ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ: ಅಂತಿಮವಾಗಿ CM ಸಭೆಯಲ್ಲಿ ಏನಾಯ್ತು..?

By Suvarna News  |  First Published Jan 6, 2020, 9:49 PM IST

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕೂಗು ರಾಜ್ಯದಲ್ಲಿ ಮತ್ತಷ್ಟು ಜೋರಾಗಿದ್ದು, ಇಂದು [ಸೋಮವಾರ] ಸಿಎಂ ಯಡಿಯೂರಪ್ಪ ಜೊತೆ ವಾಲ್ಮೀಕಿ ಸಮುದಾಯದ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿತು. ಹಾಗಾದ್ರೆ ಸಭೆಯಲ್ಲಿ ಏನೆಲ್ಲ ಆಯ್ತು ಎನ್ನುವ ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, [ಜ.06]: ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ನಿರಂತರ ಹೋರಾಟ ನಡೆದ್ರೂ, ಮೀಸಲಾತಿ ಪ್ರಮಾಣ ಮಾತ್ರ ಹೆಚ್ಚಳವಾಗಿಲ್ಲ.  3 ಪರ್ಸೆಂಟ್ ಇರೋ ಮೀಸಲಾತಿಯನ್ನ 7.5 ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ಸಹ ಕೊಟ್ಟಿದ್ದರು. 

ಹೀಗಾಗಿ ಇಂದು [ಸೋಮವರ]ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

Tap to resize

Latest Videos

ಹರಪನಹಳ್ಳಿ: ವಾಲ್ಮೀಕಿ ಜಾತ್ರೆಯೊಳಗೆ ಐದು ಬೇಡಿಕೆ ಈಡೇರಲಿ

 ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು, ಸಂಸದರು ಪಕ್ಷಾತೀತವಾಗಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. 

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬರಲು ಇನ್ನು 4 ತಿಂಗಳು ಬಾಕಿ ಇದ್ದು, ವರದಿ ಬಂದ ಬಳಿಕ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. 

'ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡದಿದ್ದರೆ 15 ಶಾಸಕರ ರಾಜೀನಾಮೆ'

ಇದಕ್ಕೆ ಸಹ ವ್ಯಕ್ತಪಡಿಸಿದ ನಿಯೋಗ, ನಾಗಮೋಹನ್ ದಾಸ್ ವರದಿಗಾಗಿ ವಾಲ್ಮೀಕಿ ಸಮುದಾಯ ಕಾಯ್ತಿದ್ದು, ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು. ಇಲ್ಲವಾದರೇ ಕಠಿಣ ನಿರ್ಧಾರದ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 ಇನ್ನು ಸಭೆ ಬಳಿಕ ಮಾತನ್ನಾಡಿದ ಸಚಿವ ಬಿ. ಶ್ರೀರಾಮಲು, ಮೀಸಲಾತಿ ವಿಚಾರವಾಗಿ ಸಿಎಂ ಸಕಾರಾತ್ಮಕವಾಗಿ ಸ್ಪಂಸಿದ್ದಾರೆಂದು ತಿಳಿಸಿದರು.

ಬೈ ಎಲೆಕ್ಷನ್ ಬಳಿಕ ಸಿಎಂ ಸಭೆಯಲ್ಲಿ ಮುಖಾಮುಖಿಯಾದ ಸಹೋದರರು

ಮುಖ ನೋಡದೇ ಕುಳಿತ ಸಾಹುಕಾರ್ ಸಹೋದರರು
ವಾಲ್ಮೀಕಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಇಂದು ನಡೆದ ಸಭೆಯಲ್ಲಿ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಸಚಿವ ಶ್ರೀರಾಮಲು ಸೇರಿದಂತೆ ಎಲ್ಲಾ ವಾಲ್ಮಿಕಿ ಸಮುದಾಯದ ಜನಪ್ರತಿನಿಧಿಗಳು ಆಗಮಿಸಿದ್ರು. ಸಿಎಂ ಸಭೆಯಲ್ಲಿ ಜಾರಕಿಹೊಳಿ ಸಹೋದರರರು ಮುಖಾಮುಖಿಯಾದ್ರೂ, ಪರಸ್ಪರ ಮುಖ ನೋಡದೇ ಕುಳಿತಿದ್ದರು.

click me!