪರಶುರಾಮ್ ಮಧ್ಯೆ ನಡೆದಿದೆ ಎನ್ನಲಾದ 'ಡೀಲ್' ಮಾತುಕತೆ ಆಡಿಯೋ ಮಂಗಳವಾರ ಬಹಿರಂಗವಾಗಿ ಭಾರಿ ಸಂಚಲನ ಸೃಷ್ಟಿಸಿದೆ.

ಈ ಪ್ರಕರಣದಲ್ಲಿ ಈ ಇಬ್ಬರೂ ಅಧಿಕಾರಿಗಳು ಬಂಧಿತರಾಗಿದ್ದು, ಈ ಡೀಲ್ ಮಾತುಕತೆ ಆಡಿಯೋದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ರವರ ಹೆಸರು ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಆದರೆ ಅವರ ಸೋದರ ಜಿಲ್ಲೆಯ ನೆಕ್ಕುಂಟಿ ನಾಗರಾಜ್ ಇಡೀ ಪ್ರಕರಣದ ಸೂತ್ರಧಾರ ಎನ್ನುವಂತೆ ಅಧಿಕಾರಿಗಳು ಮಾತನಾಡಿದ್ದಾರೆ. ಹಾಗೆಯೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಹಣ ವರ್ಗಾವಣೆ ಮಾಹಿತಿಯೇ ಇರಲಿಲ್ಲವೆಂದು ಈ ಇಬ್ಬರು ಸಂಭಾಷಣೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ದದ್ದಲ್ ಆಪ್ತ ಎನ್ನಲಾದ ಸುನೀಲ್ ಡೀಲ್ ಪಾತ್ರವಹಿಸಿದ್ದಾನೆ ಎನ್ನಲಾಗಿದೆ.

ವಾಲ್ಮೀಕಿ ನಿಗಮ ಹಗರಣ: ಪ್ರಕರಣದಲ್ಲಿ ನಾಗೇಂದ್ರನ ಬಲಿಪಶು ಮಾಡಲಾಗಿದೆ: ಜನಾರ್ದನ ರೆಡ್ಡಿ ವಾಗ್ದಾಳಿ

ಇನ್ನು ತಾವು ತಪ್ಪು ಮಾಡಿ ಸಿಕ್ಕಿಬಿದ್ದಿದ್ದೇವೆ ಎಂದು ಪರೋಕ್ಷವಾಗಿ ಪದ್ಮನಾಭ ಮತ್ತು ಪರಶುರಾಮ್ ಮಾತನಾಡಿ ದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಪದ್ಮನಾಭ, ಸಿಬಿಐನವರು ಬರುತ್ತಾರೆ. ನಾವು 2 ವರ್ಷ ಜೈಲಿನಲ್ಲಿರಬೇಕಾ ಗುತ್ತದೆ. ಕೊನೆಗೆ ಜಾಮೀನು ಪಡೆದು ಹೊರಬರಬೇಕಾಗುತ್ತದೆ ವುದು ಸಹ ಆಡಿಯೋದಲ್ಲಿದೆ. 

ಈ ಹಗರಣ ಬೆಳಕಿಗೆ ಬಂದ ನಂತರ ಎಸ್‌ಐಟಿ ಅಧಿಕಾರಿಗಳು, ಪದ್ಮನಾಭ್ ಹಾಗೂ ಲೆಕ್ಕಪರಿಶೋಧಕ ಪರಶುರಾಮ್ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಹಾಗೆಯೇ ಪದ್ಮನಾಭ ಬಳಿ 3.4 ಕೋಟಿ ರು ಹಣ ಕೂಡ ಜಪ್ತಿಯಾಗಿದೆ. ಈಗ ಡೀಲ್ ಆಡಿಯೋ ಹೊರಬಂದಿರು ವುದು ನಿಗಮದ ಹಗರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಏನು ಮಾತುಕತೆ?

ಜಿ.ಜಿಪದ್ಮನಾಭ:ಕ್ಯಾಶ್ ಬುಕ್ ಕ್ಲೋಸ್
ಮಾಡಿ ಅಂತಾ ಯಾರು ಫೋನ್ ಮಾಡಿದ್ದು?
ಪರಶುರಾಮ್: ಸುನೀಲ್ (ನಿಗಮದ
ಅಧ್ಯಕ್ಷರ ಆಪ್ತ ಸಹಾಯಕ)
ಪದ್ಮನಾಭ್ : ಸುನೀಲ್..? ಏನಂತೆ?
ಪರಶುರಾಮ್: ಏನೂ ಗೊತ್ತಿಲ್ಲ ಸರ್. ಕ್ಯಾಶ್ ಬುಕ್ ಡಿಟೇಲ್ಸ್ ಇಟ್ಕಳಿ ಬರ್ತಿನಿ ಅಂದ್ರು. 5 ಕೋಟಿ ಬಂದಿದೆ ಅಂದ್ರು.
ಪದ್ಮನಾಭ್: ಯಾರು?
ಪರಶುರಾಮ್: 2 ಕೋಟಿ ರಾತ್ರಿ ಬರೋದಿತ್ತಲ್ಲ. ಅಲ್ಲಿ ಹಣ ವರ್ಗಾವಣೆ ಬಗ್ಗೆ ಏನೂ ಅರ್ಥವಾಗಿಲ್ಲ.
ಪದ್ಮನಾಭ:ಅದೇಪೇಮೆಂಟ್ ಮಾಡಿದ್ದೆ ಅಂತಾರೆ.
ಪರಶುರಾಮ್‌: ನೆಕ್ಕಂಟಿ ನಾಗರಾಜ್ (ಮಾಜಿ ಸಚಿವ ನಾಗೇಂದ್ರ ಸಂಬಂಧಿ) ಕಡೆಯದ್ದು.

ವಾಲ್ಮೀಕಿ ನಿಗಮದ ಕೇಸ್‌: ನಾಗೇಂದ್ರ, ಶಾಸಕ ಬಸವರಾಜ್ ದದ್ದಲ್‌ಗೆ ಎಸ್‌ಐಟಿ ನೋಟಿಸ್
ಪದ್ಮನಾಭ್: ಮಾಡಿದ್ದಾರಲ್ಲ.
ಪರಶುರಾಮ್‌: ಅದೇ ಮಾಡಿದ್ದಾರೆ. ಮುಂದೇನು ಮಾಡ್ತಾರೆ ಅಂತ ಏನು ಗ್ಯಾರಂಟಿ?
ಪದ್ಮನಾಭ: ಏನು ಗ್ಯಾರಂಟಿ ಅಂದ್ರೆ ಕಾಯೋದೇ ಗ್ಯಾರಂಟಿ. ಏನು ಮಾಡೋಕಾಗುತ್ತೆ?
ಪರಶುರಾಮ್: ನಿಮ್ಮ ಜೊತೆ ಯಾರು ಕಾಂಟ್ಯಾಕ್ಸ್‌ನಲ್ಲಿ ಇದ್ದಾರೆ ಸ‌ರ್?
ಪದ್ಮನಾಭ: ಅದೇ ಬಾಮೈದ. ನಾಗರಾಜ್
ಪರಶುರಾಮ್: ನಾನು
ಅವತ್ತೇ ಹೇಳಿದ್ದೆಸರ್, ಬೇಡ ಬೇಡ ಅಂತಾ. ಈ ಸೂ. ಮಕ್ಕಳು ಬಂದ್ರಲ್ಲ.
ಪದ್ಮನಾಭ್: ನಾವು ಅದನ್ನು ಹೇಳಬಾ ರದು. ಮಿನಿಸರ್ ಆಫೀಸ್‌ನಿಂದ ಹೇಳಿದ್ರು. ನಾಗರಾಜ್ ಕಡೆಯಿಂದ ಒತ್ತಡ ಬಂತು. ನಾವು ಆಯಿತು ಅಂತ ಇದ್ದ ಅಕೌಂಟ್ ಟ್ರಾನ್‌ಸ್ಪರ್‌ಮಾಡಿ ಕೊಟ್ಟ. ಇದೊಂದು ಹೇಳಬೇಕು. ಒಂದೇ ಮಾತಲ್ಲಿ ಹೇಳಬೇಕು. ನಾವೇ ಕಂಪ್ಲೇಟ್ ಮಾಡಿದ್ವಿ, ಎಲ್ಲಾ ಫೇಕ್ ಸಿಗ್ನಚರ್‌ಮಾಡಿರೋದು ನಿಜಾನಾ? ಫೇಕ್ ವ್ಯಕ್ತಿಗಳಿಗೆ ಚೆಕ್ ಕೊಟ್ಟಿದ್ದಾರೆ. ನಾವು ಕಂಪ್ಲೇಟ್ ಕೊಟ್ಟಿದ್ದೀವಿ. ಅಲ್ವಾ? ದುಡ್ಡು ಬಂದೇಲೆ ಅದರ ಮೇಲೆ ಎನ್
ಆಕ್ಷನ್ ಬೇಕೋ ತೆಗೆದುಕೊಳ್ಳೋಣ. ಪರಶುರಾಮ್‌: ಬ್ಯಾಂಕ್‌ ನವರು ಈಗ
ಕೇಸ್ ಮಾಡ್ತಿಲ್ವಾ. ನಮ್ಮ ದುಡ್ಡು ನಮಗೆ ಕೊಡ್ತಾರಾ? ಮುಂದೇನ್ ಮಾಡೋದು?
ಪದ್ಮನಾಭ್: ಸಿಬಿಐ ಬರುತ್ತೆ. 2 ವರ್ಷ ಜೈಲಿನಲ್ಲಿರಬೇಕಾಗುತ್ತೆ. ಜಾಮೀನು ಮಾಡಿಸ್ಕೋಬೇಕು ಅಷ್ಟೇ.
ಪರಶುರಾಮ್‌: ಮಿನಿಸ್ಟ‌ರ್ (ಆಗ ಸಚಿ
ವರಾಗಿದ್ದವರು ನಾಗೇಂದ್ರ) ಗಮನಕ್ಕೆ ಇಲ್ವಾಸರ್ ?
ಪದ್ಮನಾಭ್: ಯಾವುದು?
ಪರಶುರಾಮ್‌: ನಕ್ಕುಂಟಿ ನಾಗರಾಜ್ ಅಕೌಂಟ್ ಮಾಡಿರೋದು.
ಪದ್ಮನಾಭ್: ಅದೂ ಗೊತ್ತು ಅವರಿಗೆ. ಅವರೇ ಅಲ್ವಾ ಶಾಂಗ್ರಿಲಾ ಹೋಟೆಲ್‌ಗೆ ಕರೆಸಿ ಮಾತನಾಡಿಸಿದ್ದು.
ಪರಶುರಾಮ್: ಹೌದು ಸರ್. ಅಕೌಂಟ್ ಓಪನ್ ದಿನ ನೆಕ್ಕುಂಟೆ
ನಾಗರಾಜ್ ಆಫೀಸ್ಸಿಗೆ ಬಂದಿದ್ದರು. ಪದ್ಮನಾಭ್: ಹೌದು. ಅಕೌಂಟ್ ಟ್ರಾನ್‌ ಫರ್‌ಗೆ ಎಷ್ಟು ಸಲ ಕಾಲ್ ಮಾಡಿದ್ರು.
ಪರಶುರಾಮ್: 50 ಸಲ ಕಾಲ್ ಮಾಡಿ
ಮಾಡಿ ಇಟ್ಟು. ನನಗೆ ನಿಮ್ಮ ಮೇಲೆ ಜಾಸ್ತಿ ನಂಬಿಕೆ ಸರ್. ನೀವೆಲ್ಲ ಚೆಕ್ ಮಾಡ್ತೀರಿ.
ಪದ್ಮನಾಭ್: ಈ ಬ್ಯಾಂಕ್ ಅಕೌಂಟ್ಸ್
ಎಲ್ಲ ನಾನೆಲ್ಲಿ ನೋಡ್ತೀನಿ? ಎಲೆಕ್ಷನ್ ಡ್ಯೂಟಿಗೆ ಹೋಗುವಾಗ ಸರಿಯಾಗಿ ಅಕೌಂಟ್ಸ್ ನೋಡಿಲ್ಲ. ಅದೊಂದು ತಪ್ಪು ಮಾಡಿದ್ರಿ.
ಪರಶುರಾಮ್: ಅಲ್ಲ ಸರ್. ನಾನು
ಚಂದ್ರಶೇಖರ್ (ಆತ್ಮಹತ್ಯೆ ಮಾಡಿ ಕೊಂಡ ಅಧಿಕಾರಿ)ಗೆ ಹೋಗಿ ಬನ್ನಿ ಅಂತ ಹೇಳಿದೆ. ಈಗ 5 ಕೋಟಿ ಹಾಕಿದ್ದಾರೆ. ಉಳಿದ ಹಣ ಹಾಕಿಬಿಟ್ಟರೆ ಸಮಸ್ಯೆ ಇರಲ್ಲ ಅಲ್ವಾ ಸರ್.
ಪದ್ಮನಾಭ್:ತಪ್ಪುತಪ್ಪೇ ಅಲ್ಲವೇನಯ್ಯ.
ಇದೆಲ್ಲ ಗೊತ್ತಾದರೆ.. ನಮಗೆ ಗೊತ್ತಿ ರೋರೆಲ್ಲ ಇನಾಲ್ ಆಗಿದರಾಲಯ. 
ಪರಶುರಾಮ್: ಹಣ ಬಂದ್ದೇಲೆ
ಸಮಸ್ಯೆಯಾದರೆ ಏನ್ಮಾಡೋದು? ನಾವು ಸುಮ್ಮನಿದ್ದರೆ ಆಯ್ತು ಅಷ್ಟೇ ಅಲ್ವಾ ಸರ್.
ಪದ್ಮನಾಬ್: ನಮ್ಮ ಕೆಲಸ ನಾವು ಮಾಡೋಣ. ಇಲ್ಲವೆಂದರೆ ಜೈಲಿಗೆ ಹೋಗೋಣ.
ಪರಶುರಾಮ್: ಇದರಿಂದ ಹೊರ ಬರೋದು ಹೇಗೆ ಸರ್ ?
ಪದ್ಮನಾಭ್: ನಾನು ಇಡೀ ರಾತ್ರಿ ಕಣ್ಣು ಚಿಲ್ಲ.
ಪರಶುರಾಮ್: ದುಡ್ಡು ಬಂದ್ದೇಲೆ ಏನ್ಮಾಡೋದು ಸರ್?
ಪದ್ಮನಾಭ್: ಫೇಕ್ ಚೆಕ್ ಸೃಷ್ಟಿಸಿ,
ಪೋರ್ಜರಿ ಸಹಿ ಮಾಡಿ ಹಣ ವರ್ಗಾ ವಣೆ ಮಾಡಿದ್ದಾರೆ ಅಂತ ಕ್ರಿಮಿನಲ್ ಕೇಸ್ ಕೊಟ್ಟಿದ್ದಾರೆ. ಸಿಬಿಐನವರು ಬಂದ್ರೆ 2 ವರ್ಷಗಳು ಜೈಲಿನಲ್ಲೇ ಇರ ಬೇಕು. ಲೋಕಲ್ (ರಾಜ್ಯ)
ಪರವಾಗಿಲ್ಲ.
ಪರಶುರಾಮ್: ಸರ್ ಇದರಲ್ಲಿ
ನನ್ನದೇನೂ ಪಾತ್ರವಿಲ್ಲ. ನಿಮ್ಮನ್ನು ನಂಬಿದ್ದೇನೆ. ನಿಮ್ಮ ಕಾಯ್ದಿಡಿದುಕೊಳ್ಳು ತ್ತೇನೆ. ನಿಮ್ಮ ಮಾತಿನ ಮೇಲೆ ನಾನು ಹಣ ವರ್ಗಾವಣೆ ಮಾಡಿಸಿದೆ.
ಪದ್ಮನಾಭ್: ನಿಜ ಇದರಲ್ಲಿ ಎರಡು ಮಾತಿಲ್ಲ. ನನ್ನ ವಿಶ್ವಾಸದ ಮೇಲೆ ಇದೆಲ್ಲ ಮಾಡಿದೆ.
ಪರಶುರಾಮ್: ನನ್ನ ಫ್ಯಾಮಿಲಿ ಸೂಸೈಡ್ ಮಾಡಿಕೊಳ್ಳುತ್ತಾರೆ ಸರ್.
ಪದ್ಮನಾಬ್: ನಾನು ನನ್ನ ಹೆಂಡ್ತಿನಾ
ಮಂತ್ರಾಲಯಕ್ಕೆ ಕಳುಹಿಸಿದ್ದೇನೆ. ಇಡೀ ರಾತ್ರಿ ನಿದ್ದೆ ಮ ನಿದ್ದೆ ಮಾಡಿಲ್ಲ. ನನ್ನದು ಸ್ವಾರ್ಥ ವಿಲ್ಲ. ನಿನ್ನದು ಸ್ವಾರ್ಥವಿಲ್ಲ, ಅವು (ನೆಕ್ಕುಂಟೆ ನಾಗರಾಜ್) ಹೇಳಿದ್ರು ಮಾಡಿದ್ದೀವಿ. ಸಣ್ಣಪುಟ್ಟ ಕೊಟ್ಟಿದ್ದಾರೆ.
ಪರಶುರಾಮ್: ನೀವು ನಮ್ಮ ಜೊತೆ ಇರಬೇಕು ಸರ್.
ಪದ್ಮನಾಭ್: ನಾನು ಇರುತ್ತೇನೆ. ನನಗೆ
'ಯಾರೂ ಲಾಯರ್ ಇರುತ್ತಾರೋ ಅವರೇ ನಿನಗೂ ಹೆದರಬೇಡ. ಇರುತ್ತಾರೆ.
ಪರಶುರಾಮ್‌: ಅದಕ್ಕೆ ಸರ್ ನಾವಿ
ಬ್ಬರು ಛೇರ್ಮನ್ (ಬಸನಗೌಡ ದದ್ದಲ್) ಅವರ ಹತ್ತಿರ ಹೋಗಿ ಮಾತಾಡೋಣ.
ಪದ್ಮನಾಭ್: ಅದಕ್ಕೆ ನಾನು ಬೆಳಗ್ಗೆ
ಹೋಗಿದ್ದೆ. ಅವರಿಗೆ (ಬಸನಗೌಡ ದದ್ದಲ್) ವಿಶ್ ಮಾಡಿ ಬಂದೆ. ಸುನೀಲ್
ಅಲ್ಲೇ ಇದ್ದ.
ಪರಶುರಾಮ್: ಸುನೀಲ್ ಹೇಳಿದ್ದರೆ ಅವರು ಕೇಳುತ್ತಾರೆ ಅಷ್ಟೇ.
ಪದ್ಮನಾಭ್: ಹೌದು ಸುನೀಲ್
ಹೇಳಿದ್ದನ್ನಷ್ಟೇ ಕೇಳುತ್ತಾರೆ. ಅಡಿಟರ್ ಬರ್ತಾರಂತೆ ಅವರ ಜತೆ ಮಾತನಾಡಿ. ಟೆಂಪ್ಟಾಗಬೇಡಿ. ಕೂಲ್ ಆಗಿರೀ. ನಡೀರಿ ಹೋಗೋಣ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!