ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ

Published : Jul 22, 2023, 07:17 PM IST
ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ,  ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯ ನಡುವೆಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಾಶಯ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿ ಈ ವರ್ಷ ಭರ್ತಿಯಾದ ಜಲಾಶಯ ಎಂಬ ಖ್ಯಾತಿಗೆ ಒಳಗಾಗಿದೆ.

ಉತ್ತರಕನ್ನಡ (ಜು.22): ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟಟಿದ್ದು, ಕಳೆದೊಂದು ವಾರದಿಂದ ಮಾತ್ರ ಮಳೆ ಅಬ್ಬರಿಸಿದೆ. ಆದರೆ, ರಾಜ್ಯದ ಯಾವೊಂದೂ ಜಲಾಶಯಗಳು ಭರ್ತಿಯಾಗಿಲ್ಲ ಎಂಬ ಕೊರಗು ಕಾಡುತ್ತಿತ್ತು. ಇದರ ಬೆನ್ನಲ್ಲಿಯೇ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕದ್ರಾ ಜಲಾಶಯವು ಈ ವರ್ಷದ ಮಳೆಯಿಂದಾಗಿ ಭರ್ತಿಯಾದ ಮೊಟ್ಟ ಮೊದಲ ಜಲಾಶಯವಾಗಿದೆ. 

ದಾಂಡೇಲಿ, ಜೊಯಿಡಾ, ಯಲ್ಲಾಪುರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಕನ್ನಡ ಜಿಲ್ಲೆಯ ಕದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ರಾತ್ರಿ ನೀರನ್ನು ನದಿಗೆ ಬಿಡಲಾಗಿದೆ. ನದಿ ದಂಡೆಯ ಜನರಿಗೆ ಸುರಕ್ಷತೆತೆಗೆ ಕಾಳಜಿ ವಹಿಸಲಾಗುತ್ತಿದೆ. ಸುಫಾ ಅಣೆಕಟ್ಟಿಗೆ 35,712.849 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕದ್ರಾ ಅಣೆಕಟ್ಟಿನ ಹಿನ್ನೀರು ಪುದೇಶಕ್ಕೆ 26605 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ. ಕಾರಣ ಯಾವುದೇ ಕ್ಷಣದಲ್ಲಿ ಮತ್ತಷ್ಟು ಗೇಟ್ ತೆಗೆದು ನೀರು ಹೊರಬಿಡುವ ಸಾಧ್ಯತೆಯಿದೆ. 

ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..

ಕದ್ರಾ ಜಲಾಶಯದ ಗರಿಷ್ಠ ಮಟ್ಟ ತಲುಪಿದ ನೀರು:  ಕದ್ರಾ ಜಲಾಶಯದಿಂದ 5,000ಕ್ಕೂಸೆಕ್‌ ನೀರನ್ನು ಕಾಳಿ ನದಿಗೆ ಹರಿ ಬಿಡಲಾಗಿದೆ. ಕಾರವಾರ ತಾಲೂಕಿನ ಕದ್ರಾ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕದ್ರಾ ಜಲಾಶಯ 34.50 ಗರಿಷ್ಠ ಮಟ್ಟವನ್ನು ಹೊಂದಿದೆ. ಈಗಾಗಲೆ 31 ಮೀಟರ್ ವರೆಗೆ ಅಣಿಕಟ್ಟು, ಭರ್ತಿಯಾಗಿದೆ. ಈ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹ ಮಾಡದಂತೆ ಜಿಲ್ಲಾಡಳಿತ ಕೆಪಿಸಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಜೊತೆಗೆ, ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ ಜಲಾಶಯದಿಂದ ಕಾಳಿ ನದಿಗೆ ಹರಿಬಿಡಲಾಗಿದೆ. ಇನ್ನೂ ಜಲಾಶಯದಿಂದ ನೀರನ್ನ ಹೊರ ಬಿಟ್ಟ ಕಾರಣ ಕದ್ರಾ ಜಲಾಶಯ ವ್ಯಾಪ್ತಿಯ ನಿವಾಸಿಗಳು ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಳೆ ಹೆಚ್ಚಾದಲ್ಲಿ ಮತ್ತಷ್ಟು ಗೇಟ್‌ಗಳನ್ನು ಎತ್ತಲು ತೀರ್ಮಾನ:  ಇನ್ನು ಜಿಲ್ಲೆಯ ದಾಂಡೇಲಿಯಲ್ಲಿ 62 ಮಿಲಿ ಮೀಟರ್, ಹಳಿಯಾಳದಲ್ಲಿ 52.2, ಯಲ್ಲಾಪುರದಲ್ಲಿ 97.6, ಸಿದ್ಧಾಪುರ 98.2. ಶಿರಸಿ 82.5, ಜೊಯಿಡಾದಲ್ಲಿ 80.2, ಕದ್ರಾದಲ್ಲಿ 115, ಕೊಡಸಳ್ಳಿಯಲ್ಲಿ 96.8 ಮಿಲಿ ಮೀಟರ್ ಮಳೆಯಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಮಳೆ ತಗ್ಗಿದೆ. ಘಟ್ಟದ ತಾಲೂಕಿನಲ್ಲಿ ಮಳೆ ಬೀಳುತ್ತಲೇ ಇದೆ. ಜಿಲ್ಲೆಯ ನದಿಗಳು ತುಂಬಿ ತುಳುಕುತ್ತಿವೆ. ಜೊತೆಗೆ ಮಳೆ ಪುಮಾಣ ಇನ್ನೂ ಹೆಚ್ಚುತ್ತಾ ಹೋದಲ್ಲಿ ಕದ್ರಾ ಜಲಾಶಯದ ಇನ್ನಷ್ಟು ಗೇಟ್ ಗಳ ಮೂಲಕ ನೀರನ್ನು ಹೊರಬಿಡುವ ಸಾಧ್ಯತೆಯಿದೆ.

ಶಾಸಕ ಸತೀಶ್‌ ಸೈಲ್‌ ಬಾಗಿನ ಅರ್ಪಣೆ: ಇನ್ನು ರಾಜ್ಯದಲ್ಲಿ ಈ ವರ್ಷ ಭರ್ತಿಯಾದ ಮೊಟ್ಟ ಮೊದಲ ಜಲಾಶಯವಾದ ಹಿನ್ನೆಲೆಯಲ್ಲಿ ಕಾರವಾರ‌- ಅಂಕೋಲಾ‌ ಶಾಸಕ ಸತೀಶ್‌ ಸೈಲ್ ಅವರು ಕದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಜೊತೆಗೆ, ಕದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಲೇ ಇದ್ದು, ಪ್ರವಾಹ ಪರಿಸ್ಥಿತಿ ‌ಎದುರಾದರೆ ಜನರ ರಕ್ಷಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. 10 ಜನರ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕದಳ ಈಗಾಗಲೇ ಕಾರವಾರದಲ್ಲಿ ಕಾರ್ಯನಿರ್ವಹಿಸ್ತಿದೆ. 2000 ಜನರು ತಂಗಲು ಸಹಾಯವಾಗುವಂತೆ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕದ್ರಾ ವ್ಯಾಪ್ತಿಯಲ್ಲಿ ಜನರ ರಕ್ಷಣೆಗಾಗಿ 5 ಬೋಟ್‌ಗಳನ್ನು ಕೂಡಾ ತಯಾರುಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

ಇನ್ನು ರಾಜ್ಯದಲ್ಲಿ ಕಳೆದೊಂದು ವಾರದಿಂದ ಮಳೆ ಚುರುಕುಗೊಂಡಿದ್ದು, ಜಲಾಶಯಗಳಲ್ಲಿ ದೊಡ್ಡ ದೊಡ್ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿಗೆ ಇದ್ದ ಆತಂಕ ದೂರವಾಗಿದೆ. ಆದರೆ, ಕೃಷಿ ಮತ್ತು ಇತರೆ ಕಾರ್ಯಗಳಿಗೆ ನೀರನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಎಲ್ಲ ಕೊರತೆಯೂ ನೀಗಲಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವ ಇಲ್ಲಿದೆ..

1. ಕೆಆರ್​ಎಸ್​ ಜಲಾಶಯ
ಗರಿಷ್ಠ ನೀರಿನ ಮಟ್ಟ - 124.80 ಅಡಿ
ಇಂದಿನ ನೀರಿನ ಮಟ್ಟ- 90.1 ಅಡಿ
ಕಳೆದ ವರ್ಷದ ನೀರಿನ ಮಟ್ಟ - 124.8 
ಒಳಹರಿವು - 1863 ಕ್ಯೂಸೆಕ್‌ 
ಹೊರಹರಿವು - 401 ಕ್ಯೂಸೆಕ್‌

2. ಆಲಮಟ್ಟಿ ಜಲಾಶಯ 
ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌
ಇಂದಿನ ನೀರಿನ ಮಟ್ಟ - 37.55 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ- 95.20 ಟಿಎಂಸಿ
ಒಳಹರಿವು- 70780 ಕ್ಯೂಸೆಕ್‌
ಹೊರಹರಿವು - 561 ಕ್ಯೂಸೆಕ್‌ 

3. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 
ಇಂದಿನ ನೀರಿನ ಮಟ್ಟ- 13.77
ಕಳೆದ ವರ್ಷದ ನೀರಿನ ಮಟ್ಟ - 100.72
ಒಳಹರಿವು - 13340 ಕ್ಯೂಸೆಕ್‌ 
ಹೊರಹರಿವು - 135 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.8
ಇಂದಿನ ನೀರಿನ ಮಟ್ಟ - 8.69
ಕಳೆದ ವರ್ಷದ ನೀರಿನ ಮಟ್ಟ - 23.81
ಒಳಹರಿವು - 7509 ಕ್ಯೂಸೆಕ್‌
ಹೊರಹರಿವು - 194 ಕ್ಯೂಸೆಕ್‌ 

5. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44
ಇಂದಿನ ನೀರಿನ ಮಟ್ಟ - 32.81
ಕಳೆದ ವರ್ಷದ ನೀರಿನ ಮಟ್ಟ - 89.47
ಒಳಹರಿವು - 43043 ಕ್ಯೂಸೆಕ್‌ 
ಹೊರಹರಿವು - 1157 ಕ್ಯೂಸೆಕ್‌ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!