ಒಂದು ನಾನಿರ್ಬೇಕು, ಇಲ್ಲ ನೀವಿರ್ಬೇಕು: ಸಿಎಂ ಬೊಮ್ಮಾಯಿಗೆ ವಾಲ್ಮೀಕಿ ಶ್ರೀ ಎಚ್ಚರಿಕೆ

By Suvarna NewsFirst Published Oct 5, 2021, 5:07 PM IST
Highlights

* ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬೆನ್ನಲ್ಲೆ ಸಿಡಿದೆದ್ದ ಮತ್ತೊಂದು ಸಮುದಾಯ
* ಬೊಮ್ಮಾಯಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನೆ
* ಶುರುವಾಯ್ತು ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕಿಚ್ಚು

ದಾವಣಗೆರೆ, (ಅ.04): ಪಂಚಮಸಾಲಿ 2ಎ ಮೀಸಲಾತಿ(Reservation) ಹೋರಾಟ ಬೆನ್ನಲ್ಲೆ ಸರ್ಕಾರಕ್ಕೆ ಮತ್ತೊಂದು ಮೀಸಲಾತಿ ತಲೆ ಬಿಸಿ ಶುರುವಾಗಿದ್ದು, ಬೊಮ್ಮಾಯಿ ಸರ್ಕಾರಕ್ಕೆ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ (Prasanna Nanda Puri Swamiji) ಖಡಕ್ ಎಚ್ಚರಿಕೆಯನ್ನ ಸಹ ನೀಡಿದ್ದಾರೆ. 

ದಾವಣಗೆರೆ (Davanagere) ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ 'ಜನ ಜಾಗೃತಿಗಾಗಿ ಜನ ಸ್ಪಂದನ' ಕಾರ್ಯಕ್ರಮದಲ್ಲಿ ಇಂದು (ಅ.04) ಮಾತನಾಡಿದ ಶ್ರೀಗಳು,  ಇದೇ ತಿಂಗಳು 20ರ ಒಳಗಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು. ಇಲ್ಲವಾದಲ್ಲಿ ನಾನು ಹೋರಾಟದ ನಿರ್ಧಾರ ಪ್ರಕಟ ಮಾಡಿದ್ರೆ ಒಂದು ನಾನಿರಬೇಕು. ಇಲ್ಲ, ನೀವು ಇರಬೇಕು. ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಎಚ್ಚರಿಕೆ ನೀಡಿದರು.

 ಇಂದಿಗೆ ಡೆಡ್‌ಲೈನ್‌ ಅಂತ್ಯ: ಸಿಎಂ ಬೊಮ್ಮಾಯಿ ಭೇಟಿಯಾದ ಜಯಮೃತ್ಯುಂಜಯ ಸ್ವಾಮೀಜಿ

ಹೋರಾಟದ ಅಂತಿಮ ನಿರ್ಧಾರ ಪ್ರಕಟಿಸುವುದ್ರೊಳಗೆ ಸಮುದಾಯಕ್ಕೆ ಮೀಸಲಾತಿ ಸಂದೇಶ ಕೊಟ್ಟರೆ ಕೃತಜ್ಞತೆ ಸಲ್ಲಿಸುತ್ತೇವೆ. ಇಲ್ಲವಾದರೆ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಗುಡುಗಿದರು. 

 ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಕೊನೆ ಅಸ್ತ್ರ ಡು ಆರ್ ಡೈ ಪ್ರಯೋಗಿಸಿದ್ರು. ನಮ್ಮ ಸಹನೆಗೂ ಒಂದು ಮಿತಿಯಿದೆ. ನಾವು ನೂಕಿದರೆ ನೀವು ಎಲ್ಲಿ ಬೀಳ್ತಿರೋ ಗೊತ್ತಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಸಮುದಾಯದ ಮೀಸಲಾತಿ ಕಿಚ್ಚನ್ನು ಬೊಮ್ಮಾಯಿ ಕೊಂಚ ತಣ್ಣಗಾಗಿಸಿದ ಬಳಿಕ ಇದೀಗ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕಿಚ್ಚು ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬಹು ದಿನಗಳಿಂದ ಈ ಬೇಡಿಕೆ ಇದೆ. ಆದ್ರೆ, ಇದೀಗ ಸಿಎಂ ಇದರಿಂದ ಹೇಗೆ ಪಾರಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. 

click me!